twitter
    For Quick Alerts
    ALLOW NOTIFICATIONS  
    For Daily Alerts

    ನಿರ್ದೇಶಕ ಭಗವಾನ್ ಬಳಿ ಪಾರ್ವತಮ್ಮ ರಾಜಕುಮಾರ್ ಮಾಡಿದ್ದ ಅಪರೂಪದ ಕೋರಿಕೆ ಬಹಿರಂಗ

    |

    ಕೆಲವೊಂದು ವಿಚಾರಗಳು ಸಮಯ, ಸಂದರ್ಭ ಬಂದಾಗಲೇ ಬಹಿರಂಗವಾಗುವುದು ಎನ್ನುವುದಕ್ಕೆ ಇದೊಂದು ಉದಾಹರಣೆ. ರಾಜ್ ವೃತ್ತಿ ಜೀವನದ ಬಹುದೊಡ್ದ ಹಿಟ್ ಸಿನಿಮಾಗಳಲ್ಲಿ ಒಂದಾದ ಕಸ್ತೂರಿ ನಿವಾಸ ಡಿಜಿಟಲೀಕರಣಗೊಂಡಾಗಿನ ಸುದ್ದಿಯಿದು.

    Recommended Video

    Sushant Singh Rajput:ಸುಶಾಂತ್ ಸಿಂಗ್ ಸಾವಿನ ಕೇಸಿಗೆ ತಿರುವು ನೀಡಿದ ವರದಿ! | Filmibeat Kannada

    ಸುಮಾರು ಏಳು ವರ್ಷಗಳ ಹಿಂದೆ ವರನಟ ಡಾ.ರಾಜಕುಮಾರ್ ಅವರ ಪತ್ನಿ ಪಾರ್ವತಮ್ಮ, ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್ ಅವರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದರು. ಅದನ್ನು ಇತ್ತೀಚೆಗೆ ಭಗವಾನ್ ಅವರು ಬಹಿರಂಗ ಪಡಿಸಿದ್ದಾರೆ.

    ಬಣ್ಣ ತುಂಬಿಕೊಂಡು ಬರಲಿದೆ ಡಾ.ರಾಜ್ ಅವರ ಮತ್ತೊಂದು ಸಿನಿಮಾಬಣ್ಣ ತುಂಬಿಕೊಂಡು ಬರಲಿದೆ ಡಾ.ರಾಜ್ ಅವರ ಮತ್ತೊಂದು ಸಿನಿಮಾ

    ಮೂಲ 1971ರಲ್ಲಿ ಅಂದರೆ, ಇಂದಿಗೆ ನಾಲ್ಕು ದಶಕಗಳಕ್ಕೂ ಹಿಂದೆ ಕಪ್ಪು ಬಿಳುಪು ಸ್ವರೂಪದಲ್ಲಿ ಕಸ್ತೂರಿ ನಿವಾಸ ಚಿತ್ರ ಬಿಡುಗಡೆಯಾಗಿತ್ತು. ಡಾ.ರಾಜ್, ಜಯಂತಿ, ಆರತಿ, ರಾಜಾಶಂಕರ್ ಮುಂತಾದ ಪ್ರಮುಖ ಕಲಾವಿದರು ಭೂಮಿಕೆಯಲ್ಲಿದ್ದ ಈ ಸಿನಿಮಾ, ಮೂಲ ಕಪ್ಪುಬಿಳುಪು ಸ್ವರೂಪದಲ್ಲೇ ಹಲವು ಬಾರಿ ರಿ-ರಿಲೀಸ್ ಆಗಿತ್ತು.

    ರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರುರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್‌ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರು

    ಕೆ.ಸಿ.ಎನ್ ಗೌಡ ನಿರ್ಮಾಣದ ಈ ಸಿನಿಮಾವನ್ನು ದೊರೆ-ಭಗವಾನ್ ನಿರ್ದೇಶಿಸಿದ್ದರು. ಈ ಸಿನಿಮಾವನ್ನು ಕಲರೀಕರಣಗೊಳಿಸಲು (ಡಿಜಿಟಲ್ ಸ್ವರೂಪ) ಕೆ.ಸಿಎನ್ ಗೌಡರ ಪುತ್ರ ಕೆ.ಸಿ.ಎನ್ ಮೋಹನ್ ನಿರ್ಧರಿಸಿ, ಆಗಸ್ಟ್ 2014ಕ್ಕೆ ಮರುಬಿಡುಗಡೆ ಮಾಡಲು ನಿರ್ಧರಿಸಿದ್ದರು. ಆ ವೇಳೆ, ನಿರ್ದೇಶಕ ಭಗವಾನ್, ಪಾರ್ವತಮ್ಮ ರಾಜಕುಮಾರ್ ಅವರನ್ನು ಭೇಟಿಯಾಗಿದ್ದರು.

    ಕಲರೀಕರಣಗೊಂಡು ಬಿಡುಗಡೆಯಾದ ಕಸ್ತೂರಿ ನಿವಾಸ

    ಕಲರೀಕರಣಗೊಂಡು ಬಿಡುಗಡೆಯಾದ ಕಸ್ತೂರಿ ನಿವಾಸ

    ಕಲರೀಕರಣಗೊಂಡು ಬಿಡುಗಡೆಯಾದ ಕಸ್ತೂರಿ ನಿವಾಸ ಮತ್ತೆ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ್ದು ಗೊತ್ತೇ ಇದೆ. ಕುಟುಂಬ ಸಮೇತ ಜನರು ಈ ಚಿತ್ರವನ್ನು ವೀಕ್ಷಿಸಿದ್ದರು. ಈ ಗುಂಗಿನಲ್ಲೇ ಹಲವು ಹಳೆಯ ಕನ್ನಡ ಸಿನಿಮಾಗಳು ಡಿಜಿಟಲೀಕರಣಗೊಂಡವು.

    ಪಾರ್ವತಮ್ಮ ರಾಜಕುಮಾರ್

    ಪಾರ್ವತಮ್ಮ ರಾಜಕುಮಾರ್

    ಕಸ್ತೂರಿ ನಿವಾಸ ಮತ್ತೆ ಬಿಡುಗಡೆಯಾದಾಗ ನಿರ್ದೇಶಕರಲ್ಲಿ ಒಬ್ಬರಾದ ಭಗವಾನ್, ಪಾರ್ವತಮ್ಮ ರಾಜಕುಮಾರ್ ಅವರನ್ನು ಭೇಟಿಯಾಗಲು ಹೋಗಿದ್ದರು. ಆಗ ಪಾರ್ವತಮ್ಮ, ತನ್ನಲ್ಲಿ ಆಸೆಯೊಂದನ್ನು ತೋಡಿಕೊಂಡಿದ್ದರು ಎಂದು ಭಗವಾನ್ ಇತ್ತೀಚೆಗೆ ಹೇಳಿದ್ದರು.

    ನಮ್ಮವ್ರು ಬಹಳ ಇಷ್ಟಪಟ್ಟು ಮಾಡಿದ ಸಿನಿಮಾ ಮಂತ್ರಾಲಯ ಮಹಾತ್ಮೆ

    ನಮ್ಮವ್ರು ಬಹಳ ಇಷ್ಟಪಟ್ಟು ಮಾಡಿದ ಸಿನಿಮಾ ಮಂತ್ರಾಲಯ ಮಹಾತ್ಮೆ

    "ನಮ್ಮವ್ರು ಬಹಳ ಇಷ್ಟಪಟ್ಟು ಮಾಡಿದ ಸಿನಿಮಾ ಮಂತ್ರಾಲಯ ಮಹಾತ್ಮೆ. ಆ ಸಿನಿಮಾವನ್ನೂ ಇದೇ ಮಾದರಿಯಲ್ಲಿ ಬಿಡುಗಡೆ ಮಾಡಿ ಎಂದು ಕೋರಿದ್ದರು. ಅವರ ಆಸೆಯಂತೆಯೇ ಈ ಸಿನಿಮಾವನ್ನು ಕಲರೀಕರಣಗೊಳಿಸಿ ಬಿಡುಗಡೆಗೊಳಿಸುತ್ತಿದ್ದೇವೆ"ಎಂದು ಎಸ್.ಕೆ.ಭಗವಾನ್ ಹೇಳಿದ್ದಾರೆ.

    ನಿರ್ದೇಶಕ ಭಗವಾನ್

    ನಿರ್ದೇಶಕ ಭಗವಾನ್

    "ಮಂತ್ರಾಲಯ ರಾಘವೇಂದ್ರ ಗುರುಗಳ ಆಶೀರ್ವಾದದೊಂದಿಗೆ ಮಂತ್ರಾಲಯ ಮಹಾತ್ಮೆ ಸಿನಿಮಾದ ಕಲರೀಕರಣ ಕೆಲಸ ಬರದಿಂದ ಸಾಗುತ್ತಿದೆ. ಇದೇ ವರ್ಷಾಂತ್ಯದಲ್ಲಿ ಈ ಕೆಲಸ ಮುಕ್ತಾಯಗೊಳ್ಳಲಿದೆ. ಚಿತ್ರ ಮರು ಬಿಡುಗಡೆಯ ದಿನಾಂಕವನ್ನು ಮಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು"ಎಂದು ಭಗವಾನ್ ಹೇಳಿದ್ದಾರೆ.

    ಅಣ್ಣಾವ್ರು, ನಟನೆಯಲ್ಲಿ ಪರಕಾಯ ಪ್ರವೇಶ

    ಅಣ್ಣಾವ್ರು, ನಟನೆಯಲ್ಲಿ ಪರಕಾಯ ಪ್ರವೇಶ

    1966ರಲ್ಲಿ ಬಿಡುಗಡೆಯಾಗಿದ್ದ ಮಂತ್ರಾಲಯ ಮಹಾತ್ಮೆ ಸಿನಿಮಾದ ಪ್ರಮುಖ ಭೂಮಿಕೆಯಲ್ಲಿ ರಾಜಕುಮಾರ್, ಉದಯ ಕುಮಾರ್, ಜಯಂತಿ, ಕಲ್ಪನ ಮುಂತಾದವರಿದ್ದಾರೆ. ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿ, ನಿರ್ಮಿಸಿದ್ದ ಈ ಸಿನಿಮಾದಲ್ಲಿ ಅಣ್ಣಾವ್ರು, ನಟನೆಯಲ್ಲಿ ಪರಕಾಯ ಪ್ರವೇಶ ಮಾಡಿದ್ದರು.

    English summary
    Noted Sandalwood Director SK Bhagavan Reveals Parvathamma Rajkumar Request.
    Wednesday, July 1, 2020, 10:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X