twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪು ಸ್ಥಾನ ತುಂಬೋಕೆಲ್ಲಾ ಆಗೋದಿಲ್ಲ; ಕೆಸಿಸಿ ಪತ್ರಿಕಾಗೋಷ್ಠಿಯಲ್ಲಿ ಗೆಳೆಯ ಪುನೀತ್ ಬಗ್ಗೆ ಕಿಚ್ಚನ ಮಾತು

    |

    ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲಾ ಅಗಲಿ ವರ್ಷ ಕಳೆದರೂ ಸಹ ಅವರ ನೆನಪು ಮಾತ್ರ ಇನ್ನೂ ಮಾಸಿಲ್ಲ. ಯಾವುದೇ ಕಾರ್ಯಕ್ರಮವಿರಲಿ, ಸಂದರ್ಶನವಿರಲಿ ಅಲ್ಲಿ ಪುನೀತ್ ಬಗೆಗಿನ ಯಾವುದಾದರೊಂದು ಚರ್ಚೆ ಇದ್ದೇ ಇರುತ್ತದೆ. ಅದರಲ್ಲೂ ಎಲ್ಲಾ ಕಲಾವಿದರಿಗೂ ಸಮಾನ ಗೌರವ ನೀಡಿ ಸ್ನೇಹ ಸೌಹಾರ್ದತೆಯಿಂದ ನಡೆದುಕೊಳ್ಳುತ್ತಿದ್ದ ಪುನೀತ್ ರಾಜ್‌ಕುಮಾರ್ ಕುರಿತು ಪುಟ್ಟ ಕಲಾವಿದರಿಂದ ಹಿಡಿದು ಸ್ಟಾರ್ ನಟರವರೆಗೂ ಮಾತನಾಡಿದ್ದಾರೆ ಹಾಗೂ ಅವರ ಜತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

    ಇನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಬಾಲ್ಯದಿಂದಲೇ ಸ್ನೇಹಿತಾನಾಗಿದ್ದ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟ ನಂತರವೂ ಸಹ ಅಪ್ಪು ಜತೆ ಒಳ್ಳೆಯ ಒಡನಾಟವನ್ನು ಹೊಂದಿದ್ರು. ಇಬ್ಬರೂ ಚಿಕ್ಕ ವಯಸ್ಸಿನಲ್ಲಿದ್ದಾಗ ಪರಸ್ಪರ ಅಪ್ಪಿಕೊಂಡು ಫೋಟೊ ತೆಗೆಸಿಕೊಂಡಿದ್ದರು. ಹೀಗೆ ಪುನೀತ್ ರಾಜ್‌ಕುಮಾರ್ ಜತೆ ಇಷ್ಟು ಸ್ನೇಹ ಬಾಂಧವ್ಯವನ್ನು ಹೊಂದಿದ್ದ ಕಿಚ್ಚ ಸುದೀಪ್ ಅಪ್ಪು ನಿಧನ ಹೊಂದಿದ್ದ ಸಂದರ್ಭದಲ್ಲಿ ಕಣ್ಣೀರು ಹಾಕಿದ್ರು. ಹಲವಾರು ಸಂದರ್ಶನಗಳಲ್ಲಿ ಅಪ್ಪು ಅವರನ್ನು ನೆನಪು ಮಾಡಿಕೊಂಡು ಅವರ ಜತೆ ಕಳೆದ ಕ್ಷಣಗಳ ಬಗ್ಗೆ ಮಾತನಾಡಿದ್ದರು.

    ಇನ್ನು ಸದ್ಯ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟ್‌ನ ತಯಾರಿಯಲ್ಲಿರುವ ಕಿಚ್ಚ ಸುದೀಪ್ ನಿನ್ನೆ ( ಜನವರಿ 23 ) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಟೂರ್ನಿಯ ಕುರಿತಾದ ಕೆಲ ಮಾಹಿತಿಗಳನ್ನು ಹಂಚಿಕೊಂಡರು ಹಾಗೂ ಟೂರ್ನಿಗೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗಳಿಗೆ ಸುದೀಪ್ ಉತ್ತರಿಸಿದರು. ಇದೇ ವೇಳೆ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಎದುರಾದ ಪ್ರಶ್ನೆಯೊಂದಕ್ಕೆ ಸುದೀಪ್ ನೀಡಿದ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಹಾಗೂ ಅಪ್ಪು ಅಭಿಮಾನಿಗಳು ಮತ್ತು ಸಿನಿ ರಸಿಕರು ಸುದೀಪ್ ಕೊಟ್ಟ ಈ ಉತ್ತರಕ್ಕೆ ಫಿದಾ ಆಗಿದ್ದಾರೆ.

    ಅಪ್ಪು ಇಲ್ಲದ ಕೆಸಿಸಿ

    ಅಪ್ಪು ಇಲ್ಲದ ಕೆಸಿಸಿ

    ಈ ಬಾರಿ ನಡೆಯಲಿರುವ ಕನ್ನಡ ಚಲನಚಿತ್ರ ಕಪ್ ಮೂರನೇ ಆವೃತ್ತಿಯಾಗಿದ್ದು, ಈ ಹಿಂದೆ ನಡೆದ ಎರಡೂ ಟೂರ್ನಿಗಳಲ್ಲೂ ಪುನೀತ್ ರಾಜ್‌ಕುಮಾರ್ ಇದ್ದರು. ಕಳೆದ ಬಾರಿಯ ಸೀಸನ್‌ನಲ್ಲಿ ಗಂಗಾ ವಾರಿಯರ್ಸ್ ಎಂಬ ತಂಡವನ್ನು ಪವರ್ ಸ್ಟಾರ್ ನಾಯಕನಾಗಿ ಸಹ ಮುನ್ನಡೆಸಿದ್ದರು. ಪಂದ್ಯದ ವೇಳೆ ಮೈದಾನದಲ್ಲಿ ಜಿಗಿದು, ಬ್ಯಾಕ್ ಫ್ಲಿಪ್ ಮಾಡಿ ನೆರೆದಿದ್ದ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದ ಅಪ್ಪು ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ.

    ಪುನೀತ್ ಸ್ಥಾನ ತುಂಬೋಕಾಗಲ್ಲ

    ಪುನೀತ್ ಸ್ಥಾನ ತುಂಬೋಕಾಗಲ್ಲ

    ಇನ್ನು ಈ ಬಾರಿಯ ಕನ್ನಡ ಚಲನಚಿತ್ರ ಕಪ್‌ ಟೂರ್ನಿಗೆ ಪುನೀತ್ ರಾಜ್‌ಕುಮಾರ್ ಅನುಪಸ್ಥಿತಿ ಇರಲಿದೆ ಎಂದು ನಿರೂಪಕಿ ಹೇಳಿದಾಗ ಮಾತನ್ನು ಆರಂಭಿಸಿದ ಕಿಚ್ಚ ಸುದೀಪ್ ತಾವು ಅದನ್ನು ಬೇರೆಯದ್ದೇ ಮಾರ್ಗದಲ್ಲಿ ನೋಡುತ್ತೇನೆ ಎಂದರು. ಪುನೀತ್ ರಾಜ್‌ಕುಮಾರ್ ಅವರನ್ನು ನಾನು ಸಂಭ್ರಮಿಸಲು ಇಚ್ಛಿಸುತ್ತೇನೆ, ಅವರು ಇದ್ದಿದ್ದರೆ ಕೆಸಿಸಿಯನ್ನು ಸಂಭ್ರಮಿಸುತ್ತಿದ್ದರು, ಈಗ ನಾವು ಅವರನ್ನು ಸಂಭ್ರಮಿಸಬೇಕು ಎಂದರು. ಅಷ್ಟೇ ಅಲ್ಲದೇ ಅವರ ಜಾಗವನ್ನು ತುಂಬುತ್ತೇವೆ ಎನ್ನುವುದು ಖಚಿತವಾಗಿ ಅಸಾಧ್ಯವಾದದ್ದು ಎಂದ ಕಿಚ್ಚ ಸುದೀಪ್ ಎಲ್ಲರೂ ಸೇರಿ ಅವರನ್ನು ಸಂಭ್ರಮಿಸೋಣ ಎಂದರು. ಸದ್ಯ ಕಿಚ್ಚ ಸುದೀಪ್ ಅವರು ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಿಚ್ಚನ ಮಾತಿಗೆ ಅಪ್ಪು ಅಭಿಮಾನಿಗಳು ಫಿದಾ ಆಗಿದ್ದಾರೆ.

    ಎಲ್ಲರಿಗೂ ಆಹ್ವಾನ ನೀಡುತ್ತೇವೆ

    ಎಲ್ಲರಿಗೂ ಆಹ್ವಾನ ನೀಡುತ್ತೇವೆ

    ಇನ್ನೂ ಮುಂದುವರಿದು ಮಾತನಾಡಿದ ಕಿಚ್ಚ ಸುದೀಪ್ ಅವರು ಕನ್ನಡ ಚಲನಚಿತ್ರರಂಗ ಯಾರದ್ದೂ ಅಲ್ಲ, ಚಿತ್ರರಂಗದ ಪ್ರತಿಯೊಬ್ಬರನ್ನೂ ಸಹ ಕನ್ನಡ ಚಲನಚಿತ್ರ ಕಪ್‌ಗೆ ಆಹ್ವಾನಿಸಲಾಗುತ್ತದೆ, ಈ ಟೂರ್ನಿಯಲ್ಲಿ ಭಾಗವಹಿಸಬೇಕು ಎಂದು ಆಸೆ ಮತ್ತು ಆಸಕ್ತಿ ಇರುವ ಪ್ರತಿಯೊಬ್ಬರೂ ಸಹ ಇಲ್ಲಿ ಇರುತ್ತಾರೆ, ಬರದೇ ಇದ್ದವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.

    English summary
    Nobody can fill the gap of Puneeth Rajkumar says Kichcha Sudeep.
    Tuesday, January 24, 2023, 10:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X