"ಕೆಜಿಎಫ್, ಕಾಂತಾರ ಬ್ಲಾಕ್ ಹೋಗಿಲ್ಲ.. ಕಾಟೇರ ಹೋಗ್ತಿದೆ"; ಮತ್ತೆ ಶುರುವಾಯ್ತಾ ಬ್ಲಾಕ್ ಟಿಕೆಟ್?

By ಫಿಲ್ಮಿಬೀಟ್ ಡೆಸ್ಕ್

ಒಂದು ಕಾಲದಲ್ಲಿ ಬ್ಲಾಕ್ ಟಿಕೆಟ್ ಸಂಸ್ಕೃತಿ ಹೆಚ್ಚು ಪ್ರಚಲಿತದಲ್ಲಿ ಇತ್ತು. ಯಾರದ್ದಾದರೂ ಸೂಪರ್‌ಸ್ಟಾರ್ ಸಿನಿಮಾ ರಿಲೀಸ್ ಆಗಿದೆ ಅಂದ್ರೆ, ಮೊದಲ ಮೂರು ದಿನ ಸಿನಿಮಾ ನೋಡುವುದಕ್ಕೆ ಡಬಲ್ ದುಡ್ಡು ಕೊಟ್ಟು ಖರೀದಿ ಮಾಡಬೇಕಿತ್ತು.

ಥಿಯೇಟರ್‌ನ ಟಿಕೆಟ್ ಕೌಂಟರ್‌ನ ಮುಂಬದಿಯಲ್ಲಿ ಜನರು ಕ್ಯೂನಲ್ಲಿ ನಿಂತು ಕಾಯ್ತಿದ್ರೆ, ಇನ್ನೊಂದು ಕಡೆ 100ಕ್ಕೆ ಒಂದು, 200ಕ್ಕೂ ಒಂದು ಅನ್ನೋ ಕೂಗು ಕೇಳಿಸೋಕೆ ಸಿಗ್ತಿತ್ತು. ಆದರೂ ಜನರು ಟಿಕೆಟ್ ಬೆಲೆಯ ದುಪ್ಪಟ್ಟು ಹಣವನ್ನು ಕೊಟ್ಟು ಖರೀದಿ ಮಾಡಿ ಸಿನಿಮಾ ನೋಡುತ್ತಿದ್ದರು. ಆದರೆ, ಈ ವಾತಾವರಣ ಇತ್ತೀಚೆಗ್ಯಾಕೋ ಕಾಣಿಸುವುದಕ್ಕೆ ಸಿಗುತ್ತಿರಲಿಲ್ಲ.

Not KGF, Not Kantara people are taking tickets from black says distributer

ಮಲ್ಟಿಪ್ಲೆಕ್ಸ್ ಬಂದ್ಮೇಲೆ ಥಿಯೇಟರ್ ಮುಂದೆ ಬ್ಲಾಕ್ ಟಿಕೆಟ್ ಮಾರುವವರ ಸಂಖ್ಯೆ ಕಡಿಮೆಯಾಗಿತ್ತು. ಅದರಲ್ಲೂ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡೋಕೆ ಅವಕಾಶ ಸಿಗುತ್ತಿದ್ದಂತೆ ಮತ್ತಷ್ಟು ಕಡಿಮೆ ಆಯ್ತು. ಇತ್ತೀಚೆಗೆ ಬ್ಲಾಕ್ ಟಿಕೆಟ್ ಮಾರುವವರ ಸಂಖ್ಯೆ ಕೂಡ ಕಡಿಮೆ ಆಗಿದೆ. ಆದ್ರೀಗ 'ಕಾಟೇರ' ಮೂಲಕ ಮತ್ತೆ ಬ್ಲಾಕ್ ಟಿಕೆಟ್ ಸದ್ದು ಕೇಳಿಸುತ್ತಿದೆ. 'ಕೆಜಿಎಫ್', 'ಕಾಂತಾರ' ಸಿನಿಮಾಗಳೇ ಬ್ಲಾಕ್‌ನಲ್ಲಿ ಹೋಗಿಲ್ಲ. 'ಕಾಟೇರ' ಟಿಕೆಟ್‌ಗಳು ಬ್ಲಾಕ್‌ನಲ್ಲಿ ಮಾರಾಟ ಆಗುತ್ತಿವೆ ಅಂತ ಥಿಯೇಟರ್ ಮಾಲೀಕರೊಬ್ಬರು ಹೇಳಿದ್ದಾರೆ.

'ಕಾಟೇರ' ಸಿನಿಮಾ ರಿಲೀಸ್ ಆಗಿ ಆರು ದಿನಗಳಾಗಿದೆ. ಆದರೆ, ಕಳೆದ ಐದು ದಿನಗಳಿಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದೆ. ಗಳಿಕೆಯಲ್ಲಿ ಈ ಸಿನಿಮಾ ಹಿಂದೆ ಬಿದ್ದಿದ್ದೇ ಇಲ್ಲ. ಕಳೆದ ಐದು ದಿನಗಳಿಂದಲೂ 'ಕಾಟೇರ' ಗಲ್ಲಾಪಟ್ಟೆಯಲ್ಲಿ ಸಿಕ್ಕಾಪಟ್ಟೆ ಹಣವನ್ನು ದೋಚಿದೆ. 6ನೇ ದಿನವೂ ಅದೇ ಕ್ರೇಜ್ ಮುಂದುವರೆದಿದೆ ಎನ್ನಲಾಗಿದೆ.

'ಕಾಟೇರ' ಕ್ರೇಜ್ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ತಮಿಳುನಾಡಿನ ಹೊಸೂರು, ಗೋವಾ, ಪುಣೆಯಲ್ಲಿ ಈ ಸಿನಿಮಾದ ಶೋಗಳನ್ನು ಏರಿಕೆ ಮಾಡಲಾಗಿದೆ ಎಂಬ ಸುದ್ದಿಯಿದೆ. ಹೀಗಾಗಿ ಪ್ರದರ್ಶಕರು ಹಾಗೂ ವಿತರಕರು ಕೂಡ ಫುಲ್ ಹ್ಯಾಪಿ ಆಗಿದ್ದಾರೆ. ಬೆಂಗಳೂರಿನ ಜನಪ್ರಿಯರ ವಿತರಕ ಹಾಗೂ ಪ್ರದರ್ಶಕ ನರಸಿಂಹಲು 'ಕಾಟೇರ' ಸಿನಿಮಾವನ್ನು ಬ್ಲಾಕ್‌ನಲ್ಲಿ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡುತ್ತಿದ್ದಾರೆ ಎಂದು ಮ್ಯಾಂಗೋ ಸಮಾಚಾರ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Not KGF, Not Kantara people are taking tickets from black says distributer

ನರಸಿಂಹಲು ಪ್ರಕಾರ, ಕೆಜಿಎಫ್ ಸಿನಿಮಾ ಬಂದ್ಮೇಲೆ ಮಾಸ್ ಸಿನಿಮಾ ಅಂತ ಕನ್ನಡಕ್ಕೆ ಬರುತ್ತಿರೋದು 'ಕಾಟೇರ'ನೇ. ಕನ್ನಡಿಗರು ಭಾಷೆ ಸಿನಿಮಾ ಚೆನ್ನಾಗಿದ್ದರೆ ನೋಡುತ್ತಾರೆ ಅನ್ನೋದಕ್ಕೆ ಈ ಸಿನಿಮಾನೇ ಸಾಕ್ಷಿ ಅನ್ನೋದನ್ನು ಸಂದರ್ಶನದ ವೇಳೆ ಹೇಳಿದ್ದಾರೆ. "ನಮ್ಮ ಕನ್ನಡದ ಜನ ಹೇಗೆ ಅಂದರೆ, ಯಾವುದೇ ಭಾಷೆಯಾಗಿದ್ದರೂ ಸಿನಿಮಾ ಚೆನ್ನಾಗಿದ್ದರೆ ತಗೋತಾರೆ. ಕೆಜಿಎಫ್ ಮಾಡಿದ್ರು, ಅದನ್ನು ತಗೊಂಡ್ರು, ಕೆಜಿಎಫ್ ಆದ್ಮೇಲೆ ಮಾಸ್ ಸಿನಿಮಾ ಇದೇನೆ." ಎಂದು ಹೇಳಿದ್ದಾರೆ.

ಹಾಗೇ ಕೆಜಿಎಫ್ ಮಾಸ್ ಸಿನಿಮಾ ಆಗಿದ್ದರೂ ಬ್ಲಾಕ್‌ನಲ್ಲಿ ಟಿಕೆಟ್ ಸೇಲ್ ಆಗಿಲ್ಲ. ಕಾಂತಾರನೂ ಆಗಿಲ್ಲ. 'ಕಾಟೇರ' ಆಗುತ್ತಿದೆ ಎಂದಿದ್ದಾರೆ. "ಕಾಂತಾರ ಬ್ಲಾಕ್ ಹೋಗಿಲ್ಲ. ಕೆಜಿಎಫ್ ಬ್ಲಾಕ್ ಹೋಗಿಲ್ಲ. ಆದರೆ ಕಾಟೇರ ಬ್ಲಾಕ್ ಹೋಗುತ್ತಿದೆ. ಜನ ಬ್ಲಾಕ್‌ ಕೊಟ್ಟು ನೋಡುತ್ತಿದ್ದಾರೆ. 200-300 ಟಿಕೆಟ್ ಬೆಲೆ ಇಟ್ಟರೆ, ಅದಕ್ಕೆ 200 ರೂಪಾಯಿ ಕೊಟ್ಟು ಜನ ಬ್ಲಾಕ್ ನೋಡುತ್ತಿದ್ದಾರೆ." ಎಂದು ಹೇಳಿದ್ದಾರೆ.

More from Filmibeat

English summary
Audience took tickets from Black for Darshan movie Kaatera, but it did not happen with KGF, Kantara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X