ಲೋಕಸಭೆಗೆ ಅಲ್ಲ, ವಿಧಾನಸಭೆಗೆ ಉಪ್ಪಿ ಟಾರ್ಗೆಟ್
Recommended Video

ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದೆಯೇ? ಎನ್ನುವ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಉಪೇಂದ್ರ ಅವರ ಪಕ್ಷ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದೆ.
ಚುನಾವಣಾ ತಯಾರಿಯ ಬಗ್ಗೆ ಜಿಲ್ಲಾ ಕೇಂದ್ರಗಳಲ್ಲಿ ಉಪೇಂದ್ರ ಪತ್ರಿಕಾಗೋಷ್ಠಿ ಮಾಡಿ ಮಾಹಿತಿ ನೀಡುತ್ತಿದ್ದಾರೆ. ನಿನ್ನೆ ಹುಬ್ಬಳ್ಳಿಯ ಪ್ರೆಸ್ ಮೀಟ್ ನಲ್ಲಿ ಮಾತನಾಡಿರುವ ಉಪ್ಪಿ ಲೋಕಸಭೆಗಿಂತ ವಿಧಾನಸಭೆ ಅವರ ಟಾರ್ಗೆಟ್ ಎಂದು ಹೇಳಿದ್ದಾರೆ.
ಉಪೇಂದ್ರ ಪಕ್ಷ ಈ ಬಾರಿಯ ಚುನಾವಣೆಯನ್ನ ಎದುರಿಸುತ್ತಿದ್ದರೂ, ಉಪ್ಪಿ ತಾವೇ ಅಖಾಡಕ್ಕೆ ಇಳಿಯುತ್ತಾರ ಇಲ್ವಾ ಎನ್ನುವ ಕುತೂಹಲ ಇತ್ತು. ಸದ್ಯ ಅವರೇ ಹೇಳಿರುವ ಹಾಗೆ ಲೋಕಸಭಾ ಚುನಾವಣೆಗೆ ಅವರು ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ, ವಿಧಾನಸಭೆಯಲ್ಲಿ ಒಂದು ಕೈ ನೋಡಲಿದ್ದಾರೆ.

ಉಪ್ಪಿ ಇಲ್ಲದೆ ಇದ್ದರೂ ಅವರ ಅಭ್ಯರ್ಥಿಗಳು ಎಲ್ಲ ಕಡೆಯಿಂದ ಸ್ಪರ್ಧೆ ಮಾಡಲಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಉತ್ತಮ ಪ್ರಜಾ ಪಾರ್ಟಿ ಯಾವ ರೀತಿ ಕಮಾಲ್ ಮಾಡುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಕರ್ನಾಟಕಕ್ಕೆ ಪ್ರಬಲ ಪ್ರಾದೇಶಿಕ ಪಕ್ಷ ಬೇಕು ಎನ್ನುವ ಉಪ್ಪಿ ಅದೇ ಹಾದಿಯಲ್ಲಿ ಸಾಗುವ ಪ್ಲಾನ್ ಮಾಡಿದ್ದಾರೆ.


Click it and Unblock the Notifications











