ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟ ಯಾರಾಗಬಹುದು.?

By Bharath Kumar

ವರ್ಷ ಕಳೆಯಿತು, ಮತ್ತೊಂದು ವರ್ಷ ಬಂತು. ಈ ವರ್ಷದ ದಕ್ಷಿಣ ಭಾರತದ ಅತಿ ದೊಡ್ಡ ಪ್ರಶಸ್ತಿ ಸಮಾರಂಭ 'ಸೌತ್ ಫಿಲ್ಮ್ ಫೇರ್' ವೇದಿಕೆ ಸಜ್ಜಾಗಿದೆ. ಜೂನ್ 16 ರಂದು ಹೈದ್ರಾಬಾದ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದ್ದು, ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಸಿನಿತಾರೆಯರು ಭಾಗವಹಿಸಲಿದ್ದಾರೆ. ಅತ್ಯುತ್ತಮ ನಟ, ಸಿನಿಮಾ, ನಟಿ, ನಿರ್ದೇಶಕ, ಸಿನಿಮಾ ಹೀಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತೆ.

ಸದ್ಯ, 65ನೇ ಜಿಯೋ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ 'ಅತ್ಯುತ್ತಮ ನಟ' ವಿಭಾಗದಲ್ಲಿ ನಾಮಿನೇಷನ್ ಆಗಿರುವ ಸ್ಯಾಂಡಲ್ ವುಡ್ ಸ್ಟಾರ್ ಗಳ ಪಟ್ಟಿ ಬಹಿರಂಗವಾಗಿದೆ. ಈ ಸೂಪರ್ ಸ್ಟಾರ್ ಗಳಲ್ಲಿ ಯಾರಾಗಬಹುದು ಬೆಸ್ಟ್ ಆಕ್ಟರ್.? ಯಾರಿದ್ದಾರೆ ನಾಮಿನೇಷನ್ ನಲ್ಲಿ.? ಮುಂದೆ ಓದಿ....

ದರ್ಶನ್ 'ತಾರಕ್'

ದರ್ಶನ್ 'ತಾರಕ್'

ಚಾಲೆಂಜಿಂಗ್ ಸ್ಟಾರ್ ದರ್ಶನ್ 65ನೇ ಜಿಯೋ ಸೌತ್ ಫಿಲ್ಮ ಫೇರ್ ಪ್ರಶಸ್ತಿಯ ಅತ್ಯುತ್ತಮ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ಕಳೆದ ವರ್ಷ ತೆರೆಕಂಡಿದ್ದ ಸೂಪರ್ ಹಿಟ್ ಸಿನಿಮಾ 'ತಾರಕ್' ಚಿತ್ರದ ಅಭಿನಯಕ್ಕಾಗಿ ನಾಮನಿರ್ದೇಶನಗೊಂಡಿದ್ದಾರೆ. ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ದರ್ಶನ್ ಸಖತ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದರು.

ಪುನೀತ್ 'ರಾಜಕುಮಾರ'

ಪುನೀತ್ 'ರಾಜಕುಮಾರ'

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ರಾಜಕುಮಾರ' ಚಿತ್ರದ ನಟನೆಗಾಗಿ 65ನೇ ಜಿಯೋ ಸೌತ್ ಫಿಲ್ಮ ಫೇರ್ ಪ್ರಶಸ್ತಿಯ ಅತ್ಯುತ್ತಮ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ಸಂತೋಷ್ ಆನಂದ್ ರಾಮ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

ಗಣೇಶ್ 'ಮುಗುಳುನಗೆ'

ಗಣೇಶ್ 'ಮುಗುಳುನಗೆ'

ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಸೌತ್ ಫಿಲ್ಮ ಫೇರ್ ಪ್ರಶಸ್ತಿಯ ಅತ್ಯುತ್ತಮ ನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದು, ಮುಗುಳುನಗೆ ಚಿತ್ರದ ಅಭಿನಯಕ್ಕೆ ಗುರುತಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.

ಶಿವರಾಜ್ ಕುಮಾರ್

ಶಿವರಾಜ್ ಕುಮಾರ್

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಅಭಿನಯದಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ 'ಮಫ್ತಿ' ಸಿನಿಮಾಗಾಗಿ ಹ್ಯಾಟ್ರಿಕ್ ಹೀರೋ ನಾಮಿನೇಟ್ ಆಗಿದ್ದಾರೆ. ನರ್ತನ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಶಿವಣ್ಣ ಗ್ಯಾಂಗ್ ಸ್ಟರ್ ಪಾತ್ರ ನಿರ್ವಹಿಸಿದ್ದರು.

'ಹೆಬ್ಬುಲಿ' ಸುದೀಪ್

'ಹೆಬ್ಬುಲಿ' ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಕಳೆದ ವರ್ಷ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿತ್ತು. ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದ ಸುದೀಪ್ ತಮ್ಮ ಮಾಸ್ ನಟನೆಯಿಂದ ಮೋಡಿ ಮಾಡಿದ್ದರು. ಇದರ ಪರಿಣಾಮ ಈ ಚಿತ್ರದ ಅಭಿನಯಕ್ಕಾಗಿ ಸುದೀಪ್ ಕೂಡ ನಾಮಿನೇಟ್ ಆಗಿದ್ದಾರೆ.

ಯಾರಾಗಬಹುದು ಅತ್ಯುತ್ತಮ ನಟ.?

ಯಾರಾಗಬಹುದು ಅತ್ಯುತ್ತಮ ನಟ.?

ದರ್ಶನ್, ಪುನೀತ್ ರಾಜ್ ಕುಮಾರ್, ಗಣೇಶ್, ಶಿವರಾಜ್ ಕುಮಾರ್, ಸುದೀಪ್ ಈ ಐವರಲ್ಲಿ 65ನೇ ಫಿಲ್ಮ ಫೇರ್ ಪ್ರಶಸ್ತಿ ಯಾರಿಗೆ ಒಲಿಯಲಿದೆ. ಕೆಳಗೆ ನೀಡಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.

More from Filmibeat

English summary
Time to celebrate the best of South Indian cinema, which is only getting bigger and better every passing year. Come June 16th and we’ll see excellence in Tamil, Telugu, Malayalam and Kannada cinema being honoured in Hyderabad at the 65th Jio Filmfare Awards (South). But before that, take a look at who all our nominated this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X