ಶಿವಣ್ಣನ ಜೊತೆ ಕನ್ನಡದಲ್ಲಿ ಮತ್ತಿಬ್ಬರು ಹ್ಯಾಟ್ರಿಕ್ ಹೀರೋಗಳ ಜನನ!
ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಅಂತ್ತಿದ್ದ ಹಾಗೆ ಶಿವರಾಜ್ ಕುಮಾರ್ ನೆನಪಾಗುತ್ತಾರೆ. 'ಆನಂದ್', 'ರಥ ಸಪ್ತಮಿ' ಮತ್ತು 'ಮನ ಮೆಚ್ಚಿದ ಹುಡುಗಿ' ರೀತಿಯ ಮೂರು ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾ ಮಾಡಿದ್ದ ಶಿವಣ್ಣ ಹ್ಯಾಟ್ರಿಕ್ ಹೀರೋ ಪಟ್ಟ ಪಡೆದುಕೊಂಡಿದ್ದರು.
ಶಿವರಾಜ್ ಕುಮಾರ್ ನೂರಕ್ಕೂ ಹೆಚ್ಚು ಸಿನಿಮಾ ಮಾಡಿ ಸೆಂಚುರಿ ಸ್ಟಾರ್ ಆಗಿದ್ದಾರೆ. ಆದರೆ ಇಂದಿಗೂ ಕೂಡ ಅವರನ್ನು ಅಭಿಮಾನಿಗಳು ಹ್ಯಾಟ್ರಿಕ್ ಹೀರೋ ಎಂದು ಕರೆಯುತ್ತಾರೆ. ಆದರೆ ಶಿವಣ್ಣನ ಜೊತೆಗೆ ಈಗ ಕನ್ನಡದಲ್ಲಿ ಮತ್ತಿಬ್ಬರು ನಟರು ಹ್ಯಾಟ್ರಿಕ್ ಹೀರೋ ಆಗಿದ್ದಾರೆ. ಸತತ ಮೂರು ಸಿನಿಮಾಗಳ ಗೆಲುವಿನ ಬಳಿಕ ಇಬ್ಬರು ನಟರು ಈ ಪಟ್ಟ ಪಡೆದಿದ್ದಾರೆ. ಅಂದಹಾಗೆ, ಆ ನಟರು ಬೇರೆ ಯಾರು ಅಲ್ಲ.. ನಟ ಧ್ರುವ ಸರ್ಜಾ ಮತ್ತು ಶ್ರೀ ಮುರಳಿ. ಮುಂದೆ ಓದಿ....

ಧ್ರುವ ಸರ್ಜಾ
ಮೊದಲು 'ಅದ್ದೂರಿ', ನಂತರ 'ಬಹದ್ದೂರ್' ಈಗ 'ಭರ್ಜರಿ' ಹೀಗೆ ಮೂರು ಸೂಪರ್ ಹಿಟ್ ಸಿನಿಮಾ ಮಾಡಿದ್ದ ನಟ ಧ್ರುವ ಸರ್ಜಾ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.

ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್
'ಭರ್ಜರಿ' ಸಿನಿಮಾ ಗೆದ್ದಾಗ ಎಲ್ಲರೂ ಧ್ರುವಗೆ ಹ್ಯಾಟ್ರಿಕ್ ಹೀರೋ ಅಂತ ಕರೆದರು. ಆದರೆ ಧ್ರುವ ಮಾತ್ರ ''ಕನ್ನಡಕ್ಕೆ ಶಿವರಾಜ್ ಕುಮಾರ್ ಮಾತ್ರ ಹ್ಯಾಟ್ರಿಕ್ ಹೀರೋ ನನ್ನನ್ನು ಬೇಕಾದರೆ ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್'' ಎಂದು ಕರೆಯಿರಿ ಎಂದು ಹೇಳಿದರು.

ಶ್ರೀ ಮುರಳಿ
ರೋರಿಂಗ್ ಸ್ಟಾರ್ ಶ್ರೀ ಮುರಳಿ ಕೂಡ 'ಉಗ್ರಂ', 'ರಥಾವರ' ಮತ್ತು 'ಮಫ್ತಿ' ಹೀಗೆ ಮೂರು ಹಿಟ್ ಸಿನಿಮಾ ಕೊಟ್ಟಿದ್ದಾರೆ. ಈ ಮೂಲಕ ಮೂರನೇ ಬಾರಿ ಶ್ರೀ ಮುರಳಿ ಗೆದ್ದಿದ್ದಾರೆ.

'ಉಗ್ರಂ' ನಂತರ
ಶ್ರೀ ಮರಳಿ ಪ್ರಾರಂಭದಲ್ಲಿ ಅನೇಕ ಸಿನಿಮಾ ಮಾಡಿರಬಹುದು. ಆದರೆ 'ಉಗ್ರಂ' ಅವರಿಗೆ ಮರು ಹುಟ್ಟು ನೀಡಿದ ಸಿನಿಮಾ. ಈ ಸಿನಿಮಾದ ನಂತರ ಶ್ರೀ ಮುರಳಿ ಈಗ ಹ್ಯಾಟ್ರಿಕ್ ಹೀರೋ ಆಗಿದ್ದಾರೆ.

ಇಬ್ಬರ ಸಿನಿಮಾಗಳು
ಸದ್ಯ ಶ್ರೀ ಮುರಳಿ 'ಮಫ್ತಿ' ನಂತರ ಎರಡು ಹೊಸ ಸಿನಿಮಾ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಕೂಡ 'ಪೊಗರು' ಸಿನಿಮಾ ಶುರು ಮಾಡಿದ್ದಾರೆ.


Click it and Unblock the Notifications











