For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ದುರ್ವರ್ತನೆ: ಇನ್ಮೇಲೆ ದರ್ಶನ್ ಮನೆ ಮುಂದೆ ಬರ್ತಡೇ ಸೆಲೆಬ್ರೇಷನ್ ಕ್ಯಾನ್ಸಲ್.!

  |
  ನಮ್ಮ ಬಳಿಯೂ CC ಕ್ಯಾಮರಾ ಇದೆ ಎಂದು ಫ್ಯಾನ್ಸ್ ಬೆಂಬಲಕ್ಕೆ ನಿಂತ ದರ್ಶನ್

  ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿವಾಸದ ಮುಂದೆ ಇನ್ಮೇಲೆ 'ದಾಸ'ನ ಬರ್ತಡೇ ಸೆಲೆಬ್ರೇಷನ್ ಮಾಡುವ ಹಾಗಿಲ್ಲ. ಮುಂದಿನ ವರ್ಷದಿಂದ ದರ್ಶನ್ ಮನೆ ಮುಂದೆ ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡದಿರಲು ಪೊಲೀಸರು ನಿರ್ಧರಿಸಿದ್ದಾರೆ.

  ಮೊನ್ನೆ ಭಾನುವಾರವಷ್ಟೇ (ಫೆಬ್ರವರಿ 16) ಅಭಿಮಾನಿಗಳ ಜೊತೆಗೆ 'ಚಕ್ರವರ್ತಿ' ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಕೆಲ ಅಭಿಮಾನಿಗಳ ದುರ್ವರ್ತನೆಯಿಂದ ದರ್ಶನ್ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ಕಿರಿಕಿರಿ ಉಂಟಾಗಿತ್ತು. ಜೊತೆಗೆ ಪೊಲೀಸ್ ಕಾನ್ಸ್ ಟೇಬಲ್ ಮೇಲೂ ದರ್ಶನ್ ಅಭಿಮಾನಿಗಳು ಹಲ್ಲೆ ಮಾಡಿದ್ದರು.

  ದರ್ಶನ್ ಬರ್ತಡೇ ಸೆಲೆಬ್ರೇಷನ್ ವಿಚಾರವಾಗಿ ಕಂಪ್ಲೇಂಟ್ ಗಳು ಹೆಚ್ಚಾಗಿ ಕೇಳಿಬಂದಿದೆ. ಹೀಗಾಗಿ, 'ಒಡೆಯ'ನ ಮನೆ ಮುಂದೆ ಜನ್ಮದಿನದ ಆಚರಣೆಗೆ ಬ್ರೇಕ್ ಹಾಕಲು ಹಿರಿಯ ಪೊಲೀಸ್ ಅಧಿಕಾರಿ ನಿರ್ಧರಿಸಿದ್ದಾರೆ. ಮುಂದೆ ಓದಿರಿ...

  ಅಕ್ಕ-ಪಕ್ಕದವರಿಗೆ ನಿದ್ದೆ ಇಲ್ಲ.!

  ಅಕ್ಕ-ಪಕ್ಕದವರಿಗೆ ನಿದ್ದೆ ಇಲ್ಲ.!

  ದರ್ಶನ್ ಹುಟ್ಟುಹಬ್ಬ ಅಂದ್ರೆ ಅಭಿಮಾನಿಗಳಿಗೆ ದೊಡ್ಡ ಹಬ್ಬ ಇರಬಹುದು. ಆದ್ರೆ, ದರ್ಶನ್ ಅಕ್ಕ-ಪಕ್ಕದ ನಿವಾಸಿಗಳಿಗೆ ಮಾತ್ರ ಇದರಿಂದ ತಲೆನೋವು ತಪ್ಪಿದ್ದಲ್ಲ. ಪ್ರತಿ ವರ್ಷ ದರ್ಶನ್ ಬರ್ತಡೇ ಬಂದ್ರೆ, ದರ್ಶನ್ ನೆರೆಮನೆಯವರಿಗೆ ನಿದ್ದೆ ಇರಲ್ಲ. ಯಾಕಂದ್ರೆ, ಅಭಿಮಾನಿಗಳ ಕಿರುಚಾಟ, ರಂಪಾಟ, ಕೂಗಾಟ ಹಾಗಿರುತ್ತದೆ.

  ಕಾರು ಜಖಂ ಮಾಡಿರುವ ಅಭಿಮಾನಿಗಳು

  ಕಾರು ಜಖಂ ಮಾಡಿರುವ ಅಭಿಮಾನಿಗಳು

  ಜನ್ಮದಿನದಂದು ದರ್ಶನ್ ಗೆ ಶುಭ ಕೋರಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾಗ ನೂಕುನುಗ್ಗಲು ಉಂಟಾಗಿದೆ. ಆಗ, ರೋಡಿನಲ್ಲಿ ನಿಲ್ಲಿಸಿದ್ದ ರಾಮಪ್ರಸಾದ್.ಎಂ.ಎಸ್ ರವರಿಗೆ ಸೇರಿದ ಕಾರನ್ನು ಹತ್ತಿ, ಕಾರಿನ ಮೇಲೆಲ್ಲಾ ಗೀಚಿ ಅಭಿಮಾನಿಗಳು ರಂಪಾಟ ಮಾಡಿದ್ರಂತೆ. ಇದರಿಂದ ಬೇಸೆತ್ತ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ನಿವಾಸಿ ರಾಮಪ್ರಸಾದ್.ಎಂ.ಎಸ್ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ. ತಮಗೆ 40 ಸಾವಿರ ರೂಪಾಯಿ ನಷ್ಟ ಉಂಟಾಗಿದೆ ಎಂದು ರಾಮಪ್ರಸಾದ್.ಎಂ.ಎಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ದರ್ಶನ್ ಬರ್ತಡೇ ಕಿರಿಕ್: ಪೊಲೀಸ್ ಠಾಣೆ ಮೆಟ್ಟಿಲೇರಿದ ಅಕ್ಕ-ಪಕ್ಕದ ನಿವಾಸಿಗಳು.!ದರ್ಶನ್ ಬರ್ತಡೇ ಕಿರಿಕ್: ಪೊಲೀಸ್ ಠಾಣೆ ಮೆಟ್ಟಿಲೇರಿದ ಅಕ್ಕ-ಪಕ್ಕದ ನಿವಾಸಿಗಳು.!

  ಕಾನ್ಸ್ ಟೇಬಲ್ ಮೇಲೆ ಗೂಂಡಾಗಿರಿ

  ಕಾನ್ಸ್ ಟೇಬಲ್ ಮೇಲೆ ಗೂಂಡಾಗಿರಿ

  ದರ್ಶನ್ ಹುಟ್ಟುಹಬ್ಬದ ನಿಮಿತ್ತ ಆರ್ ಆರ್ ನಗರದ ಅವರ ಮನೆ ಮುಂದೆ ಜ್ಞಾನಭಾರತಿ ಠಾಣೆಯ ಕಾನ್ಸ್ ಸ್ಟೇಬಲ್ ಡಿ.ಆರ್.ದೇವರಾಜ್ ಅವರನ್ನು ನೇಮಿಸಲಾಗಿತ್ತು. ದೊಡ್ಡ ಸಂಖ್ಯೆ ಅಭಿಮಾನಿಗಳು ಸೇರುತ್ತಿದ್ದಾಗ, ಅದನ್ನ ನಿಭಾಯಿಸಲು ಪೇದೆ ಹರಸಾಹಸ ಪಡುತ್ತಿದ್ದರು. ಈ ವೇಳೆ ಓರ್ವ, ಪೇದೆ ದೇವರಾಜ್ ಮೇಲೆ ಹಲ್ಲೆ ಮಾಡಿದ್ದಾನೆ. ಪೇದೆಯ ಮೂಗು ಮತ್ತು ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದರ್ಶನ್ ಹುಟ್ಟುಹಬ್ಬದ ಆಯೋಜಕರು ಮತ್ತು ಅಭಿಮಾನಿಗಳ ವಿರುದ್ಧ ಪೇದೆ ದೂರು ನೀಡಿದ್ದಾರೆ.

  ದರ್ಶನ್ ಹುಟ್ಟುಹಬ್ಬದ ವೇಳೆ ಪೊಲೀಸ್ ಪೇದೆಗೆ ಹಲ್ಲೆ: ತಡವಾಗಿ ಬೆಳಕಿಗೆ ಬಂದ ಪ್ರಕರಣದರ್ಶನ್ ಹುಟ್ಟುಹಬ್ಬದ ವೇಳೆ ಪೊಲೀಸ್ ಪೇದೆಗೆ ಹಲ್ಲೆ: ತಡವಾಗಿ ಬೆಳಕಿಗೆ ಬಂದ ಪ್ರಕರಣ

  ಎಡವಿದ ಆಯೋಜಕರು

  ಎಡವಿದ ಆಯೋಜಕರು

  ''ದರ್ಶನ್ ಬರ್ತಡೇಯನ್ನ ಸರಿಯಾಗಿ ಆಯೋಜನೆ ಮಾಡುವಲ್ಲಿ ಆಯೋಜಕರು ಎಡವಿದ್ದಾರೆ. ಇದರ ಕುರಿತಾಗಿ ಸಾಕಷ್ಟು ದೂರುಗಳು ಬಂದಿವೆ. ನಾವು ಸಿಸಿಟಿವಿ ಫುಟೇಜ್ ನ ಪರಿಶೀಲನೆ ಮಾಡುತ್ತಿದ್ದೇವೆ'' ಎಂದು ತಿಳಿಸಿದ್ದಾರೆ ಪಶ್ಚಿಮ ವಲಯದ ಡಿಸಿಪಿ ರಮೇಶ್.ಬಿ. ಜೊತೆಗೆ ಮುಂದಿನ ವರ್ಷದಿಂದ ದರ್ಶನ್ ಮನೆ ಮುಂದೆ ಪಬ್ಲಿಕ್ ಸೆಲೆಬ್ರೇಷನ್ ಗೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

  ಪಬ್ಲಿಕ್ ಗ್ರೌಂಡ್ ನಲ್ಲಿ ಸೆಲೆಬ್ರೇಷನ್ ಮಾಡಲಿ

  ಪಬ್ಲಿಕ್ ಗ್ರೌಂಡ್ ನಲ್ಲಿ ಸೆಲೆಬ್ರೇಷನ್ ಮಾಡಲಿ

  ಕಳೆದ ಎರಡು ವರ್ಷಗಳಿಂದ ದರ್ಶನ್ ನಿವಾಸದ ಮುಂದೆಯೇ ಸೆಲೆಬ್ರೇಷನ್ ಮಾಡಲು ಆಯೋಜಕರು ಪರ್ಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಆದ್ರೆ, ದೂರುಗಳಿಲ್ಲದೆ ಸುಗಮವಾಗಿ ಬರ್ತಡೇ ಸೆಲೆಬ್ರೇಷನ್ ಮುಗಿದಿಲ್ಲ. ಮುಂದಿನ ವರ್ಷದಿಂದ ಪಬ್ಲಿಕ್ ಗ್ರೌಂಡ್ ನಲ್ಲಿ ಸೆಲೆಬ್ರೇಷನ್ ಮಾಡುವಂತೆ ತಿಳಿಸುತ್ತೇವೆ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

  ದರ್ಶನ್ ಮಾತಿಗೆ ಬೆಲೆ ಬೇಡ್ವಾ.?

  ದರ್ಶನ್ ಮಾತಿಗೆ ಬೆಲೆ ಬೇಡ್ವಾ.?

  ''ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು. ಇಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗೂ ಸಂಘದ ಕಾರ್ಯಕರ್ತರಿಗೆ ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕಾಗಿ ವಿನಂತಿಸುತ್ತೇನೆ'' ಎಂದು ಹುಟ್ಟುಹಬ್ಬಕ್ಕೂ ಮುನ್ನ ದರ್ಶನ್ ಪದೇ ಪದೇ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಹೀಗಿದ್ದರೂ, ಕೆಲವರು ಅತಿರೇಕದ ವರ್ತನೆ ತೋರಿದ್ದಾರೆ. ಪರಿಣಾಮ, ಮುಂದಿನ ವರ್ಷದಿಂದ ದರ್ಶನ್ ಮನೆ ಮುಂದೆ ಪಬ್ಲಿಕ್ ಸೆಲೆಬ್ರೇಷನ್ ಗೆ ಫುಲ್ ಸ್ಟಾಪ್ ಬಿದ್ದಿದೆ.

  English summary
  Police will not allow Kannada Actor Darshan to host a public celebration of his birthday at his RR Nagar home from next year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X