ಇಂಡಸ್ಟ್ರಿಯಿಂದ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡೋಕಾಗುತ್ತೇನ್ರಿ? ಭಾವನಾ, ಡಾಲಿ ಕಿಡಿ!

ರಶ್ಮಿಕಾ ಮಂದಣ್ಣ ಸದ್ಯ ಭಾರತ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಹೆಸರು. ಮೊದಲಿಗೆ ಕನ್ನಡದ ಕಿರಿಕ್ ಪಾರ್ಟಿ ಎಂಬ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ನಂತರ ಟಾಲಿವುಡ್ ಪ್ರವೇಶಿಸಿ ಅಲ್ಲಿನ ಚಿತ್ರಗಳ ಮೂಲಕ ದೇಶವ್ಯಾಪಿ ಗುರುತಿಸಿಕೊಂಡರು. ಅದರಲ್ಲಿಯೂ ವಿಜಯ್ ದೇವರಕೊಂಡ ಜತೆ ನಟಿಸಿದ ಗೀತಾ ಗೋವಿಂದಂ ಚಿತ್ರದ ಮೂಲಕ ವೈರಲ್ ಆದ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಷ್ ಎಂದೂ ಸಹ ಕರೆಸಿಕೊಳ್ಳಲು ಆರಂಭಿಸಿದರು.

ಹೀಗೆ ದೇಶಾದ್ಯಂತ ರಶ್ಮಿಕಾ ಮಂದಣ್ಣ ಹೆಸರು ಪಸರಿಸಿ ಆಕೆ ಫೇಮಸ್ ಆದರೆ ತನ್ನ ಮೂಲ ರಾಜ್ಯದಲ್ಲಿಯೇ ರಶ್ಮಿಕಾ ವಿರುದ್ಧ ಅಪಾರವಾದ ವೈರತ್ವ ಹುಟ್ಟಿಕೊಂಡಿತ್ತು. ಹೌದು, ಗೀತಾ ಗೋವಿಂದಂ ಸಮಯಕ್ಕೆ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಮದುವೆ ಮುರಿದುಬಿದ್ದಿತ್ತು. ವಿಜೃಂಭಣೆಯಿಂದ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಬೇರೆ ಬೇರೆಯಾಗಿತ್ತು. ಇದೇ ಕಾರಣದಿಂದಾಗಿ ಕನ್ನಡದ ಹಲವಾರು ಸಿನಿ ಪ್ರಿಯರು ರಶ್ಮಿಕಾ ಮಂದಣ್ಣ ಎಂದರೆ ದ್ವೇಷಿಸಲಾರಂಭಿಸಿದರು.

ಅಂದು ರಶ್ಮಿಕಾ ಮಂದಣ್ಣ ಮೇಲೆ ಹುಟ್ಟಿಕೊಂಡ ದ್ವೇಷವೆಂಬ ಬೆಂಕಿಗೆ ಕೆಲ ಸಂದರ್ಶನಗಳಲ್ಲಿ ಕನ್ನಡ ಭಾಷೆ ಹಾಗೂ ತನ್ನನ್ನು ಇಂಡಸ್ಟ್ರಿಗೆ ಪರಿಚಯಿಸಿದ ಚಿತ್ರ ನಿರ್ಮಾಣ ಸಂಸ್ಥೆಗಳ ಸ್ವತಃ ರಶ್ಮಿಕಾ ಮಂದಣ್ಣ ನೀಡಿದ ಹೇಳಿಕೆಗಳು ತುಪ್ಪ ಸುರಿದಿದ್ದವು. ಹೌದು, ನನಗೆ ಕನ್ನಡ ಕೂಡ ಸರಿಯಾಗಿ ಬರಲ್ಲ ಎಂದು ತಮಿಳಿನಲ್ಲಿಯೇ ಹೇಳಿದ್ದು, ಕಾರ್ಯಕ್ರಮವೊಂದರಲ್ಲಿ ಸಾಲು ಮರದ ತಿಮ್ಮಕ್ಕ ಬಗ್ಗೆ ಮಾತನಾಡಲು ಹೇಳಿದಾಗ ಏನೂ ಹೇಳಲಾಗದೇ ನಗುತ್ತಾ ನಿಂತಂತಹ ಸಂದರ್ಭಗಳು ಕನ್ನಡಿಗರನ್ನು ಕೆರಳಿಸಿತ್ತು. ಇನ್ನು ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ತನಗೆ ಅವಕಾಶ ಕೊಟ್ಟ ಚಿತ್ರ ನಿರ್ಮಾಣ ಸಂಸ್ಥೆಯ ಹೆಸರನ್ನೂ ಸಹ ಹೇಳದೇ ಕೈಸನ್ನೆ ಮಾಡಿದ್ದ ವಿಡಿಯೊ ನೋಡಿದ್ದ ಕೆಲ ಕನ್ನಡಿಗರು ರಶ್ಮಿಕಾಳನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ರು ಹಾಗೂ ರಶ್ಮಿಕಾಳನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದೂ ಸಹ ಅಭಿಯಾನ ಆರಂಭಿಸಿದ್ದರು. ಈ ಕುರಿತಾಗಿ ಇದೀಗ ಡಾಲಿ ಧನಂಜಯ್ ಹಾಗೂ ನಟಿ ಭಾವನಾ ಕೂಡ ಪ್ರತಿಕ್ರಿಯಿಸಿದ್ದು, ಬ್ಯಾನ್ ಬಗ್ಗೆ ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಧನಂಜಯ್ ಹೇಳಿದ್ದಿಷ್ಟು

ಧನಂಜಯ್ ಹೇಳಿದ್ದಿಷ್ಟು

ಜಮಾಲಿ ಗುಡ್ಡ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಭಾಗವಹಿಸಿದ್ದ ಧನಂಜಯ್‌ಗೆ ರಶ್ಮಿಕಾ ಮಂದಣ್ಣ ಅವರನ್ನು ಬ್ಯಾನ್ ಮಾಡಬೇಕು ಎಂಬ ಕೂಗಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಧನಂಜಯ್ ಚಿತ್ರರಂಗದಲ್ಲಿ ಹಲವರ ಜೀವನವಿದೆ, ಹಲವರ ಬದುಕಿದೆ, ಚಿತ್ರರಂಗ ಎಲ್ಲರಿಗೂ ಮುಕ್ತವಾಗಿದೆ, ಇಲ್ಲಿಗೆ ಯಾರನ್ನೂ ಬರಬೇಡಿ ಎನ್ನಲಾಗುವುದಿಲ್ಲ, ಬ್ಯಾನ್ ಕೂಡ ಮಾಡಲಾಗುವುದಿಲ್ಲ ಎಂದು ಹೇಳಿಕೆ ನೀಡಿದರು.

ಯಾರ್ ಯಾರದ್ದೋ ವೈಯಕ್ತಿಕ ವಿಚಾರಕ್ಕೆ ಬ್ಯಾನ್ ಅಂತೆ!

ಯಾರ್ ಯಾರದ್ದೋ ವೈಯಕ್ತಿಕ ವಿಚಾರಕ್ಕೆ ಬ್ಯಾನ್ ಅಂತೆ!

ಇನ್ನು ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಾವನಾ ಧನಂಜಯ್ ಮಾತನಾಡುವ ಮಧ್ಯೆ ತಾವೂ ಸಹ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಕೆ ಓರ್ವ ನಟಿ, ಆಕೆಯನ್ನು ಬ್ಯಾನ್ ಮಾಡಲು ನಾವ್ಯಾರು ಎಂದು ಕಿಡಿಕಾರಿದರು. ಇನ್ನೂ ಮುಂದುವರಿದು ಮಾತನಾಡಿದ ಭಾವನಾ ರಶ್ಮಿಕಾ ಮಂದಣ್ಣ ಎಲ್ಲೇ ಹೋದರೂ ಹೆಸರು ಮಾಡುತ್ತಿದ್ದಾರೆ, ಕನ್ನಡದ ಹುಡುಗಿ ಇಷ್ಟರ ಮಟ್ಟಕ್ಕೆ ಹೆಸರು ಮಾಡಿರುವುದು ನಮಗೆ ಹೆಮ್ಮೆ, ಯಾರ್ ಯಾರದ್ದೋ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಬ್ಯಾನ್ ಮಾಡುತ್ತೇವೆ ಅಂತಾರೆ ಎನ್ನುವುದು ಎಷ್ಟು ಸರಿ, ನಮ್ಮ ವೈಯಕ್ತಿಕ ವಿಚಾರವೇ ಬೇರೆ, ಸಿನಿಮಾನೇ ಬೇರೆ ಎಂದು ಭಾವನಾ ಹೇಳಿಕೆ ನೀಡಿದರು.

ಎಲ್ಲರದ್ದೂ ಇದೇ ಉತ್ತರ

ಎಲ್ಲರದ್ದೂ ಇದೇ ಉತ್ತರ

ಇನ್ನು ರಶ್ಮಿಕಾ ಮಂದಣ್ಣರನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ ಎಂಬ ದೊಡ್ಡ ಕೂಗು ಹಾಗೂ ಅಭಿಯಾನ ಇದ್ದರೂ ಸಹ ಈ ಕುರಿತು ಪ್ರತಿಕ್ರಿಯಿಸಿದ ಪ್ರತಿಯೊಬ್ಬ ಕಲಾವಿದರೂ ಸಹ ಯಾವ ನಟಿಯನ್ನಾಗಲಿ, ನಟನನ್ನಾಗಲಿ ಯಾವ ಚಿತ್ರರಂಗಗಳಿಂದಲೂ ಬ್ಯಾನ್ ಮಾಡಲಾಗುವುದಿಲ್ಲ ಎಂಬ ಹೇಳಿಕೆಗಳನ್ನೇ ನೀಡುತ್ತಿದ್ದು, ಬಹುತೇಕರು ರಶ್ಮಿಕಾ ಪರ ಬ್ಯಾಟ್ ಬೀಸಿದ್ದಾರೆ.

More from Filmibeat

English summary
No one can ban Rashmika Mandanna from Sandalwood says Dhananjay and Bhavana. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X