twitter
    For Quick Alerts
    ALLOW NOTIFICATIONS  
    For Daily Alerts

    ಮುಂದಿನವಾರ ತೆರೆ ಕಾಣಬೇಕಿದ್ದ ಸಿನಿಮಾಗಳಿಗೆ ತಡೆ

    By Pavithra
    |

    UFO ಮತ್ತು cube ಸಂಸ್ಥೆಯ ದುಬಾರಿ ಶುಲ್ಕದಿಂದಾಗಿ ಬೇಸತ್ತಿರುವ ನಿರ್ಮಾಪಕರುಗಳು ಮುಂದಿನ ವಾರದಿಂದ ಸಿನಿಮಾಗಳನ್ನ ಬಿಡುಗಡೆ ಮಾಡದಂತೆ ನಿರ್ಧಾರ ಮಾಡಿದ್ದಾರೆ. ಮಾರ್ಚ್ 2 ರಿಂದಲೇ ಚಿತ್ರಗಳನ್ನ ರಿಲೀಸ್ ಮಾಡದಂತೆ ನೋಡಿಕೊಳ್ಳುವುದಾಗಿ ಮೊದಲು ತೀರ್ಮಾನ ಮಾಡಲಾಗಿತ್ತು ಆದರೆ ಈಗಾಗಲೇ ಅನೌನ್ಸ್ ಮಾಡಿರುವ ಸಿನಿಮಾಗಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಅನೌನ್ಸ್ ಆಗಿದ್ದ ಚಿತ್ರಗಳು ನಿನ್ನೆ (ಮಾರ್ಚ್ 2)ರಂದು ಬಿಡುಗಡೆ ಮಾಡಲಾಯ್ತು.

    ಈ ಬಗ್ಗೆ ಇಂದು (ಮಾರ್ಚ್ 3) ತುರ್ತು ಸುದ್ದಿ ಗೋಷ್ಠಿಯನ್ನ ಕರೆಯಲಾಗಿತ್ತು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಾರಾ ಗೋವಿಂದು ಸಮಸ್ಯೆ ಸರಿ ಹೋಗುವ ವರೆಗೂ ಮುಂದಿನ ವಾರದಿಂದ ಯಾವುದೇ ಚಿತ್ರಗಳನ್ನ ಬಿಡುಗಡೆ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ಮಾರ್ಚ್ 2 ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಇಲ್ಲ ಮಾರ್ಚ್ 2 ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಇಲ್ಲ

    UFO ಮತ್ತು cube ಡಿಜಿಟಲ್‌ ಸರ್ವಿಸ್ ಪ್ರೊವೈಡರ್ ಸಂಸ್ಥೆ ವಿರುದ್ಧ ಇಡೀ ಸೌತ್ ಚಿತ್ರರಂಗದ ನಿರ್ಮಾಪಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದೇ ಕಾರಣದಿಂದ ಮಾರ್ಚ್ 9 ರಂದು ಬಿಡುಗಡೆ ಆಗಬೇಕಿದ್ದ ಸಿನಿಮಾಗಳನ್ನ ತಡೆ ಹಿಡಿಯಲಾಗಿದೆ.

    No Kannada Films will be released from March 9th

    UFO ಮತ್ತು cube ಸಂಸ್ಥೆ ಅವರು ಶೇಖಡ 25 ರಷ್ಟು ಶುಲ್ಕ ಕಡಿಮೆ ಮಾಡುವವರೆಗೂ ನಾವು ಸೌತ್ ಚಿತ್ರರಂಗದಿಂದ ಯಾವುದೇ ಕಟೆಂಟ್ ಕೊಡಬಾರದು ಎಂದು ನಿರ್ಧಾರ ಮಾಡಲಾಗಿದೆ. ಕರ್ನಾಟಕ ಚಿತ್ರರಂಗದ ಜೊತೆಯಲ್ಲಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಾಂಡಿಚೆರಿ ಸಿನಿಮಾರಂಗದವರು ಸಮ್ಮತ ಸೂಚಿಸಿ ಒಟ್ಟಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ.

    ಹೀಗಾಗಿ ಮುಂದಿನ ವಾರ ತೆರೆಕಾಣಬೇಕಿದ್ದ ಯೋಗಿ ದುನಿಯಾ, ಇದಂ ಪ್ರೇಮಂ ಜೀವಂ, ನಂಜುಂಡಿ ಕಲ್ಯಾಣ, ಓ ಪ್ರೇಮವೇ, ಶ್ರೀ, ಹೀಗೊಂದು ದಿನ, ಮುಖ್ಯ ಮಂತ್ರಿ ಕಳದೋದ್ನಪ್ಪೊ, ಸೋಜಿಗ ಎಲ್ಲವು ಸ್ಥಗಿತ ಗೊಂಡಿದೆ.

    ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್

    ಸೂರಿ, ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ್ದ ನಿರ್ದೇಶಕ ಶಿವ ನಿಧನಸೂರಿ, ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ್ದ ನಿರ್ದೇಶಕ ಶಿವ ನಿಧನ

    English summary
    South indian film chamber of commerce is most likely to strike from March 9th, condemning the high rental prices of QUBE and UFO. Now, it has been officially confirmed through a press statement from TFPC.
    Saturday, March 3, 2018, 13:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X