ಇನ್ನಾದರು ನಮ್ಮವರು, ನಮ್ಮವರಿಗೆ ಜೈ ಎನ್ನುವ: ಜಗ್ಗೇಶ್ ಟ್ವೀಟ್ ಮರ್ಮವೇನು?

ಕನ್ನಡ ಚಲನಚಿತ್ರರಂಗದ ಕೆಲವರಿಗೆ ಡ್ರಗ್ಸ್ ನಂಟು ಇರುವ ಬಗ್ಗೆ ತನಿಖೆ ತೀವ್ರಗೊಂಡಿದ್ದು, ನಟಿ ರಾಗಿಣಿ ಸೇರಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆ ಇದೆ. ಕನ್ನಡ ಚಿತ್ರರಂಗದ ಡ್ರಗ್ಸ್ ನಂಟು ರಾಷ್ಟ್ರ ಮಟ್ಟದ ಸುದ್ದಿಯಾಗಿದೆ.

Recommended Video

25 ಸಲ ಹುಚ್ಚ ಸಿನಿಮಾನ ಥಿಯೇಟರ್ ನಲ್ಲಿ ನೋಡಿದ್ದೀನಿ | Kirik Keerthi | Filmibeat Kannada

ಡ್ರಗ್ಸ್ ಪ್ರಕರಣದಿಂದ ಕನ್ನಡ ಚಲನಚಿತ್ರರಂಗದ ಮಾನ ಹರಾಜಾಯಿತೆಂದು ಹಿರಿಯ ಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ. ಕಷ್ಟಪಟ್ಟು ಕಟ್ಟಿದ್ದ ಚಿತ್ರರಂಗವನ್ನು ಕೆಲವು ಯುವನಟ-ನಟಿಯರು ಹಾಳುಮಾಡಿದರೆಂದು ಆರೋಪಿಸಿದ್ದಾರೆ.

ಕನ್ನಡ ಚಿತ್ರರಂಗದ ಕೆಲವರಿಗೆ ಡ್ರಗ್ಸ್ ನಂಟು ಪ್ರಕರಣದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದ ಜಗ್ಗೇಶ್, 'ತಪ್ಪು ಮಾಡಿದವರನ್ನು ಗುರುತಿಸಿ ಕಠಿಣ ಶಿಕ್ಷೆ ವಿಧಿಸಿ' ಎಂದಿದ್ದಾರೆ. ಈ ಬಗ್ಗೆ ಹೊಸದೊಂದು ಟ್ವೀಟ್ ಮಾಡಿರುವ ಜಗ್ಗೇಶ್, ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದು ನೆಲೆ ಕಂಡುಕೊಂಡಿರುವ ನಟಿಯರಿಂದ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆರೋಪಿಸಿದ್ದಾರೆ.

'ನಮ್ಮ ಚಿತ್ರರಂಗದ ಮಾನ ಹರಾಜು ಹಾಕಿದ್ದಾರೆ'

'ನಮ್ಮ ಚಿತ್ರರಂಗದ ಮಾನ ಹರಾಜು ಹಾಕಿದ್ದಾರೆ'

'ಕನ್ನಡ್ ಸ್ವಲ್ಪಗೊತ್ತಿದೆ' ಎನ್ನುವ ಉತ್ತರದಿಂದ (ಉತ್ತರ ಭಾರತದಿಂದ) ಬಂದು ನಮ್ಮವರ ಮೋಡಿ ಮಾಡಿದವರೆ ನಮ್ಮಚಿತ್ರರಂಗದ ಮಾನ ಹರಾಜು ಹಾಕುತ್ತಿರುವುದು' ಎಂದು, ಉತ್ತರ ಭಾರತದಿಂದ ಬಂದು ಕನ್ನಡ ಚಿತ್ರರಂಗದಲ್ಲಿ ನೆಲೆಸಿರುವ ನಟಿಯರನ್ನು ಟೀಕಿಸಿದ್ದಾರೆ ಜಗ್ಗೇಶ್.

'ಇನ್ನು ಮೇಲಾದರು ನಮ್ಮವರು, ನಮ್ಮವರಿಗೆ ಜೈ ಅನ್ನುವ'

'ಇನ್ನು ಮೇಲಾದರು ನಮ್ಮವರು, ನಮ್ಮವರಿಗೆ ಜೈ ಅನ್ನುವ'

'ಕನ್ನಡ ಚಿತ್ರರಂಗದ ನಲ್ಮೆಯ ಕನ್ನಡದ ಹೆಣ್ಣುಮಕ್ಕಳು ನಮ್ಮತನ ಉಳಿಸಿಕೊಂಡು ನಮ್ಮ ಕಾಲದಿಂದ ಬದುಕಿದ್ದಾರೆ ಪಾಪ! ಇನ್ನು ಮೇಲಾದರು ನಮ್ಮವರು, ನಮ್ಮವರಿಗೆ ಜೈ ಅನ್ನುವ! ಕನ್ನಡದವರು ಕನ್ನಡಿಗರಿಗೆ ಕೈಎತ್ತಿ ಸಾಕು' ಎಂದಿದ್ದಾರೆ ನಟ ಜಗ್ಗೇಶ್.

ಹಲವರಿಗೆ ಉತ್ತರ ಭಾರತದ ನಂಟು

ಹಲವರಿಗೆ ಉತ್ತರ ಭಾರತದ ನಂಟು

ಡ್ರಗ್ಸ್ ಆರೋಪದಲ್ಲಿ ಸಿಕ್ಕಿಕೊಂಡಿರುವ ರಾಗಿಣಿ ದ್ವಿವೇದಿ ಪಂಜಾಬ್‌ನವರು, ಹೆಸರು ಕೇಳಿಬರುತ್ತಿರುವ ಸಂಜನಾ ಗಲ್ರಾನಿ ಉತ್ತರ ಭಾರತ ಮೂಲದವರು, ಆದರೆ ಬೆಳೆದಿದ್ದು ಬೆಂಗಳೂರಿನಲ್ಲಿ. ಡ್ರಗ್ಸ್ ಪ್ರಕರಣದಲ್ಲಿ ಪ್ರಸ್ತುತ ಬಂಧಿತವಾಗಿರುವರಲ್ಲಿ ಹಲವರು ಉತ್ತರ ಮೂಲದವರಾಗಿದ್ದಾರೆ.

ಜಗ್ಗೇಶ್ ಟ್ವೀಟ್‌ಗೆ ಸಹಮತ

ಜಗ್ಗೇಶ್ ಟ್ವೀಟ್‌ಗೆ ಸಹಮತ

ಜಗ್ಗೇಶ್ ಅವರ ಟ್ವೀಟ್‌ಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮೂಲದ ನಟಿಯರು ಡ್ರಗ್ಸ್‌ನಂಥಹವುಗಳಿಂದ ದೂರವಿರುತ್ತಾರೆ. ಇತರೆ ವಿವಾದಗಳಿಂದಲೂ ಅವರು ದೂರವಿರುತ್ತಾರೆ. ಇನ್ನು ಮುಂದೆ ನಮ್ಮ ಹೆಣ್ಣುಮಕ್ಕಳನ್ನು ಬೆಳೆಸೋಣ ಎಂಬರ್ಥದ ಪ್ರತಿಕ್ರಿಯೆಗಳು ಬಂದಿವೆ.

More from Filmibeat

English summary
North India origin heroines ruining Kannada movie industry name Jaggesh tweeted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X