»   » ರಜನಿ ಮನೆಯಲ್ಲಿ ಆ ಸ್ಥಳಕ್ಕೆ ಯಾರಿಗೂ ಎಂಟ್ರಿ ಇಲ್ಲ

ರಜನಿ ಮನೆಯಲ್ಲಿ ಆ ಸ್ಥಳಕ್ಕೆ ಯಾರಿಗೂ ಎಂಟ್ರಿ ಇಲ್ಲ

By: ಜೀವನರಸಿಕ
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅವರ ಗೆಳೆಯ ರಾಜ್ ಬಹಾದ್ದೂರ್ ಆರಾಮಾಗಿ ಹರಟುತ್ತಾ ಕುಳಿತಿದ್ರು. ಮುಸ್ಸಂಜೆಯಾಯ್ತು. ಸಂಜೆಯಾಯ್ತು, ಚಳಿ ಶುರುವಾಯ್ತು. ರಜನಿ, ಬಾರೋ ನನ್ನ ಸೀಕ್ರೇಟ್ ಪ್ಲೇಸ್ ಗೆ ನಿನ್ನನ್ನ ಕರ್ಕೊಂಡ್ ಹೋಗ್ತೀನಿ ಅಂತ ಮನೆಯೊಳಗೆ ಹೊರಟ್ರು.

ರಾಜ್ ಬಹಾದ್ದೂರ್ ರಜನಿಯನ್ನ ಹಿಂಬಾಲಿಸಿ ಹೊರಟ್ರು. ಅಲ್ಲೀವರೆಗೂ ಹೋಗದ ಮನೆಯೊಳಗೇ ಇದ್ದ ಅದೊಂದು ಸ್ಥಳಕ್ಕೆ ಮಾತ್ರ ರಜನಿಕಾಂತ್ ಮನೆಯಲ್ಲಿ ಯಾರಿಗೂ ಎಂಟ್ರಿ ಇರಲಿಲ್ಲ. [ರಜನಿಕಾಂತ್ ಗಿಂತಲೂ ಅಧಿಕ ಸಂಭಾವನೆ ಪಡೆದ ತಲೈವಾ]

Nobody enters that place in Rajinikanth house

ರಜನಿ ಆ ಕೋಣೆಯಲ್ಲಿದ್ದ ಡ್ರಿಂಕ್ಸ್ ಕಬೋರ್ಡ್ ಓಪನ್ ಮಾಡಿದರು. ಅಲ್ಲಿ ಸ್ಟಾಂಡರ್ಡ್ ಬ್ರ್ಯಾಂಡ್ ನ ಡ್ರಿಂಕ್ ಗಳೆಲ್ಲವೂ ಇದ್ದವು. ಡ್ರಿಂಕ್ಸ್ನ್ನ ಸಿಪ್ ಬೈ ಸಿಪ್ ಹೀರುತ್ತಾ ರಜನಿ ತಮ್ಮ ಪತ್ನಿ ಮತ್ತು ಮಕ್ಕಳನ್ನ ಕರೆದರು. ಎಲ್ಲರಿಗೂ ಒಂದು ಪ್ರಶ್ನೆ ಕೇಳಿದರು. ನಮ್ಮ ಮನೆಯಲ್ಲಿ ಈ ಜಾಗಕ್ಕೆ ಯಾರಿಗಾದ್ರೂ ಎಂಟ್ರಿ ಇದೆಯಾ?

ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ರನ್ನು ಕೂಡ ಇಲ್ಲಿಗೆ ಕರೆದುಕೊಂಡು ಬಂದಿಲ್ಲ. ಅವರನ್ನೆಲ್ಲಾ ಯಾವುದಾದ್ರೂ ಸ್ಟಾರ್ ಹೊಟೆಲ್ ಗೆ ಕರ್ಕೊಂಡು ಹೋಗ್ತೀನಿ. ಆದರೆ ಈ ಗೆಳೆಯನಿಗೆ ಮಾತ್ರ ಈ ಕೋಣೆಗೆ ಎಂಟ್ರಿ.

ಯಾಕಂದ್ರೆ ಇವತ್ತು ನನ್ನ ಸ್ಟಾರ್ ಪಟ್ಟ. ಕೋಟಿ ಕೋಟಿ ಆಸ್ತಿ ಬಂಗಲೆ. ತಲೈವಾ ಅನ್ನೋ ಹೆಸರು ಎಲ್ಲವೂ ಈ ಅಣ್ಣನಿಂದಾಗಿ. ಅವತ್ತು ಬಸ್ ಕಂಡಕ್ಟರಾಗಿದ್ದ ನನ್ನ ಪ್ರತಿಭೆ ಗುರುತಿಸಿ ಚೆನ್ನೈಗೆ ಕಳಿಸಿ ಕೊಡದಿದ್ರೆ. ಇವತ್ತು ರಜನಿಕಾಂತ್ ಅನ್ನೋ ಹೆಸರೇ ಇರ್ತಿರ್ಲಿಲ್ಲ ಅಂದ್ರಂತೆ.

ರಜನಿ ಪತ್ನಿ ಮಕ್ಕಳು ಒಂದು ಕ್ಷಣ ರಾಜ್ ಬಹಾದ್ದೂರ್ ಕಾಲು ಮುಟ್ಟಿ ನಮಸ್ಕರಿಸಿದರಂತೆ. ಇದು ಸ್ಟೈಲ್ಕಿಂಗ್ ಸ್ಟೈಲ್. ಗೆಳೆತನಕ್ಕೆ ರಜನಿಕೊಡೋ ಬೆಲೆ. ನಾವು ನಿಮ್ಗೆ ಹೇಳಿದ್ವಿ ರಜನಿಕಾಂತ್ರ ಇಂಟರೆಸ್ಟಿಂಗ್ ಸಂಗತಿಗಳನ್ನ ನಾವು ನಿಮ್ಗೆ ಆಗಾಗ ಕೊಡ್ತಾ ಇರ್ತೀವಿ ಅಂತ. ಇಂತಹಾ ಮತ್ತಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನ ಹೇಳ್ತಿರ್ತೀವಿ ತಪ್ಪದೇ ಓದ್ತಾ ಇರಿ.. ಒನ್ ಇಂಡಿಯಾ ಸಿನಿಮಾ ಸುದ್ದಿ.

English summary
Here is the onemore interesting fact about Super Star Rajinikanth. As of now nobody enters that place in his Chennai house, except his close friend Raj Bahadur.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada