ಇದು ನಾನು ಆಡಿದ ನಾಟಕವಂತೂ ಅಲ್ಲ ಎಂದ ಶ್ರುತಿ
ಒಂದೇ ಒಂದು ಸಮಾಧಾನದ ವಿಚಾರ ಅಂದರೆ, ನನ್ನಿಂದ ಇನ್ನೊಬ್ಬರಿಗೆ ಅನ್ಯಾಯವಾಗುವುದು ತಪ್ಪಿ ಹೋಗಿದೆ. ಜನ ನೂರೆಂಟು ಮಾತನಾಡಬಹುದು. ಶ್ರುತಿ ಅವರು ಮದುವೆಯನ್ನು ಅಸಿಂಧುಗೊಳಿಸಿ ಎಂದು ಕೇಳಿರುವುದು ಇನ್ನೊಂದು ನಾಟಕ. ಬಹುಶಃ ಅವರಿಗೇನಾದರೂ ತೊಂದರೆಯಾಗುತ್ತದೇನೋ ಎಂಬ ಕಾರಣ ಅವರು ಈ ರೀತಿ ಮಾಡಿದರು ಎಂದು ಟಿವಿಯಲ್ಲಿ ಮಾತನಾಡಿದ್ದನ್ನು ನೋಡಿದ್ದೇನೆ.
ಏನಾಯಿತು ಎಂಬುದು ದೇವರಿಗೆ ಗೊತ್ತು. ಚಂದ್ರಚೂಡ್ ಅವರಿಗೂ ಗೊತ್ತಿದೆ. ಮಾಧ್ಯಮಗಳ ಜೊತೆ ಅವರು ಹಲವಾರು ಬಾರಿ ಮಾತನಾಡಿದ್ದಾರೆ. ತಪ್ಪು ಮಾಡಿದ್ದು ಯಾರೋ ಶಿಕ್ಷೆ ಅನುಭವಿಸಿದ್ದು ಯಾರೋ. ಪರ್ವಾಗಿಲ್ಲ ಈ ಒಂದು ಸಣ್ಣ ಸಮಾಧಾನವನ್ನಾದರೂ ದೇವರು ಕೊಟ್ಟರಲ್ಲಾ.
ಈ ವಿಚಾರದಲ್ಲಿ ನಾನು ಶೋಷಿತಳು. ತುಂಬಾ ನೊಂದಿದ್ದೇನೆ. ಇದಕ್ಕಿಂತಲೂ ಹೆಚ್ಚಿನ ಪದಗಳನ್ನು ಬಳಸುವ ಜಾಣ್ಮೆಯಾಗಲಿ, ಶಕ್ತಿಯಾಗಲಿ ನನಗಿಲ್ಲ. ಈ ಮದುವೆಯಿಂದ ನನಗೆ ಯಾವ ಸಂತೋಷವೂ ಸಿಗಲಿಲ್ಲ, ನೆಮ್ಮದಿಯೂ ಸಿಗಲಿಲ್ಲ. ಇರೋ ನೆಮ್ಮದಿ, ಸಂತೋಷ ಹಾಳಾಯಿತು.
ಏನೂ ತೊಂದರೆ ಇಲ್ಲ ದೇವರು ಕೊಟ್ಟಂತಹ ಮಗಳಿದ್ದಾಳೆ, ಕೈಯಲ್ಲಿ ವೃತ್ತಿ ಇದೆ. ನನ್ನ ಜೊತೆಗೆ ಅಭಿಮಾನಿಗಳಿದ್ದಾರೆ. ಮಂಜುಳಾ ಮತ್ತು ಚಂದ್ರಚೂಡ್ ಸಂಬಂಧ ಸರಿಹೋಗಲಿ ಎಂದು ಆಶಿಸುತ್ತೇನೆ. ಇನ್ನು ಅದು ಅವರಿಬ್ಬರ ವೈಯಕ್ತಿಕ ವಿಚಾರ. ಅವರ ಮೇಲೆ ಇವರಿಗೆ ಪ್ರೀತಿ, ಇವರ ಮೇಲೆ ಅವರಿಗೆ ಇದ್ದರೆ ಖಂಡಿತ ಸೇರುತ್ತಾರೆ.
ಯಾವುದೇ ಒಂದು ಸಂಬಂಧಗಳು , ಕುಟುಂಬಗಳು ಒಡೆದು ಹೋಗಬಾರದು. ಒಂದುಗೂಡಿಸುವುದಿದ್ದಲೆ ನಾನೆ ಮುಂದೆ ಬರುತ್ತೇನೆ. ಅವರಿಬ್ಬರೂ ಚೆನ್ನಾಗಿರಲಿ. ಅವರ ಸಂಬಂಧವನ್ನು ಚೆನ್ನಾಗಿ ಮಾಡುವುದು ನನ್ನ ಕೈಯಲ್ಲಿಲ್ಲ. ಅದು ಅವರಿಗೇ ಬಿಟ್ಟದ್ದು.
ಸಂತೋಷವಾಗಿ ಬದುಕುವ ಹಾಗಿದ್ದರೆ ಮಂಜುಳಾ ಒಂದು ಚಾನ್ಸ್ ತಗೊಳ್ಳಲಿ ಲೈಫಲ್ಲಿ. ನಾವೆಲ್ಲಾ ಅವಕಾಶಗಳನ್ನು ಕಳೆದುಕೊಂಡಿದ್ದೇವೆ. ನೋವು ಏನು ಎಂಬುದನ್ನು ಅನುಭವಿಸಿದ್ದೇವೆ. ಆ ನೋವು ಇನ್ನೊಬ್ಬ ಹೆಣ್ಣಿಗೆ ಆಗಬಾರದು.


Click it and Unblock the Notifications












