ಕೆಜಿಎಫ್ 3 ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಯಶ್ ; ಬೆಳ್ಳಿತೆರೆಯಲ್ಲಿ ಮತ್ತೆ ಧಗಧಗಿಸುತ್ತಾನಾ ರಾಕಿ ಭಾಯ್ ?

ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಒಂದು ಸಿನಿಮಾ ಕೇವಲ 2 -3 ಗಂಟೆಗೆ ಮಾತ್ರ ಸೀಮಿತವಾಗಿತ್ತು. ಅಬ್ಬಬ್ಬಾ ಅಂದರೆ 4 ಗಂಟೆ. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಥೆ ಒಂದೇ ಗುಕ್ಕಿಗೆ ಮುಗಿಯುವುದಿಲ್ಲ. ಬದಲಿಗೆ ಮುಂದುವರೆಯುತ್ತಲೇ ಇರುತ್ತೆ. ಫ್ರಾಂಚೈಸಿಗಳ ಕಾಲ ಇದು.

ಪ್ರೇಕ್ಷಕರು ಕೂಡ ಇಂದು ಒಂದು ಕಥೆ.. ಒಂದು ಕ್ಲೈಮ್ಯಾಕ್ಸ್‌ಗೆ ತೃಪ್ತಿ ಪಡುತ್ತಿಲ್ಲ. ಬದಲಿಗೆ ಚಿತ್ರ ಮತ್ತು ಪಾತ್ರದ ಗುಂಗಿನಲ್ಲಿ ಬದುಕುತ್ತಾರೆ. ''ಬಾಹುಬಲಿ''ಯಿಂದ ಹಿಡಿದು ''ಮಾರ್ವಲ್‌''ವರೆಗೆ ಸದ್ಯ ಭಾರತೀಯ ಚಿತ್ರರಂಗ ಮತ್ತು ಬಾಕ್ಸಾಫೀಸ್‌ನ್ನೂ ಆಳುತ್ತಿರುವುದು ಈ ಸೀಕ್ವೆಲ್ ಸಂಸ್ಕ್ರತಿಯೇ. ಇದೇ ಸಾಲಿನಲ್ಲಿ ಸೇರಿಕೊಂಡು ಭಾರತೀಯ ಚಿತ್ರರಂಗವನ್ನೇ ಕನ್ನಡದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದು ನಮ್ಮ ಕನ್ನಡದ ''ಕೆಜಿಎಫ್''.

No Script No Rocky Bhai Yash Puts KGF 3 on Hold to Conquer Ramayana amp amp Toxic First

ಹೌದು, ಎಲ್ಲರಿಗೆ ಗೊತ್ತಿರುವಂತೆ ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಚಿತ್ರಗಳಲ್ಲಿ ''ಕೆ.ಜಿ.ಎಫ್'' ಮತ್ತು ''ಕೆ.ಜಿ.ಎಫ್ 2'' ಇಂದಿನ ದಿನಮಾನಗಳಲ್ಲಿ ಪ್ರಮುಖವಾದ ಸಿನಿಮಾಗಳು. ಈ ಎರಡು ಚಿತ್ರಗಳು ತೆರೆಗೆ ಬಂದು ಹೋಗಿ ಹಲವು ವರ್ಷಗಳಾಗಿವೆ.

ಆದರೂ ''ಕೆಜಿಎಫ್'' ಹೆಸರನ್ನು ಕನವರಿಸುವವರ ಸಂಖ್ಯೆ ನಮ್ಮ ದೇಶದಲ್ಲಿ ಕಡಿಮೆ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ಅಥವಾ ಪ್ರಶಾಂತ್ ನೀಲ್ ಎಲ್ಲಿಯೇ ಹೋದರೂ ಅವರಿಗೆ ಮೊದಲು ಎದುರಾಗುವುದೇ ''ಕೆಜಿಎಫ್ 3'' ಯಾವಾಗ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಈಗ ಯಶ್ ಉತ್ತರ ನೀಡಿದ್ಧಾರೆ. ಸದ್ಯಕ್ಕಿಲ್ಲ ''ಕೆಜಿಎಫ್ 3'' ಎಂದು ಹೇಳುವ ಮೂಲಕ ಹಲವರ ಆಸೆಗೆ ತಣ್ಣೀರೆರಚಿದ್ದಾರೆ.

ಹೌದು, ಯಶ್ ಸದ್ಯ ಸಪ್ತಸಾಗರದಾಚೆ ಇದ್ದಾರೆ. ಅಮೆರಿಕಾದ ಲಾಸ್ ವೇಗಸ್‌ನಲ್ಲಿ ನಡೆದ 'ಸಿನಿಮಾಕಾನ್'ನಲ್ಲಿ ಭಾಗವಹಿಸಿದ್ಧಾರೆ. ಫ್ಯಾಂಡಂಗೋ ನಂತಹ ಹಾಲಿವುಡ್ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ತಮ್ಮ ''ರಾಮಾಯಣ'' ಮತ್ತು ''ಟಾಕ್ಸಿಕ್'' ಚಿತ್ರದ ಪ್ರಚಾರವನ್ನು ಮಾಡುತ್ತಿದ್ದಾರೆ.

ಇದೇ ಸಮಯದಲ್ಲಿ ''ಸ್ಕ್ರೀನ್ ಡೈಲಿ''ಗೆ ಕೂಡ ಸಂದರ್ಶನವನ್ನು ಯಶ್ ನೀಡಿದ್ದು, ಈ ಸಂದರ್ಶನದಲ್ಲಿ ಯಶ್‌ಗೆ ''ಕೆಜಿಎಫ್ 3'' ಕುರಿತ ಪ್ರಶ್ನೆ ಎದುರಾಗಿದೆ. ಇದೇ ಪ್ರಶ್ನೆಗೆ ಉತ್ತರ ನೀಡಿರುವ ಯಶ್, ಸದ್ಯ ''ರಾಮಾಯಣ'' ಭಾಗ 1 ಮತ್ತು ಭಾಗ 2 ಹಾಗೂ ''ಟಾಕ್ಸಿಕ್'' ಚಿತ್ರದ ಕುರಿತು ಮಾತ್ರ ತಾವು ಯೋಚನೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

no-script-no-rocky-bhai-yash-puts-kgf-3-on-hold-to-conquer-ramayana-toxic-first

ನಾನು ಮತ್ತು ಪ್ರಶಾಂತ್ ನೀಲ್ ಹೊಸ ಹೊಸ ಐಡಿಯಾಗಳ ಕುರಿತು ಮಾತನಾಡುತ್ತಲೇ ಇರುತ್ತೇವೆ ಎಂದು ಹೇಳಿರುವ ಯಶ್, ಇಬ್ಬರಿಗೂ ಇಷ್ಟವಾಗುವಂತಹ ಕಥೆ ಹೊಳೆದರೆ ''ಕೆಜಿಎಫ್ 3'' ಮಾಡುತ್ತೇವೆ ಎಂದು ಹೇಳಿದ್ದಾರೆ. ಚಿತ್ರಕ್ಕೆ ಒಳ್ಳೆಯ ಗಟ್ಟಿಯಾದ ಕಥೆ ಬೇಕು, ಅತ್ಯುತ್ತಮವಾದ ಕಥೆ ರೂಪಿಸುವುದು ಅನಿವಾರ್ಯ ಎಂದು ಹೇಳಿರುವ ಯಶ್ ಇಂದಲ್ಲ, ನಾಳೆ, ಖಂಡಿತವಾಗಿಯೂ ''ಕೆಜಿಎಫ್ 3''ಯನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

ಸದ್ಯ ಯಶ್ ಅವರ ಈ ಮಾತು ಕೇಳಿ ''ಕೆಜಿಎಫ್ 3'' ಚಿತ್ರಕ್ಕೆ ಕಾಯುತ್ತಿದ್ದ ಒಂದು ವರ್ಗಕ್ಕೆ ನಿರಾಸೆಯಾಗಿದೆ. ಮತ್ತೊಂದು ವರ್ಗ ''ಕೆಜಿಎಫ್ 3'' ಒಂದಿಲ್ಲೊಂದು ದಿನ ಬರುತ್ತೆ ಎಂದು ಯಶ್ ಹೇಳಿದ್ದಾರಲ್ಲ ಅಷ್ಟೇ ಸಾಕು ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದೆ. ಇನ್ನುಳಿದಂತೆ ಜೂನ್ 4ರಂದು ''ಟಾಕ್ಸಿಕ್'' ಚಿತ್ರ ಬಿಡುಗಡೆಯಾಗುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬೆಳ್ಳಿತೆರೆಯಲ್ಲಿ ''ರಾಮಾಯಣ''ದ ದೃಶ್ಯಕಾವ್ಯ ಅನಾವರಣವಾಗಲಿದೆ. ಈ ಮೂಲಕ ಅಭಿಮಾನಿಗಳಿಗೆ ಯಶ್ ಎರೆಡರಡು ಬಾರಿ ಚಿತ್ರಮಂದಿರಗಳಲ್ಲಿ ದರ್ಶನ ಕೊಡಲಿದ್ದಾರೆ. ಎರಡು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆಯುವ ನಿರೀಕ್ಷೆ ಇದೆ.

English summary
Yash halts KGF 3! The Ramayana star explains why Rocky Bhai’s return depends on a masterpiece script. See what this means for the KGF franchise’s future.
Read more about: yash kgf filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X