ಉತ್ತರ ಭಾರತದಲ್ಲಿ ಹೇಗಿದೆ ಗೊತ್ತಾ 'ಟಾಕ್ಸಿಕ್' ಕ್ರೇಜ್; ಯಶ್ ಫೋಟೊಗೆ ಮುತ್ತಿಟ್ಟ ಮಹಿಳಾ ಅಭಿಮಾನಿ

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎನ್ನುವುದು ಗೊತ್ತಿಲ್ಲದೇ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಮುಂದಿನ ವಾರ ಸಿನಿಮಾ ಪ್ರೇಕ್ಷಕರ ಮುಂದೆ ಬರಬೇಕಿತ್ತು. ಆದರೆ ಬಿಡುಗಡೆ ದಿನಾಂಕ ಮುಂದೂಡಿ ಚಿತ್ರತಂಡ ನಿರಾಸೆ ಮೂಡಿಸಿದೆ.

'ಟಾಕ್ಸಿಕ್' ಸಿನಿಮಾ ನೋಡೋಕೆ ದೇಶವಿದೇಶಗಳಲ್ಲಿ ಪ್ರೇಕ್ಷಕರು ಕಾಯುವಂತಾಗಿದೆ. 4 ವರ್ಷಗಳಿಂದ ಯಶ್ ನಟನೆಯ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. 'ಕೆಜಿಎಫ್' ಸರಣಿ ಮೂಲಕ ವಿಶ್ವದಾದ್ಯಂತ ಯಶ್ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಕಿ ಭಾಯ್ ಆರ್ಭಟ ಕಂಡು ಉತ್ತರ ಭಾರತದ ಸಿನಿರಸಿಕರು ಫಿದಾ ಆಗಿದ್ದಾರೆ. ಹಾಗಾಗಿ 'ಟಾಕ್ಸಿಕ್' ಸಿನಿಮಾ ಎಲ್ಲಾ ಕಡೆ ನಿರೀಕ್ಷೆ ಹುಟ್ಟಾಕ್ಕಿದೆ.

North Indian female Fan Kisses Yash Toxic Poster Viral Instagram Video Wins Hearts

ಉತ್ತರ ಭಾರತದ ಮಹಿಳಾ ಅಭಿಮಾಯೊಬ್ಬರು ಯಶ್ ಫೋಟೊಗೆ ಮುತ್ತು ಕೊಟ್ಟಿರುವ ವಿಡಿಯೋ ವೈರಲ್ ಆಗ್ತಿದೆ. ಚಿತ್ರಮಂದಿರದ ಆವರಣದಲ್ಲಿ 'ಟಾಕ್ಸಿಕ್' ಚಿತ್ರದ ಸ್ಟ್ಯಾಂಡಿ ನಿಲ್ಲಿಸಲಾಗಿದೆ. ಅದರಲ್ಲಿ ರಾಯನ ಅವತಾರದಲ್ಲಿ ಯಶ್ ಖದರ್ ನೋಡಬಹುದು. ಇದೇ ಫೋಟೊಗೆ ಸಲೋನಿ ಪಾಂಡೆ ಎಂಬಾಕೆ ಮುತ್ತು ಕೊಟ್ಟಿದ್ದು ಜೂನ್ 4ರಂದು ಸಿನಿಮಾ ಬಿಡುಗಡೆಗೆ ಕಾಯುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್ ಆಗ್ತಿದೆ. ಪಾಪ ಜೂನ್ 4ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಲ್ಲ ಎನ್ನುವುದು ಕೂಡ ಆಕೆಗೆ ಗೊತ್ತಿಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ 'ಟಾಕ್ಸಿಕ್' ಸಿನಿಮಾ ಸೆಟ್ಟೇರಿತ್ತು. ಕಳೆದ ವರ್ಷ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಮೊದಲಿಗೆ ಹೇಳಿದ್ದರು. ಆದರೆ ಸಿನಿಮಾ ಸೆಟ್ಟೇರುವುದು ತಡವಾಗಿತ್ತು. ಬಳಿಕ ಈ ವರ್ಷ ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿ ನಿರಾಸೆ ಮೂಡಿಸಿದ್ದರು. ಟೀಸರ್, ಒಂದು ಸಾಂಗ್ ಬಿಡುಗಡೆ ಬಳಿಕ ಶಾಕ್ ಕೊಟ್ಟಿದ್ದರು. ಇರಾನ್-ಇಸ್ರೇಲ್ ಯುದ್ಧದ ನೆಪವೊಡ್ಡಿ ಜೂನ್ 4ಕ್ಕೆ ಸಿನಿಮಾ ರಿಲೀಸ್ ಎಂದು ಘೋಷಿಸಿದ್ದರು. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಮತ್ತೊಂದು ಶಾಕ್ ಕೊಟ್ಟರು. ಏಕಕಾಲಕ್ಕೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು, ಅದಕ್ಕಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

'ಟಾಕ್ಸಿಕ್' ಫೈನಲ್ ಕಾಪಿ ಸಿದ್ಧವಾದ ಬಳಿಕ ವಿದೇಶಗಳಲ್ಲಿ ವಿತರಕರಿಗೆ ತೋರಿಸಿ ವ್ಯವಹಾರ ಕುದುರಿಸಲು ಯಶ್ ಮುಂದಾಗಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೀತಿದೆ. ಹಾಲಿವುಡ್ ಸಿನಿಮಾಗಳ ರೀತಿ ಡಿಸೆಂಬರ್‌ ತಿಂಗಳಲ್ಲಿ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಬಹುದು ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಗೀತು ಮೋಹನ್ ದಾಸ್ ಈ ಗ್ಯಾಂಗ್‌ಸ್ಟರ್ ಡ್ರಾಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ನಯನತಾರ, ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಚಿತ್ರದ ತಾರಾಗಣದಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರಾಜೀವ್ ರವಿ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಗೋವಾ ಹಿನ್ನೆಲೆಯಲ್ಲಿ 'ಟಾಕ್ಸಿಕ್' ಸಿನಿಮಾ ಕಥೆ ಕಟ್ಟಿಕೊಡಲಾಗಿದೆ. ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ಯಶ್ ಬಣ್ಣ ಹಚ್ಚಿದ್ದಾರೆ.

ತಂದೆ- ಮಗನ ನಡುವಿನ ಜಿದ್ದಾಜಿದ್ದಿನ ಕಥೆ 'ಟಾಕ್ಸಿಕ್' ಚಿತ್ರದಲ್ಲಿದೆ. ಅಭಿಮಾನಿಗಳಂತೂ ಚಾತಕ ಪಕ್ಷಿಗಳ ರೀತಿ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗ್ತಿದೆ. ಲೇಟ್ ಆದರೂ ಲೇಟೆಸ್ಟ್ ಆಗಿ ರಾಯನ ಸವಾರಿ ಬರುತ್ತದೆ ಎಂದು ಕಾಯುವಂತಾಗಿದೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ನಿಗದಿಯಾಗಲಿದೆ.

Read more about: yash fan toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X