For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರದಲ್ಲಿ ಕಣ್ಣೀರು ಹಾಕಿದ 'ಒಡೆಯ' ಚಿತ್ರದ ನಟಿ

  |
  Odeya : ತಮನ್ನಾ, ಕಾಜಲ್ ಗೆ ಸಿಕ್ಕಿದ್ದ ಅವಕಾಶವನ್ನು ಕಸಿದುಕೊಂಡ 'ಒಡೆಯ' ಚಿತ್ರದ ನಾಯಕಿ | FILMIBEAT KANNADA

  ''ಇದು ನನ್ನ ಮೊದಲ ಅನುಭವ. ಇದನ್ನು ಮರೆಯಲು ಆಗೊಲ್ಲ. ನಾನು ಎಷ್ಟು ಬಾರಿ ಅತ್ತಿದ್ದೀನಿ ನನಗೆ ತಿಳಿದಿಲ್ಲ. ಈ ಅನುಭವವನ್ನು ವಿವರಿಸಲು ಆಗುವುದಿಲ್ಲ.'' ಎಂದು ಆನಂದದಿಂದ ಕಣ್ಣೀರು ಹಾಕಿದರು 'ಒಡೆಯ' ಸಿನಿಮಾ ನಟಿ.

  'ಒಡೆಯ' ಸಿನಿಮಾ ಇಂದು (ಡಿಸೆಂಬರ್ 12) ಬಿಡುಗಡೆಯಾಗಿದೆ. ಚಿತ್ರದ ನಾಯಕಿ ಸನಾ ತಿಮ್ಮಯ್ಯ ಪ್ರೇಕ್ಷಕರ ಜೊತೆಗೆ ಸಿನಿಮಾ ನೋಡಿದ್ದಾರೆ. ಗಾಂಧಿನಗರದ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದ್ದು, ಆ ಸಂತಸವನ್ನು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಹಂಚಿಕೊಂಡಿದ್ದಾರೆ.

  Odeya Review: ಅಣ್ಣತಮ್ಮಂದಿರ ಮಾಸ್, ಕ್ಲಾಸ್ ಮಸಾಲOdeya Review: ಅಣ್ಣತಮ್ಮಂದಿರ ಮಾಸ್, ಕ್ಲಾಸ್ ಮಸಾಲ

  ಸನಾ ತಿಮ್ಮಯ್ಯ ಅಭಿನಯದ ಮೊದಲ ಸಿನಿಮಾ ಇದಾಗಿದೆ. ಮೊದಲ ಬಾರಿಗೆ ಅವರು ತಮ್ಮ ಸಿನಿಮಾವನ್ನು ತಾವೇ ನೋಡುತ್ತಿದ್ದಾರೆ. ಜನರ ಪ್ರತಿಕ್ರಿಯೆ ಕಂಡ ಅವರು ಆನಂದದಲ್ಲಿ ಕಣ್ಣೀರು ಹಾಕಿದ್ದಾರೆ. ಈ ಅನುಭವವನ್ನು ಹೇಗೆ ವಿವರಿಸಬೇಕೋ ತಿಳಿಯುತ್ತಿಲ್ಲ ಎಂದಿದ್ದಾರೆ.

  ದರ್ಶನ್ ಹಾಗೂ ಇಡೀ ಚಿತ್ರತಂಡದ ಪ್ರೋತ್ಸಾಹವನ್ನು ನೆನೆದಿದ್ದಾರೆ. ನನ್ನ ಕಡೆಯಿಂದ ತಪ್ಪಾಗಿದ್ದರೆ ಕ್ಷಮಿಸಿ. ನಾನು ನಿಮ್ಮನ್ನು ಸಿನಿಮಾಗಳ ಮೂಲಕ ರಂಜಿಸಲು ಪ್ರಾಮಾಣಿಕವಾಗಿ ಶ್ರಮ ಹಾಕುತ್ತೇನೆ ಎಂದಿದ್ದಾರೆ.

  ಅಂದಹಾಗೆ, ದರ್ಶನ್ ಅಭಿಮಾನಿಗಳು, ಕಮರ್ಷಿಯಲ್ ಸಿನಿಮಾ ಇಷ್ಟ ಪಡುವವರು, ಹೊಡೆದಾಟ ನೋಡಬೇಕು ಎನ್ನುವವರು 'ಒಡೆಯ'ನ ದರ್ಶನ ಮಾಡಬಹುದು. ಹೊಸತನದ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಹೋದರೆ ನಿಮಗೆ ಮನರಂಜನೆ ಸಿಗಬಹುದು.

  English summary
  Odeya kannada movie actress Sana Thimmaiah become emotional .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X