'ದಿ ವಿಲನ್' - 'ದಿ ಟೆರರಿಸ್ಟ್' ಮುಖಾಮುಖಿ : ಇದು ಕಾಂಪಿಟೇಶನ್ ಅಲ್ಲ ಎಂದ ರಾಗಿಣಿ

Recommended Video

TheVillain : ದಿ ವಿಲನ್ ಬಗ್ಗೆ ರಾಗಿಣಿ ಹೇಳಿದ್ದು ಏನು..!? | Oneindia Kannada

ಅಕ್ಟೋಬರ್ 18 ಕನ್ನಡ ಸಿನಿ ಪ್ರೇಮಿಗಳ ಮನಸ್ಸಿನಲ್ಲಿ ಕೂತು ಬಿಟ್ಟಿದೆ. ಕಾರಣ ಆ ದಿನ 'ದಿ ವಿಲನ್' ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ. ಆದರೆ, ಈ ಚಿತ್ರದ ದಿನವೇ 'ದಿ ಟೆರರಿಸ್ಟ್' ಕೂಡ ತೆರೆಗೆ ಬರುತ್ತಿದೆ.

'ದಿ ವಿಲನ್' - 'ದಿ ಟೆರರಿಸ್ಟ್' ಮುಖಾಮುಖಿ ಒಂದು ಮಟ್ಟಕ್ಕೆ ಕುತೂಹಲ ಹುಟ್ಟಿಸಿದೆ. 'ದಿ ವಿಲನ್' ಚಿತ್ರದ ದಿನವೇ ಸಿನಿಮಾ ಬಿಡುಗಡೆ ಮಾಡುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ. ಆದರೆ, ಈಗ 'ದಿ ಟೆರರಿಸ್ಟ್' ಸಿನಿಮಾ ಸ್ಪರ್ಧೆಗೆ ಸಿದ್ಧವಾಗಿದೆ.

'ದಿ ಟೆರರಿಸ್ಟ್' ಬಿಡುಗಡೆಯ ದಿನಾಂಕ ಕೇಳಿದ ಕೂಡಲೇ ಅನೇಕರು ಆಶ್ಚರ್ಯ ವ್ಯಕ್ತ ಪಡಿಸಿದರು. ಅಂದಹಾಗೆ, ಇದೀಗ ಈ ಬಗ್ಗೆ ನಟಿ ರಾಗಿಣಿ ದ್ವಿವೇದಿ ಕೂಡ ಮಾತನಾಡಿದ್ದಾರೆ. ಮುಂದೆ ಓದಿ...

ಪಾಸಿಟಿವ್ ಆಗಿ ಯೋಚನೆ ಮಾಡಿದ್ದೇವೆ

ಪಾಸಿಟಿವ್ ಆಗಿ ಯೋಚನೆ ಮಾಡಿದ್ದೇವೆ

''ದಿ ವಿಲನ್' ಹಾಗೂ 'ದಿ ಟೆರರಿಸ್ಟ್' ಎರಡು ಸಿನಿಮಾ ಒಟ್ಟಿಗೆ ಬರುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಎಲ್ಲವೂ ಆಗುವುದು ಒಂದು ಕಾರಣಕ್ಕೆ ಆಗುತ್ತದೆ. ಪಾಸಿಟಿವ್ ಆಗಿ ಯೋಚನೆ ಮಾಡಿ ಈ ಸಿನಿಮಾವನ್ನು ಅಕ್ಟೋಬರ್ 18 ರಂದು ಬಿಡುಗಡೆ ಮಾಡುತ್ತಿದ್ದೇವೆ. ನಾನು ಈ ಚಿತ್ರದ ಬಗ್ಗೆ ತುಂಬ ಉತ್ಸುಕಳಾಗಿದ್ದೇನೆ.'' - ರಾಗಿಣಿ ದ್ವಿವೇದಿ, ನಟಿ

ದೊಡ್ಡ ರೆಸ್ಪಾನ್ಸ್ ಬಂದಿದೆ

ದೊಡ್ಡ ರೆಸ್ಪಾನ್ಸ್ ಬಂದಿದೆ

''ನಮಗೆ ಎಲ್ಲ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಹಿಂದಿ ಸೇರಿದಂತೆ ಬೇರೆ ಭಾಷೆಯ ಡಬ್ಬಿಂಗ್ ರೈಟ್ಸ್, ಸೆಟಲೈಟ್ ರೈಟ್ಸ್, ಆಡಿಯೋ ಎಲ್ಲದಕ್ಕೆ ದೊಡ್ಡ ರೆಸ್ಪಾನ್ಸ್ ಬಂದಿದೆ. ಪ್ರೇಕ್ಷಕರ ಕಡೆಯಿಂದ ನನ್ನ ಪಾತ್ರದ ಮೇಲೆ ಮತ್ತು ಸಿನಿಮಾದ ಮೇಲೆ ಪ್ರೀತಿ ಸಿಗುತ್ತಿದೆ ಎನ್ನುವ ಭರವಸೆ ಇದೆ.'' - ರಾಗಿಣಿ ದ್ವಿವೇದಿ, ನಟಿ

ಕಾಂಪಿಟೇಶನ್ ಗಿಂತ ಕನ್ನಡ ಸಿನಿಮಾ ಬೆಳೆಯುತ್ತಿದೆ

ಕಾಂಪಿಟೇಶನ್ ಗಿಂತ ಕನ್ನಡ ಸಿನಿಮಾ ಬೆಳೆಯುತ್ತಿದೆ

''ನಾವೆಲ್ಲರೂ ಒಂದೇ ಇಂಡಸ್ಟ್ರಿಯಲ್ಲಿ ಇದ್ದುಕೊಂಡು 'ಕನ್ನಡ ಸಿನಿಮಾ' ಮಾಡುತ್ತಿದ್ದೇವೆ. ಇಲ್ಲಿ ಕಾಂಪಿಟೇಶನ್ ಎನ್ನುವುದಕ್ಕಿಂತ ಕನ್ನಡ ಸಿನಿಮಾ ಬೆಳೆಯುತ್ತಿದೆ. ಒಳ್ಳೆಯ ಸಿನಿಮಾಗಳು ಬಂದರೆ ಚಿತ್ರರಂಗ ಬೆಳೆಯುತ್ತದೆ, ಚಿತ್ರರಂಗ ಬೆಳೆದರೆ ಎಲ್ಲರಿಗೂ ಒಳ್ಳೆಯ ಹೆಸರು ಬರುತ್ತದೆ. ಆ ಉದ್ದೇಶದಿಂದ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇವೆ.'' - ರಾಗಿಣಿ ದ್ವಿವೇದಿ, ನಟಿ

ಎರಡೂ ಚಿತ್ರಗಳನ್ನು ನೋಡಿ

ಎರಡೂ ಚಿತ್ರಗಳನ್ನು ನೋಡಿ

''ನಾಲ್ಕು ದಿನ ರಜೆ ಇರುವ ಕಾರಣ ಎಲ್ಲರೂ ಸಿನಿಮಾ ನೋಡಿ. ಅವರ ಸಿನಿಮಾ ಇವರ ಸಿನಿಮಾ ಎನ್ನುವುದಕ್ಕಿಂತ ಎರಡೂ ಚಿತ್ರವನ್ನು ನೋಡಿ. ಈಗ ಕನ್ನಡ ಸಿನಿಮಾದ ಟ್ರೆಂಡ್ ಚೆನ್ನಾಗಿದೆ. ಒಳ್ಳೆಯ ಕಥೆಯ ಸಿನಿಮಾವನ್ನು ಜನ ನೋಡುತ್ತಿದ್ದಾರೆ. ನಮ್ಮ ಕಥೆ ಕೂಡ ಎಲ್ಲರಿಗೆ ಇಷ್ಟ ಆಗುತ್ತದೆ.'' - ರಾಗಿಣಿ ದ್ವಿವೇದಿ, ನಟಿ

'ದಿ ಟೆರರಿಸ್ಟ್' ಚಿತ್ರದ ಬಗ್ಗೆ

'ದಿ ಟೆರರಿಸ್ಟ್' ಚಿತ್ರದ ಬಗ್ಗೆ

'ದಿ ಟೆರರಿಸ್ಟ್' ನಟಿ ರಾಗಿಣಿ ಅಭಿನಯದ ಹೊಸ ಸಿನಿಮಾವಾಗಿದೆ. ಪಿ ಸಿ ಶೇಖರ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಟೆರರಿಸಂ ಬಗ್ಗೆ ಈ ಚಿತ್ರದ ಕಥೆ ಇದೆ. ಪತ್ರಕರ್ತರು ಹಾಗೂ ರಂಗಭೂಮಿ ಕಲಾವಿದರಾದ ಪದ್ಮಾ ಶಿವಮೊಗ್ಗ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
No competition between 'The Villain' and 'The Terrorist' movie says kannada actress Ragini Dwivedi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X