twitter
    For Quick Alerts
    ALLOW NOTIFICATIONS  
    For Daily Alerts

    ಸಿಸಿಎಲ್ ಮುಗಿದಿದೆ ಈಗ ಎಸ್ಸಿಎಲ್ ಶುರುವಾಗಲಿದೆ

    By ಜೀವನರಸಿಕ
    |

    ಈ ಬಾರಿ ಬಹು ನಿರೀಕ್ಷಿತ ಸಿನಿ ತಾರೆಯರ ರಾಜ್ ಕಪ್ ನಡೆಯಲಿಲ್ಲ. ರಾಜ್ ಕಪ್ ಶುರು ಮಾಡಿದ ಕಿಚ್ಚ ಸುದೀಪ್ ಈ ವರ್ಷದ ಅದನ್ನು ಮುಂದುವರಿಸೋಕೆ ಮನಸ್ಸು ಮಾಡಲಿಲ್ಲ. 'ಮಾಣಿಕ್ಯ' ಸಿನಿಮಾದಲ್ಲಿ ಬಿಜಿಯಾಗಿಬಿಟ್ರು ಅದರ ಜೊತೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಬೇರೆ ಬಂತು.

    ಆದರೆ ಈಗ ಸಿಸಿಎಲ್ ಮುಗಿದಿದೆ. ಸಿಸಿಎಲ್ ಆಡೋಕೆ ಕನ್ನಡ ಚಿತ್ರರಂಗವನ್ನ ಪ್ರತಿನಿಧಿಸೋಕೆ ಸಾಧ್ಯವಾಗೋದು 11 ಜನರಿಗೆ. ಹೆಚ್ಚೆಂದರೆ 15 ಜನರಿಗೆ ಮಾತ್ರ. ಆದರೆ ಕನ್ನಡ ಚಿತ್ರರಂಗದ ತಾರೆಯರ ಮತ್ತೊಮ್ಮೆ ಕ್ರಿಕೇಟ್ ಆಡೋದನ್ನ ನೋಡುವ ಭಾಗ್ಯ ಬರಲಿದೆ. ಅದು ಎಸ್ಸಿಎಲ್ ಅನ್ನೋ ಹೊಸ ಕಾನ್ಸೆಪ್ಟ್ ಮೂಲಕ. [ಸಿಸಿಎಲ್ 4 ಕಪ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್]

    Sudeep in CCL 4
    ಈ ಎಸ್ಸಿಎಲ್ ಅಂದ್ರೆ ಸ್ಯಾಂಡಲ್ ವುಡ್ ಕ್ರಿಕೆಟ್ ಲೀಗ್ ಅಂತ. ಇಲ್ಲಿ ಕೂಡ ಆರು ತಂಡಗಳಿರುತ್ತವೆ. ಸಿನಿಮಾ ನಟರು, ತಂತ್ರಜ್ಞರು ಸೇರಿದಂತೆ ಎಲ್ಲ ವಿಭಾಗದವರು ಈ ಪಂದ್ಯಗಳಲ್ಲಿ ಒಳಗೊಂಡ ತಂಡಗಳಲ್ಲಿ ಭಾಗವಹಿಸಲಿದ್ದಾರೆ.

    ಇದರ ಜೊತೆಗೆ ಸಿನಿಮಾ ಪತ್ರಕರ್ತರಿಗೆ ಕೂಡ ತಂಡದಲ್ಲಿ ಆಡೋ ಅವಕಾಶ ಸಿಗಲಿದೆ. ಕ್ರಿಕೆಟ್ ಆಡೋ ನೂರಾರು ಪ್ರತಿಭೆಗಳು ಸ್ಯಾಂಡಲ್ ವುಡ್ ನಲ್ಲಿ ಇರುವಾಗ ಕೇವಲ 15 ಜನರು ಆಡಿದರೆ ಸಾಕಾ? ಸೋ ಕೆಲವು ನಿರ್ದೇಶಕರು ಈಗ ಈ ಎಸ್ಸಿಎಲ್ ಅನ್ನೋ ಮ್ಯಾಚ್ ಗೆ ಅಣಿಯಾಗುತ್ತಿದ್ದಾರೆ.

    English summary
    The fourth season of Celebrity Cricket League (CCL 4) finally concluded on Sunday (23rd February), with Karnataka Bulldozers beating Kerala Strikers by 36. Now Kannada moviegoer and cricket fans ready for Sandalwood cricket league (SCL), Dr. Raj Cup T20 Cricket Tournament, which will be launch very shortly.
    Saturday, March 1, 2014, 14:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X