ಪ್ರಿಯಾ ವಾರಿಯರ್ ಮುಂದೆ ಡಮ್ಮಿ ಆಗೋದಳು ಸನ್ನಿ!

By Naveen

Recommended Video

ಸನ್ನಿ ಲಿಯೋನ್ ರನ್ನ ಹಿಂದಿಕ್ಕಿದೆ ಪ್ರಿಯಾ | Filmibeat Kannada

ನಟಿ ಪ್ರಿಯಾ ವಾರಿಯರ್ ಅದೇನೂ ಮೋಡಿ ಮಾಡಿದ್ದಾರೆ ಗೊತ್ತಿಲ್ಲ. ಮೂರು ದಿನದಿಂದ ಎಲ್ಲ ಹುಡುಗರು ಈ ಹುಡುಗಿ ಧ್ಯಾನ ಮಾಡುತ್ತಿದ್ದಾರೆ. ಈ ಬಾರಿಯ ಪ್ರೇಮಿಗಳ ದಿನವನ್ನು ಎಲ್ಲ ಹುಡುಗರು ಪ್ರಿಯಾಗಾಗಿ ಮೀಸಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದರ್ಬಾರ್ ಮುಂದುವರೆಸಿರುವ ಈಕೆ ಈಗ ಬಾಲಿವುಡ್ ನಟಿ ಸನ್ನಿಲಿಯೋನ್ ರನ್ನು ಹಿಂದಿಕ್ಕಿದ್ದಾರೆ.

ಬರೀ 18 ವರ್ಷದ ಹುಡುಗಿ ಪ್ರಿಯಾ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ಮೂರು ದಿನದಿಂದ ಫೇಸ್ ಬುಕ್, ಇನ್ಟಾಗ್ರಾಮ್, ಯೂಟ್ಯೂಬ್, ಟ್ವಿಟ್ಟರ್, ವಾಟ್ಸ್ ಅಪ್ ಎಲ್ಲಿ ನೋಡಿದರು ಪ್ರಿಯಾ ಹುಬ್ಬು ಏರಿಸುವ ದೃಶ್ಯ ಕಣ್ ಮುಂದೆ ಬರುತ್ತದೆ. ಈಗಾಗಲೇ ಇನ್ಟಾಗ್ರಾಮ್ ನಲ್ಲಿ ಬರೋಬ್ಬರಿ 2.3 ಮಿಲಿಯನ್ ಫಾಲೋವರ್ಸ್ ಪಡೆದಿರುವ ಪ್ರಿಯಾ ಈಗ ಬಿ ಟೌನ್ ನಲ್ಲಿರುವ ದೊಡ್ಡ ದೊಡ್ಡ ನಟಿಯರಿಗಿಂತ ಫೇಮಸ್ ಆಗಿದ್ದಾರೆ. ಮುಂದೆ ಮುಂದೆ ಓದಿ...

ಮೊದಲ ಸ್ಥಾನದಲ್ಲಿ ಪ್ರಿಯಾ

ಮೊದಲ ಸ್ಥಾನದಲ್ಲಿ ಪ್ರಿಯಾ

ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ನಟಿಯರ ಪೈಕಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಬಾಲಿವುಡ್ ನಟಿ ಸನ್ನಿಲಿಯೋನ್ ಗೆ ಪ್ರಿಯಾ ದೊಡ್ಡ ಪೈಪೋಟಿ ನೀಡಿದ್ದಾರೆ.

ಎರಡನೇ ಸ್ಥಾನ ಸನ್ನಿಲಿಯೋನ್

ಎರಡನೇ ಸ್ಥಾನ ಸನ್ನಿಲಿಯೋನ್

ಇಷ್ಟು ದಿನ ಗೂಗಲ್ ಸಾಮ್ರಾಜ್ಯದ ಒಡತಿ ಆಗಿದ್ದ ಸನ್ನಿಲಿಯೋನ್ ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಪ್ರಿಯಾ ಮಾಡಿರುವ ಮೋಡಿಯ ಮುಂದೆ ಸನ್ನಿ ಮಂಕಾಗಿದ್ದಾರೆ.

ಉಳಿದ ಸ್ಥಾನದಲ್ಲಿ

ಉಳಿದ ಸ್ಥಾನದಲ್ಲಿ

ಬಾಲಿವುಡ್ ನಟಿಯರಾದ ಕತ್ರೀನಾ ಕೈಫ್, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ನಂತರದ ಸ್ಥಾನವನ್ನು ಅಲಂಕರಿಸಿದ್ದಾರೆ.

'P' ಅಂದರೆ ಪ್ರಿಯಾ ಪ್ರಕಾಶ್

'P' ಅಂದರೆ ಪ್ರಿಯಾ ಪ್ರಕಾಶ್

ಸದ್ಯಕ್ಕೆ 'ಪಿ' ಅಂದರೆ ಪ್ರಿಯಾ ಪ್ರಕಾಶ್ ವಾರಿಯರ್ ಎನ್ನುವ ಹಾಗೆ ಆಗಿದೆ. ಈಕೆಯ ಹವಾ ಯಾವ ಮಟ್ಟಿಗೆ ಇದೆ ಅಂದರೆ ಗೂಗಲ್ ನಲ್ಲಿ ಜಸ್ಟ್ 'P' ಎಂದು ಟೈಪ್ ಮಾಡಿದ್ದರೆ ಸಾಕು ಪ್ರಿಯಾ ಪ್ರಕಾಶ್ ಹೆಸರು ಮೊದಲು ಬರುತ್ತದೆ.

ಮಿಂಚಿನ ವೇಗದಲ್ಲಿ ಹೆಚ್ಚುತ್ತಿದೆ ಫಾಲೋವರ್ಸ್ ಸಂಖ್ಯೆ

ಮಿಂಚಿನ ವೇಗದಲ್ಲಿ ಹೆಚ್ಚುತ್ತಿದೆ ಫಾಲೋವರ್ಸ್ ಸಂಖ್ಯೆ

ಸದ್ಯ ಪ್ರಿಯಾ ಅವರ ಫೇಸ್ ಬುಕ್ ಅಕೌಂಟ್ ಅನ್ನು 70 ಸಾವಿರ ಜನರು ಲೈಕ್ ಮಾಡಿದ್ದಾರೆ. ಇನ್ಟಾಗ್ರಾಮ್ ಖಾತೆಯಲ್ಲಿ 2.3 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ. ಮಿಂಚಿನ ವೇಗದಲ್ಲಿ ಅವರ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದೆ.

ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ

ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿರುವ ಈ ಹುಡುಗಿಯ ಹೆಸರು ಪ್ರಿಯಾ ಪ್ರಕಾಶ್ ವಾರಿಯರ್. 18 ವರ್ಷದ ಈ ಹುಡುಗಿ ಕೇರಳದ ತ್ರಿಶೂರ್ ನಲ್ಲಿರುವ ವಿಮಲ್ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾಳೆ. ಪ್ರಿಯಾ ಪ್ರಕಾಶ್ ವಾರಿಯರ್ 'ಒರು ಅಡಾರ್ ಲವ್' (Ooru adaar love) ಎಂಬ ಮಲೆಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಾ ಮೊದಲ ಸಿನಿಮಾದ ಮೊದಲ ಹಾಡಿನ ದೃಶ್ಯದಿಂದಲೇ ಈಗ ಸಖತ್ ಫೇಮಸ್ ಆಗಿದ್ದಾರೆ.

More from Filmibeat

English summary
Now Malayalam young actress Priya Prakash Varrier is the most searched actress in google. Prakash Varrier is the new internet sensation and her video viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X