twitter
    For Quick Alerts
    ALLOW NOTIFICATIONS  
    For Daily Alerts

    ಕತ್ತಲೆಯಲ್ಲಿ ವಿಷ್ಣುವರ್ಧನ್ ಸ್ಮಾರಕ: ಅಭಿಮಾನಿಗಳಿಂದ ಅಹೋರಾತ್ರಿ ಧರಣಿ

    By ಮೈಸೂರು ಪ್ರತಿನಿಧಿ
    |

    ಮೈಸೂರಿನಲ್ಲಿ ಮಧ್ಯಾಹ್ನ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ ನಡೆಯಿತು, ರಾತ್ರಿ ಆಗುತ್ತಿದ್ದಂತೆ ಸರ್ಕಾರದ ನಿರ್ಲಕ್ಷ್ಯ ಬಹಿರಂಗವಾಯಿತು! ಸ್ಮಾರಕಕ್ಕೆ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದ್ದನ್ನು ವಿರೋಧಿಸಿ ಅಭಿಮಾನಿಗಳು ರಾತ್ರಿ ಧರಣಿ ನಡೆಸಿದರು.

    ಎಚ್. ಡಿ.ಕೋಟೆ ಮಾನಂದವಾಡಿ ರಸ್ತೆಯಲ್ಲಿನ ವಿಷ್ಣು ಸ್ಮಾರಕವನ್ನು ವೀಕ್ಷಿಸಲು ಸಂಜೆ ಆಗಮಿಸಿದ ಅಭಿಮಾನಿಗಳಿಗೆ ಕತ್ತಲೆ ಕಂಡು ನಿರಾಸೆಯಾಯಿತು.

    ಭಾನುವಾರ ಬೆಳಗ್ಗೆಯಿಂದಲೇ ಸ್ಮಾರಕ ವೀಕ್ಷಣೆಗೆ ಆಗಮಿಸಿದ್ದ ಸಾರ್ವಜನಿಕರು ಮಧ್ಯಾಹ್ನ 2ರವರೆಗೂ ಕಾದಿದ್ದರು. ಬಳಿಕ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರಿಂದ ನಿರೀಕ್ಷೆಗೂ ಮೀರಿ ಜನ ಸಾಗರ ಹರಿದು ಬಂದಿತ್ತು. ಸಂಜೆ ವೇಳೆ ವೀಕ್ಷಣೆಗೆ ಬಂದ ಅಭಿಮಾನಿಗಳಿಗೆ ವಿದ್ಯುತ್ ದೀಪ ವ್ಯವಸ್ಥೆ ಇಲ್ಲದೇ ಇರುವುದರಿಂದ ಓಡಾಡಲು ಪರದಾಡಿದರು. ಸರಿಯಾಗಿ ವ್ಯವಸ್ಥೆ ಮಾಡದೇ ವಿಷ್ಣುವರ್ಧನ್ ಅವರಿಗೆ ಸರಕಾರ ಅಪಮಾನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    No Power Connection To Vishnuvardhan Memorial: Fans Angry On Government

    'ಮೈಸೂರು ನಗರದಲ್ಲಿ ಇಂದು ಅದ್ದೂರಿಯಾಗಿ ನಡೆದ ವಿಷ್ಣು ಸ್ಮಾರಕ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ವಿಷ್ಣು ಅಭಿಮಾನಿಗಳಿಗೆ ಅನಂತಾನಂತ ಧನ್ಯವಾದಗಳು ಹಾಗೂ ಸರ್ಕಾರಕ್ಕೂ ಸಹ ಧನ್ಯವಾದಗಳು. ಆದರೆ ಮತ್ತೊಂದು ಬೇಸರದ ಸಂಗತಿ ಎಂದರೆ ಮೈಸೂರು ಜಿಲ್ಲಾ ಮಂತ್ರಿ ಎಸ್ ಟಿ ಸೋಮಶೇಖರ್ ಸಾಹಸಸಿಂಹ ವಿಷ್ಣು ಸ್ಮಾರಕ ಕಾರ್ಯಕ್ರಮ ಉದ್ಘಾಟನೆಗೆ ಬರದೆ ನಿರ್ಲಕ್ಷಿಸಿರುವುದು ಅದು ಅಭಿಮಾನಿಗಳಿಗೆ ನೋವು ಉಂಟಾಗಿದೆ. ಹಾಗೆಯೇ ವಿಷ್ಣು ಹೆಸರಿನಲ್ಲಿ ಹಲವಾರು ಚಿತ್ರನಟರು ಮುಂದೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ಸ್ಮಾರಕ ಉದ್ಘಾಟನೆಗೆ ಚಲನಚಿತ್ರ ನಟರು ಯಾಕೆ ಬಂದಿಲ್ಲ ಎಂಬುವುದು ಅಭಿಮಾನಿಗಳ ಪ್ರಶ್ನೆ. ಈ ಕೂಡಲೇ ಜಿಲ್ಲಾ ಮಂತ್ರಿಗಳು ಸ್ಪಷ್ಟನೆಕೊಡಬೇಕು ಸ್ಮಾರಕ ಉದ್ಘಾಟನೆ ಕಾರ್ಯಕ್ರಮವು ಇನ್ನೂ ಅಚ್ಚುಕಟ್ಟಾಗಿ ನೆರವೇರಿಸಬಹುದಿತ್ತು. ಕತ್ತಲೆಯಲ್ಲೇ ಸ್ಮಾರಕ ಇದೆ. ದೂರದಿಂದ ಬಂದಂತ ಅಭಿಮಾನಿಗಳಿಗೆ ಇದರಿಂದ ಬೇಸರವಾಗಿದೆ ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ತಿಳಿಸಿದ್ದಾರೆ.

    ಹದಿಮೂರು ವರ್ಷಗಳ ಬಳಿಕ ವಿಷ್ಣುವರ್ಧನ್ ಸ್ಮಾರಕವನ್ನು ಸರ್ಕಾರ ನಿರ್ಮಾಣ ಮಾಡಿದೆ. 11 ಕೋಟಿ ವೆಚ್ಚದಲ್ಲಿ ಸ್ಮಾರಕವೇನೋ ನಿರ್ಮಾಣವಾಗಿದೆಯಾದರು ಸೂಕ್ತವಾದ ವ್ಯವಸ್ಥೆಗಳನ್ನು ಪೂರ್ಣವಾಗಿ ಕಲ್ಪಿಸಲಾಗಿಲ್ಲ ಎಂದು ಅಭಿಮಾನಿಗಳು ಆರೋಪ ಮಾಡಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಬೆಳಿಗ್ಗೆ ವಿಷ್ಣುವರ್ಧನ್ ಸ್ಮಾರಕವನ್ನು ಉದ್ಘಾಟನೆ ಮಾಡಿದರು. ಬಸವರಾಜ ಬೊಮ್ಮಾಯಿ ಜೊತೆಗೆ ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ್ ಇನ್ನೂ ಕೆಲವು ಮುಖಂಡರು ಹಾಜರಿದ್ದರು.

    English summary
    No power connection to Vishnuvardhan memorial which is inaugurated yesterday. Fans who came to visit Vishnuvardhan memorial express anger against government.
    Monday, January 30, 2023, 8:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X