'ದಂಡುಪಾಳ್ಯ 2' ಗ್ಯಾಂಗ್ ಗಿದ್ದ ದೊಡ್ಡ ಗಂಡಾಂತರ ತಪ್ತು

By Suneetha

ನಿರ್ದೇಶಕ ಶ್ರೀನಿವಾಸ ರಾಜು ಆಕ್ಷನ್-ಕಟ್ ಹೇಳುತ್ತಿರುವ 'ದಂಡುಪಾಳ್ಯ 2' ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇತ್ತು. ಇತ್ತೀಚೆಗೆ 'ದಂಡುಪಾಳ್ಯ 2' ಚಿತ್ರದ ಶೂಟಿಂಗ್ ಗೆ ಮಧ್ಯಂತರ ತಡೆಕೋರಿ ಜೈಲಿನಲ್ಲಿದ್ದ 6 ಕೈದಿಗಳು ಅರ್ಜಿ ಸಲ್ಲಿಸಿದ್ದರು. ಇದರ ಪರಿಣಾಮವಾಗಿ ಶೂಟಿಂಗ್ ಅರ್ಧಕ್ಕೆ ನಿಂತು ಹೋಗಿತ್ತು.

ಇದೀಗ 'ದಂಡುಪಾಳ್ಯ 2' ಚಿತ್ರದ ವಿರುದ್ಧ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾ ಮಾಡಿರುವ ನ್ಯಾಯಾಲಯ ವಾದ-ವಿವಾದಗಳನ್ನು ಆಲಿಸಿ ಕೊನೆಗೂ ಚಿತ್ರ ನಿರ್ಮಾಣ ಹಾಗೂ ಪ್ರದರ್ಶನ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ.[ಅಸಹ್ಯ ಹುಟ್ಟಿಸುವ 'ದಂಡುಪಾಳ್ಯ 2'ರ ಚಿತ್ರಗಳು, ಛೀ!]

No Interim stay for Kannada Movie 'Dandupalya 2'

ಇನ್ನು ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿರುವ 'ದಂಡುಪಾಳ್ಯ' ಖೈದಿಗಳು ತಮ್ಮ ಪರ ವಕೀಲರ ಮೂಲಕ ಬೆಂಗಳೂರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಚಿತ್ರದಲ್ಲಿ ತಮ್ಮ ಪಾತ್ರಗಳನ್ನು ತೀರಾ ಕ್ರೂರವಾಗಿ ಮತ್ತು ಅವಮಾನಕರವಾಗಿ ತೋರಿಸುವ ಸಾಧ್ಯತೆ ಇರುವುದರಿಂದ ಚಿತ್ರದ ನಿರ್ಮಾಣ ಹಾಗೂ ಪ್ರದರ್ಶನಕ್ಕೆ ಅಡ್ಡಿಪಡಿಸಿ ಮಧ್ಯಂತರ ತಡೆಯಾಜ್ಞೆ ಕೋರಿದ್ದರು.[ಆರಂಭದಲ್ಲೇ ವಿಘ್ನ: 'ದಂಡುಪಾಳ್ಯ 2' ಚಿತ್ರಕ್ಕೆ ಕೋರ್ಟ್ ನೋಟಿಸ್]

No Interim stay for Kannada Movie 'Dandupalya 2'

ಆದರೆ ಅದಕ್ಕೆ ಪ್ರತಿಯಾಗಿ ಚಿತ್ರತಂಡದ ಪರ ವಕೀಲರಾದ ರವಿಶಂಕರ್ ಅವರು ವಾದ ಮಂಡಿಸಿ, 'ಕೋಟಿಗಟ್ಟಲೆ ದುಡ್ಡು ಸುರಿದು, ಸಾಮಾಜಿಕ ಕಳಕಳಿಯಿಂದ ಈ ಚಿತ್ರ ನಿರ್ಮಾಣ ಮಾಡುತ್ತಿರುವುದರಿಂದ ಇದಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು' ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.

ಚಿತ್ರತಂಡದವರ ವಾದ ಪರಿಗಣಿಸಿದ ನ್ಯಾಯಾಲಯವು, ಚಿತ್ರೀಕರಣ ಮತ್ತು ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ಕೊಡುವ ಮೂಲಕ ಎಲ್ಲಾ ಗಂಡಾಂತರಗಳಿಂದ 'ದಂಡುಪಾಳ್ಯ 2' ಚಿತ್ರವನ್ನು ಪಾರು ಮಾಡಿದೆ.['ದಂಡುಪಾಳ್ಯ' ಗ್ಯಾಂಗ್ ನಲ್ಲಿ ಪತ್ತೆಯಾದ ಸಂಜನಾ ಗಲ್ರಾನಿ]

No Interim stay for Kannada Movie 'Dandupalya 2'

ಅಂತೂ ಎಲ್ಲಾ ಸಮಸ್ಯೆಗಳು ನೀರು ಕುಡಿದಷ್ಟು ಸುಲಭವಾಗಿ ಪರಿಹಾರ ಆಗಿದ್ದಕ್ಕೆ ನಿರ್ದೇಶಕರು ಹಾಗೂ ಇಡೀ ಚಿತ್ರತಂಡದವರು ಉಸ್ಸಪ್ಪಾ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

More from Filmibeat

English summary
Bangalore civil court dismissed stays shooting of kannada movie 'Dandupalya 2'. Kannada Actress Pooja Gandhi, Kannada Actress Sanjjanaa Galrani, Actor Makarand Deshpande in the lead role. The movie is directed by Srinivas Raju.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X