For Quick Alerts
  ALLOW NOTIFICATIONS  
  For Daily Alerts

  'ನೋ ಸ್ಮೋಕಿಂಗ್' ಜಾಹೀರಾತಿನ ಬಾಲನಟಿ ಈಗ ಕನ್ನಡ ಚಿತ್ರಕ್ಕೆ ನಾಯಕಿ

  |

  ಧೂಮಪಾನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಪುಟ್ಟ ಬಾಲಕಿ ಈಗ ಕನ್ನಡ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುಂಚೆ ಧೂಮ್ರಪಾನ ಬಗ್ಗೆ ಅರಿವು ಮೂಡಿಸುವಂತಹ ಜಾಹೀರಾತು ಪ್ರಸಾರ ಆಗ್ತಿತ್ತು.

  ಮಗಳಿಗಾಗಿ ತಂದೆ ಧೂಮ್ರಪಾನ ಬಿಡುವಂತಹ ಜಾಹೀರಾತು ಅದಾಗಿತ್ತು. ಆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಪುಟ್ಟ ಬಾಲಕಿ ಈಗ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ಜಾಹೀರಾತು ಮೂಲಕ ದೇಶ-ವಿದೇಶಗಳಲ್ಲಿ ಖ್ಯಾತಿಗಳಿಸಿಕೊಂಡಿದ್ದ ಸಿಮ್ರಾನ್ ನಾಟೇಕರ್ ಈಗ ಕನ್ನಡ ಸಿನಿಮಾ ಇಂಡಸ್ಟ್ರಿ ಕಡೆ ಹೆಜ್ಜೆ ಹಾಕಿದ್ದಾರೆ. ಮುಂದೆ ಓದಿ...

  ಫೋಟೋ ವೈರಲ್; ಬೆತ್ತಲಾಗಿ ಕಸದ ಗಾಡಿಯಲ್ಲಿ ಕುಳಿತ ನಟಿ ಪರಿಣೀತಿ ಚೋಪ್ರಾಫೋಟೋ ವೈರಲ್; ಬೆತ್ತಲಾಗಿ ಕಸದ ಗಾಡಿಯಲ್ಲಿ ಕುಳಿತ ನಟಿ ಪರಿಣೀತಿ ಚೋಪ್ರಾ

  ಬರ್ಕ್ಲಿ ಚಿತ್ರಕ್ಕೆ ಸಿಮ್ರಾನ್ ನಾಯಕಿ?

  ಬರ್ಕ್ಲಿ ಚಿತ್ರಕ್ಕೆ ಸಿಮ್ರಾನ್ ನಾಯಕಿ?

  ಗಣಪ, ಕರಿಯ 2 ಚಿತ್ರಗಳ ಖ್ಯಾತಿಯ ಸಂತೋಷ್ ಬಾಲರಾಜ್ ನಟಿಸುತ್ತಿರುವ ಬರ್ಕ್ಲಿ ಚಿತ್ರಕ್ಕೆ ಸಿಮ್ರಾನ್ ನಾಟೇಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವ ವಿಚಾರ ಹೊರಬಿದ್ದಿದೆ. ಆನೇಕಲ್ ಬಾಲರಾಜ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ಸುಮಂತ್ ಕ್ರಾಂತಿ ನಿರ್ದೇಶನ ಮಾಡುತ್ತಿದ್ದಾರೆ.

  ಬರ್ಕ್ಲಿ ಚಿತ್ರೀಕರಣ ಮುಗಿದಿದೆ

  ಬರ್ಕ್ಲಿ ಚಿತ್ರೀಕರಣ ಮುಗಿದಿದೆ

  ಸಂತೋಷ್ ಮತ್ತು ಸಿಮ್ರಾನ್ ನಟಿಸಿರುವ ಬರ್ಕ್ಲಿ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಕೆಲಸ ಮುಗಿದ ತಕ್ಷಣ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

  ಸಿಮ್ರಾನ್ ನಾಟೇಕರ್ ಕುರಿತು

  ಸಿಮ್ರಾನ್ ನಾಟೇಕರ್ ಕುರಿತು

  6ನೇ ವಯಸ್ಸಿನಲ್ಲಿಯೇ ಜಾಹೀರಾತು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಸಿಮ್ರಾನ್ ನಂತರದ ದಿನಗಳಲ್ಲಿ 150ಕ್ಕೂ ಅಧಿಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ನೋ ಸ್ಮೋಕಿಂಗ್ ಜಾಹೀರಾತು ಹೆಚ್ಚು ಖ್ಯಾತಿ ತಂದುಕೊಡ್ತು. ನಂತರ ಬಾಲಿವುಡ್ ಪ್ರವೇಶಿಸಿದ ಸಿಮ್ರಾನ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಜಾನೇ ಕಹಾನ್ ಸೆ ಆಯಿ ಹೈ' ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಸಿಮ್ರಾನ್ ನಂತರ 'ಕ್ರಿಶ್', 'ದಾವತ್-ಇ--ಇಷ್ಕ್', 'ಬೆಸ್ಟ್ ಆಫ್ ಲಕ್ ಲಾಲು' ಸೇರಿದಂತೆ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಬಸ್ ಡ್ರೈವರ್‌ಗೆ ಅರ್ಪಿಸಿದ ರಜನೀಕಾಂತ್ | Filmibeat Kannada
  ಬರ್ಕ್ಲಿ ಚಿತ್ರದ ಬಗ್ಗೆ....

  ಬರ್ಕ್ಲಿ ಚಿತ್ರದ ಬಗ್ಗೆ....

  ಸಂತೋಷ್ ಬಾಲರಾಜ್, ಸಿಮ್ರಾನ್ ಜೊತೆಯಲ್ಲಿ ಬಹುಭಾಷೆ ನಟ ಚರಣ್ ರಾಜ್, ಶ್ರುತಿ, ರಾಜವಾಡಿ, ಬುಲೆಟ್ ಪ್ರಕಾಶ್ ಸಹ ನಟಿಸಿದ್ದಾರೆ. ಜೂಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 'ಬಹುದ್ದೂರ್' ಚೇತನ್ ಹಾಗೂ ಅಭಿ ಸಾಹಿತ್ಯವಿದೆ.

  ನಿಶ್ಚಿತಾರ್ಥ ಉಂಗುರ ಬದಲಿಸಿಕೊಂಡ ಚಂದನ್ ಕುಮಾರ್-ಕವಿತಾ ಗೌಡ ಜೋಡಿನಿಶ್ಚಿತಾರ್ಥ ಉಂಗುರ ಬದಲಿಸಿಕೊಂಡ ಚಂದನ್ ಕುಮಾರ್-ಕವಿತಾ ಗೌಡ ಜೋಡಿ

  English summary
  'No Smoking' Ad fame simran natekar now heroine for Kannada movie barkli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X