ನನ್ನ ಉಸಿರು ಇರೋವರೆಗೂ ದರ್ಶನ್ ನನ್ನ ಮಗನೇ - ಸುಮಲತಾ ಅಂಬರೀಷ್...!

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ನಡವಳಿಕೆಗೆ ಹೆಸರಾದವರು. ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆಯ ದರ್ಶನ್ ಎರಡನೇ ಬಾರಿ ಜೈಲು ಸೇರಿದಾಗ ಅನೇಕರು ಜೈಲಿಗೆ ತೆರಳಿ ದರ್ಶನ ಪಡೆದು ಬಂದರು. ಆದರೆ. ದರ್ಶನ್ ಅವರ ಮದರ್ ಇಂಡಿಯಾ ಸುಮಲತಾ ಮಾತ್ರ ಜೈಲಿನ ಸುತ್ತ ಮುತ್ತ ಕಾಣಿಸಲಿಲ್ಲ. ಮಗನ ಮುಖ ನೋಡಲು ಕೂಡ ಬರಲಿಲ್ಲ. ಈ ಕಾರಣಕ್ಕೆ ಅನೇಕರು ಸುಮಲತಾ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಎಲ್ಲರಂತೆ ಸುಮಲತಾ ಕೂಡ ದರ್ಶನ್ ಅವರನ್ನು ಉಪಯೋಗಿಸಿಕೊಂಡರು ಎಂದು ಮಾತನಾಡಿದ್ದರು.

ಇಂಥಾ ಸುಮಲತಾ ಈಗ ದರ್ಶನ್ ಕುರಿತು ಮಾತನಾಡಿದ್ದಾರೆ. ದರ್ಶನ್ ಯಾವತ್ತು ಇದ್ದರೂ ನನ್ನ ಮಗನೇ ಎಂದು ಹೇಳಿದ್ದಾರೆ. ಈ ಕುರಿತು ಮಂಡ್ಯದಲ್ಲಿ ಮಾತನಾಡಿರುವ ಸುಮಲತಾ, ದರ್ಶನ್ ಕೈಯಲ್ಲಿ ಫೋನ್ ಇಲ್ಲ ಈ ಕಾರಣಕ್ಕೆ ವಿಜಯಲಕ್ಷ್ಮಿ ಜೊತೆ ಮಾತನಾಡಿಯೇ ವಿಚಾರವನ್ನು ನಾವು ತಿಳಿದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ದರ್ಶನ್ ಜೈಲಿನಲ್ಲಿರುವಾಗ ಅಭಿ ಹೋಗಿ ಮಾತನಾಡಿಸಿಕೊಂಡು ಬಂದಿದ್ದ ಎಂದಿರುವ ಸುಮಲತಾ ಸದ್ಯ ದರ್ಶನ್ ಕೂಡ ಈ ಪ್ರಕರಣದ ಕುರಿತು ಯಾರ ಜೊತೆ ಮಾತನಾಡುವಂತೆ ಇಲ್ಲ ಹೀಗಾಗಿ ನಾವು ಈ ಪ್ರಕರಣದ ಬಗ್ಗೆ ಹೆಚ್ಚೇನು ಮಾತನಾಡುವುದಿಲ್ಲ ಎಂದಿದ್ದಾರೆ.

no-matter-what-darshan-will-always-be-my-son-says-sumalatha-ambareesh

ನಾನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ ಎಂದು ಹೇಳಿರುವ ಸುಮಲತಾ, ದರ್ಶನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಜೊತೆ ಸಂಪರ್ಕದಲ್ಲಿದ್ದರೂ ಕೂಡ ಸುಮಲತಾ ಅವರಿಗೆ ದರ್ಶನ್‌ಹೆ ಸರ್ಜರಿಯ ಅಗತ್ಯ ಇದೆ ಎನ್ನುವ ವಿಚಾರವನ್ನು ವಿಜಯಲಕ್ಷ್ಮಿ ಹೇಳಿರಲಿಕ್ಕಿಲ್ಲ. ಯಾಕೆಂದರೆ ದರ್ಶನ್ ಅವರಿಗೆ ಸರ್ಜರಿ ಮಾಡಬೇಕೆನ್ನುವ ವಿಚಾರವನ್ನು ಸುಮಲತಾ ಹೀಗೆ ಬೇರೆಯವರಿಂದ ಕೇಳ್ಪಟ್ಟಿರುವುದಾಗಿ ಹೇಳಿದ್ದಾರೆ. ಸರ್ಜರಿ ಮಾಡಿಸಿಕೊಂಡರೆ ವಾಸಿ ಆಗಲು ತುಂಬಾ ಸಮಯ ಬೇಕಾಗುತ್ತೆ ಎಂದು ಕೂಡ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಇನ್ನೂ ನಮ್ಮ ಸಂಬಂಧ ಹಿಂದೆ ಹೇಗಿತ್ತೋ ಹಾಗೇ ಇರುತ್ತದೆ ಎಂದಿರುವ ಸುಮಲತಾ ನನ್ನ ಜೀವ ಇರೋವರೆಗೂ ದರ್ಶನ್ ನನ್ನ ಮಗನೇ ಎಂದಿದ್ದಾರೆ. ನಾನು ಎಂದಿಗೂ ದರ್ಶನ್ ಪರ ಎಂದು ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಒಳ್ಳೆಯದಾಗಬೇಕು. ನಿಜಾಂಶ ಏನು ಎನ್ನುವುದು ಹೊರಗಡೆ ಬರಬೇಕು ಎಂದಿರುವ ಸುಮಲತಾ ದರ್ಶನ್ ನಿರಪರಾಧಿ ಅನ್ನೋದು ಸಾಬೀತಾಗಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದ್ದಾರೆ. ಎಲ್ಲಾ ಸಮಸ್ಯೆಗಳಿಂದ ದರ್ಶನ್ ಹೊರಬರುತ್ತಾರೆ ಅನ್ನೋ ನಂಬಿಕೆ ಕೂಡ ನನಗೆ ಇದೆ ಎಂದಿರುವ ಸುಮಲತಾ ಅಂಬರೀಷ್ ಮುಂದಿನ ದಿನಗಳಲ್ಲಿ ದರ್ಶನ್ ಪರ ವಕೀಲರು ನಿಜಾಂಶ ಸಾಬೀತುಪಡಿಸುತ್ತಾರೆ ಎಂದು ಹೇಳಿದ್ದಾರೆ.

ಮುಂದುವರೆದು ಮಧ್ಯಂತರ ಜಾಮೀನು ಬಗ್ಗೆ ನನಗೂ ತುಂಬಾ ಆಳವಾಗಿ ಗೊತ್ತಿಲ್ಲ ಎಂದಿರುವ ಸುಮಲತಾ ಅಂಬರೀಷ್, ದರ್ಶನ್ ಜಾಮೀನಾಗಿ ತುಂಬಾ ಪ್ರಯತ್ನ ಮಾಡುತ್ತಿದ್ದಾರೆ, ಈ ಸಮಯದಲ್ಲಿ ನಾವು ಅವರಿಗೆ ಬೆಂಬಲವನ್ನು ನೀಡಬಹುದಷ್ಟೇ ಅದನ್ನು ಹೊರತು ಪಡಿಸಿ ನಮ್ಮಿಂದ ಏನು ಮಾಡಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ದರ್ಶನ್‌ಗೆ ಒಳ್ಳೆಯದಾಗಬೇಕೆಂದು ಪುನರುಚ್ಚಿಸಿದ್ದಾರೆ.

ಇನ್ನೂ ದರ್ಶನ್ ವರ್ಷಕ್ಕೆ ಎರಡು ಚಿತ್ರಗಳನ್ನು ಮಾಡುವ ಸ್ಟಾರ್. ಇಂತಹ ಹೀರೋ ಜೈಲಿನಲ್ಲಿದ್ದರೆ ಸಹಜವಾಗಿ ಚಿತ್ರರಂಗಕ್ಕೆ ನಷ್ಟ. ಈ ಕುರಿತು ಕೂಡ ಮಾತನಾಡಿರುವ ಸುಮಲತಾ ಅಂಬರೀಷ್, ದರ್ಶನ್ ಕನ್ನಡ ಚಿತ್ರರಂಗದ ಆಧಾರಸ್ತಂಭ, ಹೀಗಾಗಿ ದರ್ಶನ್ ಇಲ್ಲದೇ ಎಲ್ಲರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಭಿಮಾನಿಗಳಿಗೆ ನಾವು ಎಲ್ಲ ವಿಷಯವನ್ನು ಅರ್ಥ ಮಾಡಿಸಲು ಆಗಲ್ಲ, ದೊಡ್ಡ ಮಟ್ಟದಲ್ಲಿರುವ ಹೀರೋನ ಚಿತ್ರ ಜೀವನ ಇದ್ದಕ್ಕಿದ್ದಂತೆ ನಿಂತು ಹೋದರೆ ಅದರ ಶಿಕ್ಷೆಯನ್ನು ನಿರ್ದೇಶಕರು ನಿರ್ಮಾಪಕರು ಅನುಭವಿಸಬೇಕಾಗುತ್ತೆ ಎಂದು ಹೇಳಿದ್ದಾರೆ ಸುಮಲತಾ ಅಂಬರೀ‍ಷ್.

More from Filmibeat

Read more about: darshan sumalatha sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X