»   » ನಟ ಕಿಚ್ಚ ಸುದೀಪ್ ಗೆ ಇದು 'ಸ್ವರ್ಗಕ್ಕೆ ಕಿಚ್ಚು ಹಚ್ಚು'ವ ಸಮಯ!

ನಟ ಕಿಚ್ಚ ಸುದೀಪ್ ಗೆ ಇದು 'ಸ್ವರ್ಗಕ್ಕೆ ಕಿಚ್ಚು ಹಚ್ಚು'ವ ಸಮಯ!

Posted By:
Subscribe to Filmibeat Kannada

''ಬೆಚ್ಚನೆಯಾ ಮನೆಯಿರಲು

ವೆಚ್ಚಕ್ಕೆ ಹೊನ್ನಿರಲು

ಇಚ್ಛೆಯನ್ನರಿವ ಸತಿ ಇರಲು

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ''

ಸರ್ವಜ್ಞ ಅವರ ಈ ವಚನ ಸದ್ಯ ನಟ ಕಿಚ್ಚ ಸುದೀಪ್ ಬದುಕಿಗೆ ತುಂಬ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಸುದೀಪ್ ಜೀವನ ಈಗ ಅಕ್ಷರಶಃ ಬಂಗಾರದಂತಾಗಿದೆ. ಒಂದು ಕಡೆ ಸಿನಿ ಬದುಕು ಇನ್ನೊಂದು ಕಡೆ ದಾಂಪತ್ಯ ಬದುಕು ಎರಡು ಕೂಡ ಈಗ ಸುದೀಪ್ ಸಂತೋಷವನ್ನು ಹೆಚ್ಚು ಮಾಡಿದೆ.

ಸಿನಿಮಾಗಳ ಯಶಸ್ಸು, ದಾಂಪತ್ಯ ಜೀವನ, ಹಾಲಿವುಡ್ ಎಂಟ್ರಿ, ಟಾಲಿವುಡ್ ಸಿನಿಮಾ, ಒಂದು ಮಿಲಿಯನ್ ಟ್ವಿಟ್ಟರ್ ಫಾಲೋವರ್ಸ್ ಹೀಗೆ ಸುದೀಪ್ ಅನೇಕ ಕಾರಣಗಳಿಗೆ ಈಗ ಸಖತ್ ಖುಷಿಯಾಗಿದ್ದಾರೆ. ಮುಂದೆ ಓದಿ...

ಸುದೀಪ್ ಚಿತ್ರಗಳ ಗೆಲುವು

ಕಿಚ್ಚ ಸುದೀಪ್ ಕನ್ನಡದ ಸ್ಟಾರ್ ನಟ. ಸುದೀಪ್ ಗೆಲುವಿನ ಯಾತ್ರೆ ಜೋರಾಗಿ ಮುಂದುವರೆಯುತ್ತಿದೆ. 'ಹೆಬ್ಬುಲಿ', 'ರನ್ನ', 'ಮಾಣಿಕ್ಯ' ರೀತಿ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳು ಸುದೀಪ್ ಅಕೌಂಟ್ ನಲ್ಲಿದೆ.

ಒಂದಾದ ಸುದೀಪ್ - ಪ್ರಿಯಾ ಜೋಡಿ

ಕೆಲ ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ಸುದೀಪ್ - ಪ್ರಿಯಾ ದಂಪತಿ ಇತ್ತೀಚಿಗಷ್ಟೆ ಅದನ್ನು ವಾಪಸ್ ತೆಗೆದುಕೊಂಡಿದ್ದಾರೆ. ಮಗಳಿಗಾಗಿ ಸುದೀಪ್ ಮತ್ತು ಪ್ರಿಯಾ ಮತ್ತೆ ಒಂದಾಗಿದ್ದಾರೆ.

'ಬಿರಿಯಾನಿ ಮನೆ'ಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸುದೀಪ್-ಪ್ರಿಯಾ ದಂಪತಿ

ಹಾಲಿವುಡ್ ಎಂಟ್ರಿ

ಸುದೀಪ್ ಜನಪ್ರಿಯತೆ ಈಗ ಹಾಲಿವುಡ್ ವರೆಗೆ ಮುಟ್ಟಿದೆ. ಬಾಲಿವುಡ್ ಬಳಿಕ ಈಗ ಹಾಲಿವುಡ್ ನಲ್ಲಿಯೂ ಸುದೀಪ್ ಸಿನಿಮಾ ಮಾಡುತ್ತಿದ್ದಾರೆ. 'ರೈಸನ್' ಚಿತ್ರದ ಮೂಲಕ ಕನ್ನಡದ ಹೆಬ್ಬುಲಿ ಹಾಲಿವುಡ್ ಅಂಗಳಕ್ಕೆ ಕಾಲಿಟ್ಟಿದೆ.

ಹಾಲಿವುಡ್ ನಲ್ಲಿ ಕಿಚ್ಚ ಸುದೀಪ್ ನಟಿಸುವ ಸಿನಿಮಾ ಯಾವುದು.?

ಟಾಲಿವುಡ್ ಸಿನಿಮಾ

'ಈಗ' ಮತ್ತು 'ಬಾಹುಬಲಿ' ಸಿನಿಮಾದ ನಂತರ ಮತ್ತೆ ಸುದೀಪ್ ಟಾಲಿವುಡ್ ನಲ್ಲಿ ದೊಡ್ಡ ಸಿನಿಮಾ ಮಾಡುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ 'ಉಯ್ಯಾಲವಾಡ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.

ಟ್ವಿಟ್ಟರ್ ಫಾಲೋವರ್ಸ್

ನಟ ಕಿಚ್ಚ ಸುದೀಪ್ ಅಫೀಶಿಯಲ್ ಟ್ವಿಟ್ಟರ್ ಅಕೌಂಟ್ ನ ಫಾಲೋವರ್ಸ್ ಸಂಖ್ಯೆ ಈಗ 1 ಮಿಲಿಯನ್ ಗಡಿದಾಡಿದೆ. ಈ ಮೂಲಕ ಸುದೀಪ್ ಅತಿ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ಕನ್ನಡದ ನಟನಾಗಿದ್ದಾರೆ.

ಸ್ಯಾಂಡಲ್ ವುಡ್ ನಟರ ಪೈಕಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ನಂ 1'

ಕೈ ತುಂಬ ಸಿನಿಮಾಗಳು

ಸದ್ಯ ಸುದೀಪ್ ಕೈ ತುಂಬ ಸಿನಿಮಾಗಳಿದ್ದು, 'ಪೈಲ್ವಾನ್', 'ದಿ ವಿಲನ್', 'ಕೋಟಿಗೊಬ್ಬ 3', ಮತ್ತು 'ಬಿಗ್ ಬಾಸ್ ಸೀಸನ್ 5'ರಲ್ಲಿ ಸೇರಿದಂತೆ ಸಿಕ್ಕಾಪಟ್ಟೆ ಬಿಜಿ ಇದ್ದಾರೆ.

'ಪೈಲ್ವಾನ್' ಆದ ಕಿಚ್ಚ ಸುದೀಪ್ ಪರಾಕ್ರಮಕ್ಕೆ ತಲೆ ಬಾಗಿದ ಅಭಿಮಾನಿಗಳು!

ಇನ್ನೇನು ಬೇಕು..

ಸಿನಿಮಾದ ಗೆಲುವು, ಕೌಟುಂಬಿಕ ಜೀವನ, ದೊಡ್ಡ ದೊಡ್ಡ ಅವಕಾಶಗಳು, ಅಭಿಮಾನಿಗಳು, ಜನಪ್ರಿಯತೆ ಹೀಗೆ ಎಲ್ಲ ಇರುವ ಸುದೀಪ್ ಸಂತಸಕ್ಕೆ ಇನ್ನೇನು ಬೇಕು ಹೇಳಿ.

English summary
Kannada Actor Kiccha Sudeep is a very happy person now. Do you want to know the reason.? Then read this article
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada