ಅಪ್ಪಿ ತಪ್ಪಿ ಮರೆತು ನಾಳೆ ಚಿತ್ರಮಂದಿರದ ಕಡೆ ಹೋಗ್ಬೇಡಿ.!
Recommended Video

ನಾಳೆ ಶುಕ್ರವಾರ.....ಯಾವುದಾದರೂ ಹೊಸ ಸಿನಿಮಾ ಬಿಡುಗಡೆಯಾಗಿರುತ್ತೆ ಎಂದು ಚಿತ್ರಮಂದಿರದ ಕಡೆ ಹೋದ್ರೆ ನಿಮಗೆ ನಿರಾಸೆಯಾಗುವುದು ಪಕ್ಕಾ. ಯಾಕಂದ್ರೆ, ಸಂಪ್ರದಾಯದಂತೆ ಈ ಶುಕ್ರವಾರ ಯಾವ ಕನ್ನಡ ಸಿನಿಮಾನೂ ರಿಲೀಸ್ ಆಗಲ್ಲ. ಕನ್ನಡ ಸಿನಿಮಾ ಮಾತ್ರವಲ್ಲ, ದಕ್ಷಿಣ ಭಾರತದ ಯಾವುದೇ ಚಿತ್ರಗಳು ಕೂಡ ಈ ವಾರ ಚಿತ್ರಮಂದಿರಕ್ಕೆ ಲಗ್ಗೆಯಿಡಲ್ಲ.
ಯುಎಫ್ಓ ಕ್ಯೂಬ್ ಮತ್ತು digital service provider ಸಂಸ್ಥೆಯ ವಿರುದ್ಧ ದಕ್ಷಿಣ ಭಾರತ ನಿರ್ಮಾಪಕರು ಪ್ರತಿಭಟನೆ ಮಾಡುತ್ತಿದ್ದು, ಬಾಡಿಗೆ ಮೊತ್ತ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಇಂದು ಚಿತ್ರ ಪ್ರದರ್ಶನ ಬಂದ್ ಮಾಡಲಾಗಿದೆ. ಮಾರ್ಚ್ 10 ರಿಂದ ಎಂದಿನಂತೆ ಈಗಾಗಲೇ ತೆರೆಕಂಡಿರೋ ಚಿತ್ರಗಳ ಪ್ರದರ್ಶನ ಮುಂದುವರಿಕೆಯಾಗಲಿದೆ.
ಸದ್ಯ ಪ್ರದರ್ಶನವಾಗುತ್ತಿರುವ ಸಿನಿಮಾಗಳು ಕೂಡ ನಾಳೆ ಪ್ರದರ್ಶನವಾಗುವುದಿಲ್ಲ. ಕರ್ನಾಟಕದಲ್ಲಿ ಒಂದು ದಿನದ ಮಟ್ಟಿಗೆ ಮಾತ್ರ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಇನ್ನು ಈಗಾಗಲೇ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಪರಭಾಷೆಯ ಚಿತ್ರಗಳಿಗೆ ಯಾವುದು ಸಮಸ್ಯೆಯಿಲ್ಲ. ಅವುಗಳು ಎಂದಿನಂತೆ ಪ್ರದರ್ಶನವಾಗಲಿದೆ. ಆದ್ರೆ, ತೆಲುಗು ಮತ್ತು ತಮಿಳುನಾಡಿನಲ್ಲಿ ದೀರ್ಘಕಾಲದ ಬಂದ್ ಗೆ ನಿರ್ಧರಿಸಲಾಗಿದೆ.

ಕಳೆದ ಮೂರು ತಿಂಗಳಿಂದ ufo ಮತ್ತು cubes ವೆಚ್ಚ ದುಬಾರಿಯಾಗ್ತಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಪಾಂಡಿಚೇರಿ ರಾಜ್ಯಗಳ ನಿರ್ಮಾಪಕರು ಅವರಿಗೆ ಸಹಕಾರ ನೀಡಲ್ಲ. ನಾವು 25ರಷ್ಟು ಕಡಿಮೆ ಮಾಡುವಂತೆ ಹೇಳಿದ್ವಿ. ಆದ್ರೆ ಅವರು 9 ಪರ್ಸೆಂಟ್ ಕಡಿಮೆ ಮಾಡ್ತೀವಿ ಎನ್ನುತ್ತಿದ್ದಾರೆ. ಹೀಗಾಗಿ ಪರ್ಯಾಯ ಮಾರ್ಗ ಹುಡುಕಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.


Click it and Unblock the Notifications











