»   » ನಿರ್ಮಾಪಕ/ನಿರ್ದೇಶಕರ ವಿರುದ್ಧ ರಚಿತಾ ರಾಮ್ ಕೆಂಗಣ್ಣು

ನಿರ್ಮಾಪಕ/ನಿರ್ದೇಶಕರ ವಿರುದ್ಧ ರಚಿತಾ ರಾಮ್ ಕೆಂಗಣ್ಣು

Posted By:
Subscribe to Filmibeat Kannada

ಧಾರಾವಾಹಿಗಳಲ್ಲಿ ಮಿಂಚುತ್ತಿದ್ದ ಬೆಂಗಳೂರಿನ ಬೊಂಬೆ ರಚಿತಾ ರಾಮ್ ಇಂದು ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಾಯಕಿ. 'ಬುಲ್ ಬುಲ್' ಚಿತ್ರದ ಸೂಪರ್ ಸಕ್ಸಸ್ ನಂತ್ರ 'ಬುಲ್ ಬುಲ್' ರಚಿತಾ ಅಂತ್ಲೇ ಜನಪ್ರಿಯರಾಗಿರುವ ರಚಿತಾ ರಾಮ್, ಈಗ 'ರನ್ನ' ಚಿತ್ರದ ಮೂಲಕ ಪ್ರೇಕ್ಷಕರ ಮನಕದಿಯಲು ಸಜ್ಜಾಗುತ್ತಿದ್ದಾರೆ.

ಇದೇ ವಾರ ಕಿಚ್ಚ ಸುದೀಪ್ ಅಭಿನಯದ 'ರನ್ನ' ರಿಲೀಸ್ ಆಗುತ್ತಿದೆ. ಈ ವೇಳೆ ಕನ್ನಡ ಚಿತ್ರರಂಗದ ಕೆಲ ನಿರ್ಮಾಪಕ ಮತ್ತು ನಿರ್ದೇಶಕರುಗಳ ವಿರುದ್ಧ ನಟಿ ರಚಿತಾ ರಾಮ್ ಗರಂ ಆಗಿದ್ದಾರೆ. ಪರಭಾಷಾ ನಟಿಯರಿಗೆ ಮಣೆ ಹಾಕುವ ನಿರ್ಮಾಪಕರ ವಿರುದ್ಧ ಪ್ರತಿಭಟಿಸುವುದಕ್ಕೂ ಸಿದ್ಧ 'ಬುಲ್ ಬುಲ್' ಬೆಡಗಿ ಹೇಳಿದ್ದಾರೆ. ['ರನ್ನ' ಚಿತ್ರದ ಟೆಂಪರೇಚರ್ ಏರಿಸುತ್ತಿರುವ ಸೀರೆ ಹಾಡು]


no-importance-to-kannada-heroines-rachita-ram-angry

ಜನಪ್ರಿಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ರಚಿತಾ ರಾಮ್, ''ಕನ್ನಡ ನಟಿಯರಿಗೆ ಪ್ರಾಮುಖ್ಯತೆ ಸಿಗುತ್ತಿಲ್ಲ. ಈ ಬಗ್ಗೆ ನಾನು ತುಂಬಾ ಅಪ್ ಸೆಟ್ ಆಗಿದ್ದೀನಿ. ಪರಭಾಷಾ ನಟಿಯರನ್ನೇ ಹಾಕಿಕೊಂಡು ಸಿನಿಮಾ ಮಾಡಬೇಕು ಅನ್ನುವ ಕೆಲ ನಿರ್ಮಾಪಕರು ಮತ್ತು ನಿರ್ದೇಶಕರುಗಳು ಇದ್ದಾರೆ. ಹೀಗೆ ಯಾಕೆ ಮಾಡ್ತಾರೆ ಅಂತ ನಂಗಂತೂ ಅರ್ಥ ಆಗಲ್ಲ'' ['ರನ್ನ' ಚಿತ್ರದ ರಂಗೀನ್ ಬುಲ್ ಬುಲ್ ಚಿತ್ರಗಳು]


no-importance-to-kannada-heroines-rachita-ram-angry

''ಕನ್ನಡ ನಟಿಯರಲ್ಲಿ ಪ್ರತಿಭೆ ಇದೆ. ಚೆನ್ನಾಗಿ ನಟಿಸುವುದರ ಜೊತೆಗೆ ಡ್ಯಾನ್ಸ್ ಕೂಡ ಕಲಿತಿರುತ್ತಾರೆ. ಭಾಷೆ ಗೊತ್ತಿರುವ ಕಾರಣ ಭಾವನೆಗಳನ್ನ ಹೊರಹಾಕುವುದು ಸುಲಭ. ಇಂಥವರನ್ನ ಬಿಟ್ಟು ಪರಭಾಷಾ ನಟಿಯರಿಗೆ ಮಣೆ ಹಾಕುವ ನಿರ್ಮಾಪಕ/ನಿರ್ದೇಶಕರನ್ನ ಕಂಡರೆ ನಂಗಾಗೋಲ್ಲ. ಈ ವಿಚಾರವಾಗಿ ನಾನು ಪ್ರತಿಭಟಿಸೋಕು ಸಿದ್ಧ. ಗ್ಲಾಮರ್ ಕ್ಕಿಂತ ಪರ್ಫಾಮೆನ್ಸ್ ಮುಖ್ಯ'' ಅಂತ ಸಂದರ್ಶನದಲ್ಲಿ ರಚಿತಾ ರಾಮ್ ಹೇಳಿದ್ದಾರೆ. (ಏಜೆನ್ಸೀಸ್)

English summary
Kannada Actress Rachita Ram, who is expecting success with 'Ranna', has shared her experience with the leading daily. Ironically, Rachita is angry with those film makers who doesn't give importance to Kannada Heroines.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada