For Quick Alerts
  ALLOW NOTIFICATIONS  
  For Daily Alerts

  ಯಶ್ 'ಮಾಸ್ಟರ್ ಪೀಸ್' ಬಿಡುಗಡೆಗೆ ನೋ ಪ್ರಾಬ್ಲಂ!!

  By Harshitha
  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಮಾಸ್ಟರ್ ಪೀಸ್' ಬಿಡುಗಡೆಗೆ ಎರಡೇ ದಿನ ಬಾಕಿ. ಅಷ್ಟರಲ್ಲೇ, ಸಿನಿಮಾ ಬಗ್ಗೆ ಅಪಸ್ವರ ಕೇಳಿ ಬಂದಿತ್ತು.

  ಸಂತೋಷ್ ಚಿತ್ರಮಂದಿರದಲ್ಲಿ ಹಾಕಲಾದ ಕಟೌಟ್ ಸಲುವಾಗಿ 'ಮಾಸ್ಟರ್ ಪೀಸ್' ಚಿತ್ರದ ವಿರುದ್ಧ 'ಜಾತ್ರೆ' ಸಿನಿಮಾ ನಾಯಕ ಚೇತನ್ ಚಂದ್ರ ಬೇಸರಗೊಂಡಿದ್ದರು. ['ಮಾಸ್ಟರ್ ಪೀಸ್' ಬಿಡುಗಡೆಗೆ ಮುನ್ನ ಏನಿದು ಅಪಸ್ವರ.?]

  ಆದ್ರೀಗ, ಎಲ್ಲಾ ಗೊಂದಲ-ಗದ್ದಲಕ್ಕೆ ಫುಲ್ ಸ್ಟಾಪ್ ಬಿದ್ದಿದೆ. 'ಜಾತ್ರೆ' ಹಾಗೂ 'ಮಾಸ್ಟರ್ ಪೀಸ್' ಚಿತ್ರ ನಡುವೆ ಎದ್ದಿದ್ದ ಅಸಮಾಧಾನ ಶಮನವಾಗಿದೆ. ನಟ ಚೇತನ್ ಚಂದ್ರ ಜೊತೆ ಯಶ್ ಮಾತುಕತೆ ನಡೆಸಿ ವಿವಾದಕ್ಕೆ ಶುಭಂ ಹಾಡಿದ್ದಾರೆ. [ಮುಯ್ಯಿಗೆ ಮುಯ್ಯಿ; ಯಶ್ 'ಮಾಸ್ಟರ್ ಪೀಸ್' ಕಟೌಟ್ ಪೀಸ್ ಪೀಸ್!]

  ಅಂದ್ಹಾಗೆ, 'ಮಾಸ್ಟರ್ ಪೀಸ್' ಸಿನಿಮಾ ಇದೇ ಗುರುವಾರ (ಡಿಸೆಂಬರ್ 24) ಭಾರತದಾದ್ಯಂತ ಬಿಡುಗಡೆ ಆಗಲಿದೆ. 'ಕೇಡಿ ನಂ.1' ಆಗಿ ಯಶ್ ಸಿನಿಮಾದಲ್ಲಿ ಮಿಂಚಿದ್ದಾರೆ. ಯಶ್ ಜೊತೆ ಶಾನ್ವಿ ಡ್ಯುಯೆಟ್ ಹಾಡಿದ್ದಾರೆ.

  'ಮಾಸ್ಟರ್ ಪೀಸ್' ಚಿತ್ರದ ಮೂಲಕ ಸಂಭಾಷಣೆಕಾರ ಮಂಜು ಮಾಂಡವ್ಯ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲೇ ಯಶಸ್ಸು ಗಳಿಸುವ ಹುಮ್ಮಸ್ಸು ಮಂಜು ಮಾಂಡವ್ಯಗಿದೆ. ಅವರ ಕೈಹಿಡಿದು ಸಾಥ್ ಕೊಡುವ ಜವಾಬ್ದಾರಿ ನಿಮ್ಮದು...

  English summary
  Misunderstanding between Chetan Chandra and Rocking Star Yash over Cutout issue is cleared. 'Masterpiece' is releasing on December 24th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X