twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರಗಳಿಗೆ ನೈಟ್ ಕರ್ಫ್ಯೂ ಬಿಸಿ: ಶೋಗಳ ಸಂಖ್ಯೆ ಇಳಿಕೆ

    |

    ಒಮಿಕ್ರಾನ್ ಹರಡುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರವು ಇಂದಿನಿಂದ ಮುಂದಿನ ಹತ್ತು ದಿನಗಳ ವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದು, ಇದರ ಪರಿಣಾಮ ಚಿತ್ರಮಂದಿರಗಳ ಮೇಲೂ ಆಗಿದೆ.

    ನೈಟ್ ಕರ್ಪ್ಯೂ ಜಾರಿ ಮಾಡಿರುವ ಕಾರಣ ಮಲ್ಟಿಫ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಶೋ ಸಮಯ ಬದಲಾವಣೆ ಮಾಡಿಕೊಳ್ಳುವ ಜೊತೆಗೆ ರಾತ್ರಿ ಶೋಗಳನ್ನು ಅನಿವಾರ್ಯವಾಗಿ ಕಡಿತ ಮಾಡುತ್ತಿವೆ.

    ಇಂದಿನಿಂದ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ರಾತ್ರಿ 7 ಗಂಟೆ ಬಳಿಕದ ಶೋಗಳು ಪ್ರದರ್ಶನವಾಗುವುದಿಲ್ಲ. ಶೇ 80ರಷ್ಟು ಚಿತ್ರಮಂದಿರಗಳಲ್ಲಿ ಮುಂದಿನ ಹತ್ತು ದಿನದ ವರೆಗೆ ರಾತ್ರಿ 7ರ ಬಳಿಕ ಶೋಗಳು ನಡೆಯುವುದಿಲ್ಲ ಎನ್ನಲಾಗುತ್ತಿದೆ.

    Number Of Shows Of Theater Reduced Due To Night Curfew In Karnataka

    ರಾತ್ರಿ ಶೋಗಳು ನಡೆಯದ ಕಾರಣ ಸಿನಿಮಾ ಕಲೆಕ್ಷನ್‌ನಲ್ಲಿ ಶೇ 30 ರಿಂದ 40 ರಷ್ಟು ಕಡಿತಗೊಳ್ಳಲಿದೆ. ಬೆಳಿಗ್ಗೆ ಕೆಲಸ ಮಾಡುವವರು ಸಾಮಾನ್ಯವಾಗಿ ರಾತ್ರಿ ಶೋನಲ್ಲಿ ಸಿನಿಮಾ ನೋಡುತ್ತಿದ್ದರು. ಆದರೆ ಇದೀಗ ಸರ್ಕಾರ ವಿಧಿಸಿರುವ ನಿಯಮದಿಂದ ರಾತ್ರಿಶೋಗಳೇ ಇಲ್ಲದಾಗಿವೆ.

    ರಾತ್ರಿ ಕರ್ಫ್ಯೂ ನಿಯಮದಂತೆ ರಾತ್ರಿ 10 ರಿಂದ ಬೆಳಗ್ಗಿನ 5 ಗಂಟೆ ವರೆಗೆ ಅಗತ್ಯ ಸೇವೆಗಳ ಹೊರತಾಗಿ ಇನ್ನೆಲ್ಲವೂ ಬಂದ್ ಆಗಿರಬೇಕಿದೆ. ಜನ ಸಂಚಾರಕ್ಕೂ ನಿರ್ಬಂಧ ಇದೆ. ವೇಗವಾಗಿ ಹರಡುತ್ತಿರುವ ಒಮಿಕ್ರಾನ್ ಅನ್ನು ತಡೆಯಲು ಸರ್ಕಾರವು ರಾತ್ರಿ ಕರ್ಫ್ಯೂ ವಿಧಿಸಿದೆ. ಈ ಬಾರಿ ಹೊಸ ವರ್ಷಾಚರಣೆಗೂ ನಿರ್ಬಂಧ ಇರಲಿದೆ. ಬೆಂಗಳೂರಿನ ಹೋಟೆಲ್, ಪಬ್‌, ಬಾರ್‌ಗಳಲ್ಲಿ ಕೇವಲ 50% ಅಷ್ಟೆ ಆಕ್ಯುಪೆನ್ಸಿಗೆ ಅವಕಾಶ ನೀಡಲಾಗಿದೆ.

    ಡಿಸೆಂಬರ್ 31 ರಂದು ಅಜಯ್ ರಾವ್, ರಚಿತಾ ರಾಮ್ ನಟನೆಯ 'ಲವ್ ಯು ರಚ್ಚು' ಹಾಗೂ ದಿಗಂತ್ ಮಂಚಾಲೆ ನಟನೆಯ 'ಹುಟ್ಟುಹಬ್ಬದ ಶುಭಾಶಯಗಳು' ಸಿನಿಮಾ ಬಿಡುಗಡೆ ಆಗುತ್ತಿವೆ. ಈ ಎರಡೂ ಸಿನಿಮಾಗಳಿಗೆ ನೈಟ್ ಕರ್ಫ್ಯೂನ ಬಿಸಿ ತಟ್ಟಲಿದೆ. ನೈಟ್ ಕರ್ಫ್ಯೂ ಮುಂದಿನ ತಿಂಗಳ 8ಕ್ಕೆ ಮುಕ್ತಾಯವಾಗಲಿದೆ.

    English summary
    Number of shows reduced in many movie theaters in Karnataka due to government's order of night curfew.
    Tuesday, December 28, 2021, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X