ದರ್ಶನ್ ಲಕ್ಕಿ ಚಿತ್ರಮಂದಿರದಲ್ಲಿ 'ಒಡೆಯ' ಚಿತ್ರ ಬಿಡುಗಡೆ

Recommended Video

ದರ್ಶನ್ ಸಿನಿಮಾಗಳು ಹಿಟ್ ಆಗಿರೋದು ಇದೇ ಥಿಯೇಟರ್ ನಲ್ಲಿ | FILMIBEAT KANNADA

'ಒಡೆಯ' ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆ ಆಗುತ್ತಿದೆ. ಸಿನಿಮಾಗೆ ಸಿಕ್ಕ ಕೆಲವು ಚಿತ್ರಮಂದಿರಗಳ ಹೆಸರು ಬಹಿರಂಗವಾಗಿದೆ. ಅದರಲ್ಲಿಯೂ ಗಾಂಧಿನಗರದಲ್ಲಿ ಯಾವ ಚಿತ್ರಮಂದಿರ ಸಿಕ್ಕಿದೆ ಎನ್ನುವುದು ತಿಳಿದಿದೆ.

ಬೆಂಗಳೂರಿನ ಕೆ ಜಿ ರಸ್ತೆಯ ನರ್ತಕಿ ಚಿತ್ರಮಂದಿರದಲ್ಲಿ 'ಒಡೆಯ' ಸಿನಿಮಾ ರಿಲೀಸ್ ಆಗುತ್ತಿದೆ. ನರ್ತಕಿ 'ಒಡೆಯ' ಸಿನಿಮಾಗೆ ಸಿಕ್ಕ ಮುಖ್ಯ ಚಿತ್ರಮಂದಿರವಾಗಿದೆ. ವಿಶೇಷ ಅಂದರೆ, ಇದು ನಟ ದರ್ಶನ್ ರಿಗೆ ಅದೃಷ್ಟದ ಚಿತ್ರಮಂದಿರ ಎಂದೇ ಹೇಳಬಹುದು.

ಈ ಚಿತ್ರಮಂದಿರಲ್ಲಿ ಬಿಡುಗಡೆಯಾದ ಬಹುತೇಕ ದರ್ಶನ್ ಸಿನಿಮಾಗಳು ಹಿಟ್ ಆಗಿವೆ. ಇತ್ತೀಚಿಗಷ್ಟೆ 'ಯಜಮಾನ' ಹಾಗೂ 'ಕುರುಕ್ಷೇತ್ರ' ಸಿನಿಮಾಗಳು ಕೂಡ ನರ್ತಕಿಯಲ್ಲಿಯೇ ಬಿಡುಗಡೆ ಆಗಿತ್ತು. ಈ ಸಿನಿಮಾಗಳ ನಂತರ ಬಂದ 'ಒಡೆಯ' ಕೂಡ ನರ್ತಕಿಯಲ್ಲಿಯೇ ಬರುತ್ತಿದೆ.

Odeya Kannada Movie Will Be Releasing In Nartaki Theatre

'ಒಡೆಯ' ಎಂ ಡಿ ಶ್ರೀಧರ್ ನಿರ್ದೇಶನದ ಸಿನಿಮಾ. ದರ್ಶನ್ ಹಾಗೂ ಎಂ ಡಿ ಶ್ರೀಧರ್ ಕಾಂಬಿನೇಶನ್ ನಲ್ಲಿ ಬಂದ 'ಬುಲ್ ಬುಲ್' ಸಿನಿಮಾ ಕೂಡ ನರ್ತಕಿ ಚಿತ್ರಮಂದಿರದಲ್ಲಿ ತೆರೆಗೆ ಬಂದಿತ್ತು.

ಅಂದಹಾಗೆ, 'ಒಡೆಯ' ಸಿನಿಮಾದ ಟ್ರೇಲರ್ ಇಂದು (ಡಿಸೆಂಬರ್ 1) ಬಿಡುಗಡೆಯಾಗಿ, ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಸನಾ ತಿಮಯ್ಯ ಸಿನಿಮಾದ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

More from Filmibeat

English summary
'Odeya' kannada movie will be releasing in Nartaki theatre.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X