For Quick Alerts
  ALLOW NOTIFICATIONS  
  For Daily Alerts

  ಈ ವಾರ ಸಿನಿ ನವಮಿ: 29ಕ್ಕೆ 9 ಸಿನಿಮಾಗಳು ಬಿಡುಗಡೆಗೆ ತಯಾರಿ

  |

  ಶುಕ್ರವಾರದ ಸಿನಿಸಂತೆಯಲ್ಲಿ ದಾಖಲೆ ಎಂಬಂತೆ ಬರೋಬ್ಬರಿ 9 ಸಿನಿಮಾಗಳು ತೆರೆಗೆ ಬರುತ್ತಿವೆ. ನಾಲ್ಕೈದು ಸಿನಿಮಾಗಳು ತೆರೆಗೆ ಒಟ್ಟಿಗೆ ಬರ್ತಿವೆ ಅಂದರೆ ಚಿತ್ರಮಂದಿರಗಳ ಸಮಸ್ಯೆ ಕಾಡುತ್ತೆ. ಆದರೀಗ 9 ಸಿನಿಮಾಗಳು ತೆರೆಗೆ ಬರುತ್ತಿವೆ. ಬಹುತೇಕ ಸಿನಿಮಾಗಳು ಹೊಸಬರದ್ದೆ. ಈ ವಾರದ ಚಿತ್ರಗಳಲ್ಲಿ ಹಾರರ್, ಥ್ರಿಲ್ಲರ್, ಲವ್ ಸ್ಟೋರಿ ಸೇರಿದಂತೆ ಎಲ್ಲಾ ಥರಹದ ಚಿತ್ರಗಳನ್ನು ನೋಡಿ ಸಂತಸ ಪಡಬಹುದು.

  ಇದೇ ತಿಂಗಳು ಬರ್ತಿದ್ದಾನೆ 'ಬ್ರಹ್ಮಾಚಾರಿ': ಹೊಟ್ಟೆಹುಣ್ಣಾಗುವಂತೆ ನಕ್ಕರೆ ಸತೀಶ್ ಜವಾಬ್ದಾರಿ ಅಲ್ವಂತೆಇದೇ ತಿಂಗಳು ಬರ್ತಿದ್ದಾನೆ 'ಬ್ರಹ್ಮಾಚಾರಿ': ಹೊಟ್ಟೆಹುಣ್ಣಾಗುವಂತೆ ನಕ್ಕರೆ ಸತೀಶ್ ಜವಾಬ್ದಾರಿ ಅಲ್ವಂತೆ

  ಮುಂದಿನ ನಿಲ್ದಾಣ, ದಮಯಂತಿ, ಬ್ರಹ್ಮಾಚಾರಿ ನಿರೀಕ್ಷೆಯ ಚಿತ್ರಗಳು ಸೇರಿದಂತೆ ನಾನೆ ರಾಜ, ತುಂಡ್ ಹೈಕ್ಳ ಸಾವಾಸ, ರಣಹೇಡಿ, ಮಾರ್ಗರೇಟ್, ಕಿರು ಮಿನ್ಕಣಜ, ರಿವೀಲ್-ಅಬ್ಬಾ ಚಿತ್ರಗಳು ತೆರೆಗೆ ಬರುವುದಾಗಿ ಅನೌನ್ಸ್ ಮಾಡಿಕೊಂಡಿವೆ.

  ಮುಂದಿನ ನಿಲ್ದಾಣ ಮತ್ತು ದಮಯಂತಿ

  ಮುಂದಿನ ನಿಲ್ದಾಣ ಮತ್ತು ದಮಯಂತಿ

  ಟ್ರೈಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ 'ಮುಂದಿನ ನಿಲ್ದಾಣ' ಸಿನಿಮಾ ಇದೆ ವಾರ ತೆರೆಗ ಬರುತ್ತಿದೆ. ವಿನಯ್ ಭಾರದ್ವಾಜ್ ನಿರ್ದೇಶನದಲ್ಲಿ ಮೂಡಿಬಂದ ಮುಂದಿನ ನಿಲ್ದಾಣ ಚಿತ್ರದಲ್ಲಿ ನಾಯಕನಾಗಿ ಪ್ರವೀಣ್ ಕಾಣಿಸಿಕೊಂಡಿದ್ದಾರೆ. ಪ್ರವೀಣ್ ಗೆ ನಾಯಕಿಯಾಗಿ ರಾಧಿಕಾ ನಾರಾಯಣ್ ಮಿಂಚಿದ್ದಾರೆ. ಇನ್ನು ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹು ನಿರೀಕ್ಷೆಯ ದಮಯಂತಿ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ವರ್ಷಗಳ ಬಳಿಕ ರಾಧಿಕಾ ದಮಯಂತಿ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಚಿತ್ರಕ್ಕೆ ನವರನ್ ಆಕ್ಷನ್ ಕಟ್ ಹೇಳಿದ್ದಾರೆ.

  ತುಂಡ್ ಹೈಕ್ಳ ಸಾವಾಸ ಮಾಡಿದ ಬ್ರಹ್ಮಾಚಾರಿ

  ತುಂಡ್ ಹೈಕ್ಳ ಸಾವಾಸ ಮಾಡಿದ ಬ್ರಹ್ಮಾಚಾರಿ

  ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ತುಂಡ್ ಹೈಕ್ಳ ಸಾವಾಸ ಸಿನಿಮಾ ಇದೆ ತಿಂಗಳು 29ಕ್ಕೆ ತೆರೆಗೆ ಬರುತ್ತಿದೆ. ಕಿಶೋರ್ ಇಲ್ಲಿ ರೈತನಾಗಿ ಕಾಣಇಸಿಕೊಂಡಿದ್ದಾರೆ. ದಾರಿ ತಪ್ಪಿದ ಯುವಕರನ್ನು ಸರಿದಾರಿಗೆ ತರುವ ಕಿಶೋರ್ ಅವರದಾಗಿದ್ದೆ. ಇನ್ನು ನಿರೀಕ್ಷೆ ಮೂಡಿಸಿರುವ ಸಿನಿಮಾ ಅಂದರೆ ಬ್ರಹ್ಮಾಚಾರಿ. ನೀನಾಸಂ ಸತೀಶ್ ಮತ್ತು ಅದಿತಿ ಪ್ರಭು ದೇವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಬ್ರಹ್ಮಾಚಾರಿ 29ಕ್ಕೆ ತೆರೆಗೆ ಬರುತ್ತಿದೆ.

  ಛೇ.. ಆ ಚಿತ್ರದ ಆಫರ್ ಬಿಡಬಾರದಿತ್ತು: ರಾಧಿಕಾಗೆ ಈಗಲೂ ಕಾಡುತ್ತಿದೆ ಕೊರಗು.!ಛೇ.. ಆ ಚಿತ್ರದ ಆಫರ್ ಬಿಡಬಾರದಿತ್ತು: ರಾಧಿಕಾಗೆ ಈಗಲೂ ಕಾಡುತ್ತಿದೆ ಕೊರಗು.!

  ರಣಹೇಡಿ ಮತ್ತು ಮಾರ್ಗರೇಟ್

  ರಣಹೇಡಿ ಮತ್ತು ಮಾರ್ಗರೇಟ್

  ರೈತರ ಸಾಲ,ಸಾಲಬಾಧೆ, ಹೀಗೆ ಹಲವು ಅಂಶಗಳೊಂದಿಗೆ ತೆರೆಗೆ ಬರುತ್ತಿದೆ ರಣಹೇಡಿ. ಚಿತ್ರದಲ್ಲಿ ಕರ್ಣ ಕುಮಾರ್ ನಾಯಕನಾಗಿ ಮಿಂಚಿದ್ದಾರೆ. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮನು ಶೆಟ್ಟಿಹಳ್ಳಿ ಮಾಡಿದ್ದಾರೆ. ಐಶ್ವರ್ಯ ರಾವ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಮಾರ್ಗರೆಟ್ ಕ್ರೈಮ್ ಥ್ರಿಲ್ಲರ್ ಸಿನಿಮಾ. ನಾಯಕನಾಗಿ ಶಂಕರ್ ಬಹದ್ದೂರ್ ಮತ್ತು ನಾಯಕಿಯಾಗಿ ಅಹಲ್ಯಾ ಸುರೇಶ್ ಮಿಂಚಿದ್ದಾರೆ. ಎಂ ಎಸ್ ಶ್ರೀನಾಥ್ ಸಾರಥ್ಯದಲ್ಲಿ ಮೂಡಿ ಬಂದಿದೆ.

  ಈ ವಿಷಯದಲ್ಲಿ ಕನ್ನಡ ಚಿತ್ರರಂಗ ಬಹಳ 'ವೀಕ್' ಇದೆಈ ವಿಷಯದಲ್ಲಿ ಕನ್ನಡ ಚಿತ್ರರಂಗ ಬಹಳ 'ವೀಕ್' ಇದೆ

  ಕಿರು ಮಿನ್ಕಣಜ, ರಿವೀಲ್, ನಾನೆ ರಾಜ

  ಕಿರು ಮಿನ್ಕಣಜ, ರಿವೀಲ್, ನಾನೆ ರಾಜ

  ಕಿರು ಮಿನ್ಕಣಜ ವಿಭಿನ್ನ ಹೆಸರಿನ ಮೂಲಕವೆ ಕುತೂಹಲ ಮೂಡಿಸಿರುವ ಸಿನಿಮಾ. ಎಂ. ಮಂಜು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಅರ್ಜುನ್, ರವಿಚಂದ್ರ, ವಾರ್ಷಿಕಾ ಮತ್ತು ಶ್ರೀಧರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣಹಚ್ಚಿದ್ದಾರೆ. ಟ್ರೈಲರ್ ಮತ್ತು ಟೀಸರ್ ಮೂಲಕ ಚಿತ್ರಾಭಿಮಾನಿಗಳ ಗಮನ ಸೆಳೆಯುತ್ತಿರುವ ಕಿರು ಮಿನ್ಕಣಜ ಇದೆ ವಾರ ತೆರೆಗೆ ಬರುತ್ತಿದೆ. ಜೊತೆಗೆ ರಿವೀಲ್ ಮತ್ತು ನಾನೆ ರಾಜ ಸಿನಿಮಾ ಕೂಡ ಒಂಬತ್ತು ಸಿನಿಮಾಗಳ ರಿಲೀಸ್ ಲಿಸ್ಟ್ ನಲ್ಲಿ ಇದೆ.

  English summary
  November 29th Nine Kannada movies will ready to released. brahmachari, Damayanthi, Mundina Nildana and others movies released on November 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X