For Quick Alerts
  ALLOW NOTIFICATIONS  
  For Daily Alerts

  ಕನ್ನಡ ಮೂಲದ ಬಾಲಿವುಡ್‌ ಛಾಯಾಗ್ರಾಹಕ ಈಶ್ವರ ಬಿದರಿ ನಿಧನ

  |

  ಬಾಲಿವುಡ್‌ನ ಖ್ಯಾತ ಸಿನಿಮಾ ಛಾಯಾಗ್ರಾಹಕ ಈಶ್ವರ್ ಬಿದರಿ ಭಾನುವಾರ ಬೆಳಗ್ಗೆ ಕರ್ನಾಟಕದ ಬೆಳಗಾವಿಯಲ್ಲಿ ನಿಧನರಾಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 87 ವರ್ಷ ಬಿದರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

  ಸಂಬಂಧಿಯೊಬ್ಬರ ಮದುವೆ ಹಿನ್ನೆಲೆ ಕಳೆದ ವಾರ ಮುಂಬೈನಿಂದ ಬೆಳಗಾವಿಗೆ ಹೋಗಿದ್ದರು. ಬೆಳಗಾವಿಯಲ್ಲಿ ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಭಾನುವಾರ ಬೆಳಗ್ಗೆ 9.55ಕ್ಕೆ ನಿಧನರಾದರು ಎಂದು ಅವರ ಮಗ ಸಂಜೀವ್ ಬಿದರಿ ಪಿಟಿಐಗೆ ತಿಳಿಸಿದ್ದಾರೆ. (ಇಂಡಿಯಾ ಟು ಡೇ ವರದಿ ಮಾಡಿದೆ)

  ಯುವ ನಿರ್ದೇಶಕ ಭರತ್ ಸಾವಿಗೆ ಮರುಗಿದ ಚಿತ್ರ ಸಾಹಿತಿ ಕವಿರಾಜ್

  ಕನ್ನಡ ಮೂಲದ ಬಾಲಿವುಡ್‌ ಛಾಯಾಗ್ರಾಹಕ ಈಶ್ವರ ಬಿದರಿ ಬೆಂಗಳೂರಿನ ಎಸ್‌ಜೆ ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೋಗ್ರಫಿ ಕಲಿತಿದ್ದರು. ನಂತರ ಮುಂಬೈಗೆ ತೆರಳಿ ಕನ್ನಡಿಗರೇ ಆದ ವಿ.ಕೆ.ಮೂರ್ತಿಯವರ ಬಳಿ ಸಹಾಯಕರಾಗಿ ಕೆಲಸ ಮಾಡಿದರು.

  ವಿ.ಕೆ.ಮೂರ್ತಿ ಛಾಯಾಗ್ರಹಣ ಮಾಡಿರುವ 'ಪ್ಯಾಸಾ', 'ಕಾಗಝ್‌ ಕೆ ಫೂಲ್‌' ಸೇರಿದಂತೆ ಹಲವು ಹಿಂದಿ ಚಿತ್ರಗಳಿಗೆ ಬಿದರಿಯವರು ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದರು.

  ನಂತರ ಸ್ವತಂತ್ರ ಛಾಯಾಗ್ರಾಹಕರಾಗಿ ಬಾರ್ಡರ್, ಘಾತಕ್, ಅಂದಾಜ್, ಢಾಯಿ ಅಕ್ಷರ್ ಪ್ರೇಮ್ ಕೆ, ಅಂದಾಜ್ ಅಪ್ನಾ ಅಪ್ನಾ, ದಾಮಿನಿ, ಬಟ್ವಾರಾ, ಘುಲಾಮಿ, ಹತ್ಯಾರ್, ಯತೀಮ್ ಸೇರಿದಂತೆ ಹಲವು ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.

  ಚಿತ್ರೀಕರಣ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ ನಟ!

  ಉಲ್ಟಾ ಹೊಡೆದ Rajni ರಾಜಕೀಯ ಜೀವನ | Filmibeat Kannada

  ಈಶ್ವರ ಬಿದರಿಯವರು ಮಾಜಿ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರ ಸೋದರ ಸಂಬಂಧಿ.

  English summary
  Noted cinematographer Ishwar Bidri breathed his last yesterday in Belgaum. he suffered a heart attack during the wedding celebration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X