For Quick Alerts
  ALLOW NOTIFICATIONS  
  For Daily Alerts

  ಈ ಚಿತ್ರದಲ್ಲಿ ರವಿಚಂದ್ರನ್ ಅವ್ರಿಗೆ ಹಾಡು, ಹೀರೋಯಿನ್ ಎರಡೂ ಇಲ್ಲ

  By Naveen
  |
  ರವಿಚಂದ್ರನ್ ಮೇಲೆ ರಿವೆಂಜ್ ತೀರಿಸಿಕೊಂಡ ಓಂ ಪ್ರಕಾಶ್..! | Filmibeat Kannada

  ನಟ ರವಿಚಂದ್ರನ್ ಸಿನಿಮಾ ಎಂದ ತಕ್ಷಣ ಹಾಡುಗಳು ನೆನಪಾಗುತ್ತದೆ. ಆ ಹಾಡಿನಲ್ಲಿ ಅವರ ಜೊತೆಗೆ ಕುಣಿಯುವ ನಟಿಯರು ಕಣ್ಣು ಮುಂದೆ ಬರುತ್ತಾರೆ. ಆದರೆ, ಸದ್ಯ ರವಿಚಂದ್ರನ್ ನಟಿಸುತ್ತಿರುವ ಸಿನಿಮಾದಲ್ಲಿ ಅವರಿಗೆ ಹಾಡು ಮತ್ತು ನಟಿಯರು ಎರಡೂ ಇಲ್ಲ.

  ಹೌದು, ರವಿಚಂದ್ರನ್ ಇದೀಗ 'ರವಿಚಂದ್ರ' ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ನಾಯಕರಾಗಿದ್ದು, ಅವರ ಅಣ್ಣನ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರು ಕೂಡ ಉಪ್ಪಿಯ ಜೋಡಿಯಾಗಿದ್ದಾರೆ.

  ಉಪೇಂದ್ರ - ರವಿಚಂದ್ರನ್ ಕಾಂಬಿನೇಶನ್ ಚಿತ್ರಕ್ಕೆ ಈಕೆಯೇ ನಾಯಕಿ! ಉಪೇಂದ್ರ - ರವಿಚಂದ್ರನ್ ಕಾಂಬಿನೇಶನ್ ಚಿತ್ರಕ್ಕೆ ಈಕೆಯೇ ನಾಯಕಿ!

  ಈ ಸಿನಿಮಾ ತೆಲುಗಿನ 'ಬಲುಪು' ಚಿತ್ರದ ರಿಮೇಕ್ ಆಗಿದೆ. ಅಲ್ಲಿ ಇದ್ದ ಅಪ್ಪ - ಮಗನ ಪಾತ್ರವನ್ನು ಇಲ್ಲಿ ಅಣ್ಣ - ತಮ್ಮನಾಗಿ ಬದಲು ಮಾಡಿಕೊಂಡಿದ್ದಾರೆ. ಓಂ ಪ್ರಕಾಶ್ ರಾವ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಆರ್ ಎಸ್ ಪ್ರೋಡಕ್ಷನ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬರುತ್ತಿದೆ.

  ರಿಯಲ್ ಸ್ಟಾರ್ ಮತ್ತು ಕ್ರೇಜಿ ಸ್ಟಾರ್ ಸೇರಿ ಹೊಸ ಮಲ್ಟಿಸ್ಟಾರ್ ಸಿನಿಮಾ!ರಿಯಲ್ ಸ್ಟಾರ್ ಮತ್ತು ಕ್ರೇಜಿ ಸ್ಟಾರ್ ಸೇರಿ ಹೊಸ ಮಲ್ಟಿಸ್ಟಾರ್ ಸಿನಿಮಾ!

  ಇತ್ತೀಚಿಗಷ್ಟೆ ಸಿನಿಮಾದ ಮುಹೂರ್ತ ನಡೆದಿದೆ. ಚಿತ್ರದಲ್ಲಿ ಶಾನ್ವಿ ಶ್ರೀವತ್ಸವ ಹಾಗೂ ನಿಮಿಕಾ ರತ್ನಕರ್ ನಾಯಕಿಯರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

  English summary
  no heroines for Ravichandran in 'Ravichandra' kannada movie The movie is directing by Om Prakash Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X