ವಿಲನ್ ಎಫೆಕ್ಟ್ : ಈ ಶುಕ್ರವಾರ ಯಾವ ಚಿತ್ರಕ್ಕೂ ಇಲ್ಲ ಬಿಡುಗಡೆಯ ಭಾಗ್ಯ
Recommended Video

TheVillain : ಈ ವಾರ ಯಾವ ಸಿನಿಮಾನೂ ಬಿಡುಗಡೆ ಆಗಲ್ಲ..! | FILMIBEAT KANNADA
ಇತ್ತೀಚಿಗಿನ ಕೆಲ ವಾರಗಳ ಹಿಂದೆ ಶುಕ್ರವಾರ ಬಂದರೆ ಸಾಕು ಗಾಂಧಿನಗರದಲ್ಲಿ ಜಾತ್ರೆ ಶುರುವಾಗುತ್ತಿತ್ತು. ಒಂದೇ ವಾರಕ್ಕೆ ಏಳು, ಎಂಟು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಆದರೆ, ಇಂದು ಮಾತ್ರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ.
ಈ ಶುಕ್ರವಾರ ಹೊಸ ಸಿನಿಮಾ ನೋಡಬೇಕು ಎಂದವರಿಗೆ ನಿರಾಸೆ ಮೂಡಿದೆ. ಈ ವಾರ ಕನ್ನಡದ ಯಾವುದೇ ಸಿನಿಮಾಗಳು ಕೂಡ ಬಿಡುಗಡೆಯಾಗುತ್ತಿಲ್ಲ. ಇದ್ದಕ್ಕಿದ್ದ ಹಾಗೆ ಹೀಗ್ಯಾಕೆ ಆಯ್ತು ಎನ್ನುವ ಪ್ರಶ್ನೆಗೆ 'ದಿ ವಿಲನ್' ಸಿನಿಮಾದ ಅಬ್ಬರ ಇರಬಹುದು ಎಂಬ ಉತ್ತರ ಬರುತ್ತದೆ.
'ದಿ ವಿಲನ್' ಸಿನಿಮಾ ಮುಂದಿನ ಗುರುವಾರ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. 'ದಿ ವಿಲನ್' ಅಲೆಯಲ್ಲಿ ಕೊಚ್ಚಿ ಹೋಗುವುದು ಬೇಡ ಎಂಬ ಕಾರಣಕ್ಕೆ ಈ ವಾರವೇ ಯಾವ ಸಿನಿಮಾ ಕೂಡ ಬಿಡುಗಡೆಯಾಗುವ ಧೈರ್ಯ ಮಾಡಿಲ್ಲ.

ನಿನ್ನೆಯಿಂದ 'ದಿ ವಿಲನ್' ಚಿತ್ರದ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ವಿಶೇಷ ಅಂದರೆ, 'ದಿ ಟೆರರಿಸ್ಟ್' ಚಿತ್ರದ 'ದಿ ವಿಲನ್' ರಿಲೀಸ್ ಆಗುವ ದಿನವೇ ತೆರೆಗೆ ಬರುತ್ತಿದ್ದು, ಅಚ್ಚರಿ ಮೂಡಿಸಿದೆ.
English summary
'The Villain' effect : No kannada movies has released this friday.


Click it and Unblock the Notifications