»   » ನುವ್ವೇ ಕಾವಾಲಿ ರೀಮೇಕ್‌ ಹಕ್ಕನ್ನು ಶ್ರುತಿ ಗಂಡನಿಗೆ ಕೊಡಿಸಿದ್ದಾರಂತೆ

ನುವ್ವೇ ಕಾವಾಲಿ ರೀಮೇಕ್‌ ಹಕ್ಕನ್ನು ಶ್ರುತಿ ಗಂಡನಿಗೆ ಕೊಡಿಸಿದ್ದಾರಂತೆ

Posted By: Staff
Subscribe to Filmibeat Kannada

ದಿನೇಶ್‌ಬಾಬು ಶಿಕ್ಷೆಗೆ ಒಳಗಾಗುತ್ತಿದ್ದಂತೆ ಅವರು ನಿರ್ದೇಶಿಸಬೇಕಾಗಿದ್ದ 'ನುವ್ವೇ ಕಾವಾಲಿ " ರೀಮೇಕು ಮಹೇಂದರ್‌ ಪಾಲಾಗಿದೆ. ಇದರಿಂದ ದಿನೇಶ್‌ ಬಾಬು ಅಪಾರ ದುಃಖಿತರೂ ಆಗಿದ್ದಾರೆ.

ಅಂದ ಹಾಗೆ ನುವ್ವೇ ಕಾವಾಲಿ ಪರರ ಪಾಲಾಗಿದ್ದು ಯಾಕೆ ? ಅದಕ್ಕೆ ದಿನೇಶ್‌ ಬಾಬು ಕೊಡುವ ಕಾರಣ ಇದು : ' ನನ್ನ ಬಹಿಷ್ಕಾರ ಮುಗಿಯುವುದು ಜನವರಿ 31ಕ್ಕೆ. ಅಲ್ಲಿಯ ತನಕ ಕಾಯುವುದಕ್ಕೆ ರಾಮೋಜಿ ರಾವ್‌ ಸಿದ್ಧರಾಗಿದ್ದರು. ಆದರೆ ಈ ಮಧ್ಯೆ ರಾಜ್ಯ ಸರಕಾರ ಏಪ್ರಿಲ್‌ 2002ರ ನಂತರ ರಿಮೇಕ್‌ ಚಿತ್ರಗಳಿಗೆ ಮನರಂಜನಾ ತೆರಿಗೆ ವಿನಾಯಿತಿ ರದ್ದು ಮಾಡಲಿದೆ. ಹೀಗಾಗಿ ಮಾರ್ಚ್‌ 31ರ ಮೊದಲು ಸಿನಿಮಾ ಮುಗಿಸಬೇಕಾದ ಅನಿವಾರ್ಯತೆ ಉಂಟಾಯಿತು. ಚಿತ್ರ ನನ್ನ ಕೈ ತಪ್ಪಿತು."


ಆದರೆ ಕೈ ತಪ್ಪಿದ ಚಿತ್ರ ಮಹೇಂದರ್‌ ಕೈ ಸೇರುವುದಕ್ಕೆ ಯಾರು ಕಾರಣ ?

ಉದ್ಯಮದ ಪ್ರಕಾರ ಶ್ರುತಿ. ಆಕೆ ರಾಮೋಜಿ ರಾವ್‌ ನಿರ್ಮಾಣದ ಮನಸೇ ಓ ಮನಸೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆಕೆಯ ರೆಕಮಂಡೇಷನ್‌ ಫಲವಾಗಿ ಚಿತ್ರ ಗಂಡನ ಕೈ ಸೇರಿದೆ.

English summary
kannada film director Mahendar to remake Telugu hit film Nuvvekavali
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada