»   » 'ಬಲುಪು' ಗಾಸಿಪ್ಪನ್ನು ಅಳಿಸಿಹಾಕಿದ ಕಿಚ್ಚ ಸುದೀಪ್

'ಬಲುಪು' ಗಾಸಿಪ್ಪನ್ನು ಅಳಿಸಿಹಾಕಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

ಕಿಚ್ಚ ಸುದೀಪ್ ರೀಮೇಕ್ ಲಿಸ್ಟ್ ಗೆ ಹೊಸ ಎಂಟ್ರಿ 'ಬಲುಪು' ಅನ್ನುವ ಸುದ್ದಿ ನಿನ್ನೆಯಷ್ಟೇ ಗಾಂಧಿನಗರದಲ್ಲಿ ಸ್ಪೋಟಗೊಂಡಿತ್ತು.

ಮಾಸ್ ಮಹಾರಾಜಾ ರವಿತೇಜಾ ಅಭಿನಯದ 'ಬಲುಪು' ಚಿತ್ರದ ರೀಮೇಕ್ ನಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ ಅಂತ ಯಾರು ಗುಲ್ಲೆಬ್ಬಿಸಿದರೋ, ಗೊತ್ತಿಲ್ಲ. ಎಲ್ಲೆಡೆ ಬ್ರೇಕಿಂಗ್ ನ್ಯೂಸ್ ಆಗಿ ಹರಿದಾಡಿದ್ದ ಈ ಸುದ್ದಿಗೆ ಈಗ ಕಿಚ್ಚ ಸುದೀಪ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ['ಬಲುಪು' ರೀಮೇಕ್ ನಲ್ಲಿ ಕಿಚ್ಚ ಸುದೀಪ್?]

Not in Balupu remake; Kiccha Sudeep clarifies

'ಬಲುಪು' ಚಿತ್ರದ ಕನ್ನಡ ಅವತರಣಿಕೆಯಲ್ಲಿ ಸುದೀಪ್ ಅಭಿನಯಿಸುತ್ತಿಲ್ಲ. ಹಾಗಂತ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

''ನಾನು 'ಬಲುಪು' ರೀಮೇಕ್ ನಲ್ಲಿ ಕಾಣಿಸಿಕೊಳ್ತೀನಿ ಅನ್ನೋದು ಸುಳ್ಳು ಸುದ್ದಿ. ಈ ಬಗ್ಗೆ ಮಾತುಕತೆ ಕೂಡ ನಡೆದಿಲ್ಲ'' ಅಂತ ತಮ್ಮ ಟ್ವೀಟ್ ಮೂಲಕ ಅಭಿಮಾನಿಗಳ ಪ್ರೀತಿಯ 'ನಲ್ಲ' ಸ್ಪಷ್ಟಪಡಿಸಿದ್ದಾರೆ. [ಸುದೀಪ್ ರೀಮೇಕ್ ಚಿತ್ರಗಳ ಚಿದಂಬರ ರಹಸ್ಯ ಬಯಲು]

ಸುದೀಪ್ ಮಾಡಿರುವ ಈ ಟ್ವೀಟ್ ನ ನೋಡಿ, ಅವರ ಸಾವಿರಾರು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ, ಸುದೀಪ್ ಮುಂದಿನ ಚಿತ್ರಕ್ಕೆ ಶುಭ ಕೋರಿದ್ದಾರೆ. [ಸುದೀಪ್ ರೀಮೇಕ್ ಚಿತ್ರಗಳ ಹಿಂದಿನ ಸತ್ಯ ಸಂಗತಿ]ಸದ್ಯ 'ಗಜಕೇಸರಿ' ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಮತ್ತು ಕಾಲಿವುಡ್ ಖ್ಯಾತ ನಿರ್ದೇಶಕ ಕೆ.ಎಸ್.ರವಿಕುಮಾರ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಬಿಜಿಯಾಗಿದ್ದಾರೆ. ಎರಡೂ ಚಿತ್ರಗಳಿಗೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್.

English summary
Kiccha Sudeep has taken his twitter account to clarify that his is not part of 'Balupu' remake.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada