'ಪೈಲ್ವಾನ್' ಚಿತ್ರವನ್ನು ಮಧ್ಯರಾತ್ರಿ ಪ್ರದರ್ಶನ ಮಾಡದಿರಲು ಸುದೀಪ್ ನಿರ್ಧಾರ
Recommended Video
ಬಹು ನಿರೀಕ್ಷಿತ 'ಪೈಲ್ವಾನ್' ಚಿತ್ರ ನಾಳೆ ಬಿಡುಗಡೆ ಆಗುತ್ತದೆ. 'ಪೈಲ್ವಾನ್' ಸಿನಿಮಾದ ಮಿಡ್ ನೈಟ್ ಶೋ ಇರುವುದಿಲ್ಲ ಎಂದು ಸ್ವತಃ ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ.
ದೊಡ್ಡ ಸ್ಟಾರ್ ಗಳ ಸಿನಿಮಾಗಳನ್ನು ಅದಷ್ಟು ಬೇಗ ನೋಡಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿರುತ್ತದೆ. ಅದೇ ಉತ್ಸಾಹದಲ್ಲಿ ಅನೇಕ ಸಿನಿಮಾಗಳು ಮಧ್ಯ ರಾತ್ರಿಯಿಂದಲೇ ಪ್ರದರ್ಶನ ಆಗುತ್ತವೆ. ಆದರೆ, 'ಪೈಲ್ವಾನ್' ಚಿತ್ರದ ಶೋ ಇಂದು ರಾತ್ರಿ ಇರುವುದಿಲ್ಲ.
'ಪೈಲ್ವಾನ್' ತಂಡ ಈ ಬಗ್ಗೆ ಚರ್ಚೆ ಮಾಡಿದ್ದು, ಮಿಡ್ ನೈಟ್ ಶೋ ಬೇಡ ಎಂಬ ತೀರ್ಮಾನಕ್ಕೆ ಬಂದಿದೆ. ಮಧ್ಯರಾತ್ರಿ ಸಿನಿಮಾ ಪ್ರದರ್ಶನ ಮಾಡುವುದು ಸ್ವಲ್ಪ ಅಪಾಯ. ಅಲ್ಲದೆ ಅದಕ್ಕೆ ಪೊಲೀಸರ ಅನುಮತಿ ಕೂಡ ಬೇಕು. ಈ ಕಾರಣಗಳಿಂದ ಮಧ್ಯ ರಾತ್ರಿಯ ಪ್ರದರ್ಶನಗಳು ಇರುವುದಿಲ್ಲ.

ಮಧ್ಯರಾತ್ರಿ ಶೋ ಮಾಡಿ ಸಿನಿಮಾದ ಕ್ರೇಜ್ ತೋರಿಸುವ ಅಗತ್ಯ ಇಲ್ಲ. ಪೊಲೀಸರು ಕೂಡ ಮಧ್ಯರಾತ್ರಿಯ ಪ್ರದರ್ಶನ ಬೇಡ ಎಂಬ ಸೂಚನೆ ನೀಡಿದ್ದಾರೆ ಎಂದು ಸುದೀಪ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವೀರೇಶ್, ಮಹದೇಶ್ವರ, ಚಂದ್ರೋದಯ, ಶ್ರೀನಿವಾಸ, ಸಿದ್ದಲಿಂಗೇಶ್ವರ, ಲಕ್ಷ್ಮಿ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ 5 ಗಂಟೆಗೆ, 6 ಗಂಟೆಗೆ ಪ್ರಾರಂಭ ಆಗುತ್ತಿದೆ.


Click it and Unblock the Notifications











