'ಬಯಲುಸೀಮೆ' ಟ್ರೈಲರ್ ನೋಡಿ ಸಿನಿಮಾ ನೋಡೋಕೆ ರೆಡಿಯಾಗಿ: ಜವಾರಿ ಭಾಷೆ ಸಿನಿಮಾಗೆ ಜೂ.ರೆಬಲ್ ಸ್ಟಾರ್ ಸಾಥ್

By ಫಿಲ್ಮಿಬೀಟ್ ಡೆಸ್ಕ್

ಕರ್ನಾಟಕ ಪ್ರತಿಯೊಂದು ಜಿಲ್ಲೆಯಲ್ಲೂ ಒಂದೊಂದು ಶೈಲಿಯ ಭಾಷೆ ಕಾಣಬಹುದು. ಆಚಾರ-ವಿಚಾರಗಳು ಬದಲಾಗುತ್ತವೆ. ಜನರ ಆಹಾರ ಪದ್ಧತಿ ಬದಲಾಗುತ್ತೆ. ಉತ್ತರ ಕರ್ನಾಟಕ ಭಾಗ ಕೂಡ ಹಾಗೇ. ಕೆಲವು ದೂರ ಸಾಗುತ್ತಿದ್ದಂತೆ ಆಚಾರ ವಿಚಾರಗಳು ಬದಲಾಗುತ್ತವೆ. ಹೀಗಾಗಿ ಈ ಭಾಗದ ಸಿನಿಮಾಗಳು ಬಂದಿದ್ದು ತೀರಾ ಕಡಿಮೆ.

ಕೆಲವು ದಿನಗಳ ಹಿಂದಷ್ಟೇ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ಉತ್ತರ ಕರ್ನಾಟಕದ ಸಿನಿಮಾ ಶೈಲಿ ಬಗ್ಗೆ ಒಲವನ್ನು ತೋರಿದ್ದರು. ಆ ಭಾಗದ ಸಿನಿಮಾಗಳು ಬರಬೇಕು. ಅಲ್ಲಿನ ಮಣ್ಣಿನ ಕಥೆಯನ್ನು ಜನರಿಗೆ ತೋರಿಸಬೇಕು ಎಂದಿದ್ದರು. ಅದರಂತೆಯೇ ಈಗ 'ಬಯಲುಸೀಮೆ' ಅಂತ ಟೈಟಲ್ ಇಟ್ಟೇ ಸಿನಿಮಾ ಮಾಡಿದ್ದು ಅದು ಈಗ ಬಿಡುಗಡೆಗೆ ಸಜ್ಜಾಗಿದೆ.

North Karnataka Jawari Movie Bayaluseeme trailer released

ಉತ್ತರ ಕರ್ನಾಟಕ ಶೈಲಿಯ ರಗಡ್ ಸ್ಟೋರಿ ಇರುವ ಸಿನಿಮಾ 'ಬಯಲುಸೀಮೆ'. ಈ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಈ ಟ್ರೈಲರ್ ಅನ್ನು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

'ಬಯಲುಸೀಮೆ' ಟ್ರೈಲರ್ ಸುಮಾರು 2 ನಿಮಿಷ 50 ಸೆಕೆಂಡ್ ಇದೆ. ಉತ್ತರ ಕರ್ನಾಟಕದ ಭಾಷೆಯನ್ನೇ ಪ್ರಮುಖವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಕಥೆಯಲ್ಲಿ ರೋಚಕ ತಿರುವುಗಳು, ಜವಾರಿ ಭಾಷೆಯ ಸಂಭಾಷಣೆ, ರಾಜಕೀಯ ಮೇಲಾಟದ ಸುತ್ತ ಕಥೆ ಸಾಗುತ್ತದೆ. ಈಗಾಗಲೇ ಹಾಡುಗಳ ಮೂಲಕ ಗಮನಸೆಳೆದಿರುವ 'ಬಯಲುಸೀಮೆ' ಟ್ರೈಲರ್ ಬಿಟ್ಟು ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

'ಬಯಲುಸೀಮೆ' ಸಿನಿಮಾವನ್ನು ವರುಣ್ ಕಟ್ಟಿಮನಿ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಹಾಗೇ ಸಂಯುಕ್ತ ಹೊರನಾಡು ನಾಯಕಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

North Karnataka Jawari Movie Bayaluseeme trailer released

ಉತ್ತರ ಕರ್ನಾಟಕ ಅಂದ ಮಾತ್ರಕ್ಕೆ ಹೊಸ ಪ್ರತಿಭೆಗಳೇನೂ ಇಲ್ಲ. ಸ್ಯಾಂಡಲ್‌ವುಡ್‌ನ ಹಿರಿಯ ಕಲಾವಿದರೇ ಇದ್ದಾರೆ. ಟಿ.ಎಸ್ ನಾಗಾಭರಣ, ರವಿಶಂಕರ್ ಅಂತ ದಿಗ್ಗಜರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕಲ್ನವರ್, ಪ್ರದೀಪ್ ರಾಜ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ.

ಈ ಸಿನಿಮಾವನ್ನು ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಳ್ಳಿ, ರಶ್ಮೀ ವರುಣ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಗಜೇಂದ್ರಗಡ, ಬೀಳಗಿ, ಮುಂಬೈನಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸುಜಯ್ ಕುಮಾರ್ ಬಾವಿಕಟ್ಟಿ ಕ್ಯಾಮೆರಾವರ್ಕ್, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಎಡಿಟಿಂಗ್ ಮಾಡಿದ್ದು, ಸಿನಿಮಾ ಆಗಸ್ಟ್ 18ರಂದು ರಿಲೀಸ್ ಆಗಿದೆ.

More from Filmibeat

English summary
North Karnataka Jawari Movie Bayaluseeme trailer released by Abhishek Ambareesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X