ಮಂಜುಳಾ ಜೊತೆ ಬದುಕುವ ಪ್ರಮೇಯವೇ ಇಲ್ಲ
ಶ್ರುತಿ ಅವರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಪ್ರೀತಿ ಇದೆ, ಕಾಳಜಿ ಇದೆ. ನಾನು ಅವರನ್ನು ತುಂಬಾ ಅಭಿಮಾನಿಸುತ್ತೇನೆ. ಮುಂದೆಯೂ ಹಾಗೆಯೇ ಇರುತ್ತದೆ. ಅದಕ್ಯಾರು ಸ್ಟೇ ಆರ್ಡರ್ ತರುವುದಕ್ಕೆ ಆಗಲ್ಲ. ಅದನ್ನು ಯಾರು ಅಸಿಂಧುಗೊಳಿಸಿ ಎಂದು ಭಾರತ ಸಂವಿಧಾನದಲ್ಲಿ ಹೇಳಲಿಕ್ಕಾಗಲ್ಲ ಎಂದು ಅಂದುಕೊಂಡಿದ್ದೇನೆ.
ಶ್ರುತಿ ಅವರ ಗೌರವಕ್ಕೆ ಚುತಿ ಬಂದಿದೆ. ನನ್ನಿಂದ ಅವರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ವೈಯಕ್ತಿವಾಗಿ, ಮಾನಸಿಕವಾಗಿ, ದೈಹಿಕವಾಗಿ ಅವರಿಂದ ತುಂಬ ದೂರವಾಗಿದ್ದೇನೆ. ಬೌತಿಕವಾಗಿ ಮಾತ್ರ ಅವರಿಗೆ ಹತ್ತಿರವಾಗಿದ್ದೇನೆ. ನನ್ನ ಮನಸ್ಸಿನಿಂದ ಅವರನ್ನು ಆಚೆ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಮಂಜುಳಾ ಜೊತೆ ಬದುಕುವ ಪ್ರಮೇಯವೇ ಇಲ್ಲ. ಅದು ಸಾಧ್ಯವೂ ಇಲ್ಲ.

ಮಗಳ ವಿಚಾರದಲ್ಲಿ ಒಬ್ಬ ತಂದೆಯಾಗಿ ಯಾವ ರೀತಿ ನಡೆದುಕೊಳ್ಳಬೇಕೋ ಹಾಗೆ ಈ ಕ್ಷಣದವರೆಗೂ ನಡೆದುಕೊಂಡಿದ್ದೇನೆ. ಮುಂದೆಯೂ ನಡೆದುಕೊಳ್ಳುತ್ತೇನೆ. ಅದರ ಬಗ್ಗೆ ಎರಡನೇ ಮಾತಿಲ್ಲ, ಎರಡನೇ ಪ್ರಶ್ನೆಯೂ ಇಲ್ಲ. ಇನ್ನು ಮಂಜುಳಾ ಅವರ ಹೋರಾಟದ ಬಗ್ಗೆ ನಾನು ಏನೂ ಹೇಳಲಿಕ್ಕಾಗಲ್ಲ. ಏಕೆಂದರೆ ಸಂವಿಧಾನದ ಪ್ರಕಾರ ಅವರಿಗೆ ಹಕ್ಕಿದೆ.
ಈಗ ಏಳು ಎಂಟು ವರ್ಷಗಳ ಬಳಿಕ ನನಗೆ ನನ್ನ ಗಂಡ ಬೇಕು ಎಂಬ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಅದಕ್ಕೇನು ನ್ಯಾಯಾಲಯದಲ್ಲಿ ಉತ್ತರ ಕೊಡಬೇಕೋ ಖಂಡಿತ ಕೊಡುತ್ತೇನೆ.
ನನ್ನಿಂದ ಶ್ರುತಿ ಅವರಿಗೆ ತೊಂದರೆಯಾಯಿತು, ನೋವಾಯಿತು, ಅವಮಾನವಾಯಿತು ಎಂಬ ಕಾರಣಕ್ಕೆ ನಾನು ಅವರಿಂದ ದೂರವಾಗಿ ಒಂಟಿಯಾಗಿ ಬದುಕುತ್ತಿದ್ದೇನೆ. ಶ್ರುತಿ ಅವರ ಮೇಲಿನ ಅಪಾರ ಗೌರವ, ಅಭಿಮಾನದ ಕಾರಣ ನಾನು ಈ ಕೆಲಸವನ್ನು ಮಾಡಿದ್ದೇನೆ. ಮಂಜುಳಾ ಜೊತೆಗೆ ಬದುಕ ಬೇಕೆ ಬೇಡವೆ ಎಂಬ ಬಗ್ಗೆ ನನ್ನದೇ ಆದಂತಹ ವೈಯಕ್ತಿಯ ಅಭಿಪ್ರಾಯಗಳಿವೆ.
ಮಂಜುಳಾ ಅವರ ಬಾಳಲ್ಲಿ ಆದ ಘಟನೆಗಳಿಗೆ ಅವರೇ ಕಾರಣ. ಅವರ ನಡವಳಿಕೆಗಳಿಂದಲೇ ಇಷ್ಟೆಲ್ಲಾ ಆಗಿದ್ದು. ಅವರು ಮಾಡಿಕೊಂಡಿದ್ದೇ ಇದು. ಧರ್ಮಪರಿಪಾಲನೆಗೆ ಅವರು ನೋವು ತಿನ್ನಲೇಬೇಕು. ಇದು ನನ್ನಿಂದ ಆದದ್ದಲ್ಲ. ಸರಿ ಮಾಡಿಕೊಳ್ಳಲು ತುಂಬಾ ಸಲ ಪ್ರಯತ್ನಿಸಿದೆ. ಉದ್ದಟವಾದ ರೀತಿಯಲ್ಲಿ ವರ್ತಿಸಿದರು. ಅದಕ್ಕೆ ಅವರು ಇಂದು ಫಲ ತಿಂತಾ ಇದ್ದಾರೆ. ನನ್ನಿಂದ ಮಂಜುಳಾ ಅವರಿಗೆ ಅನ್ಯಾಯವಾಗಿಲ್ಲ. ಅನ್ಯಾಯವಾಗಿರುವುದು ಶ್ರುತಿ ಅವರಿಗೆ.


Click it and Unblock the Notifications











