twitter
    For Quick Alerts
    ALLOW NOTIFICATIONS  
    For Daily Alerts

    ಆರಂಭದಲ್ಲಿಯೇ ಶಕ್ತಿ ಕಳೆದುಕೊಂಡ 'ಒಡೆಯ': ಮುಂದೆ ಏನಾಗುತ್ತೊ?

    By ಫಿಲ್ಮಿಬೀಟ್
    |

    Recommended Video

    Odeya songs failed to get good response | FILMIBEAT KANNADA

    ಹಾಡುಗಳನ್ನು ಒಂದು ಸಿನಿಮಾದ ಆಹ್ವಾನ ಪತ್ರಿಕೆ ಎಂದೇ ಕರೆಯುತ್ತಾರೆ. ಹಾಡುಗಳು ಹಿಟ್ ಆದ್ರೆ, ಜನ ಅದನ್ನು ಇಷ್ಟ ಪಟ್ಟರೆ, ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಾರೆ ಎನ್ನುವ ನಂಬಿಕೆ ಬಲವಾಗಿ ಇದೆ. ಆದರೆ, ಕೆಲವು ಸಿನಿಮಾಗಳು ಈ ಪ್ರಯತ್ನದಲ್ಲಿಯೇ ಫೇಲ್ ಆಗಿ ಬಿಡುತ್ತವೆ.

    ದರ್ಶನ್ ಅಭಿನಯದ 'ಒಡೆಯ' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಸತತ ಎರಡು ಹಿಟ್ ಸಿನಿಮಾ ನೀಡಿರುವ ದರ್ಶನ್ ಹ್ಯಾಟ್ರಿಕ್ ಬಾರಿಸಲು ಸಿದ್ಧವಾಗಿದ್ದಾರೆ. ಆದರೆ, 'ಒಡೆಯ' ಸಿನಿಮಾ ದಿನೇ ದಿನೇ ನಂಬಿಕೆ ಕಳೆದುಕೊಳ್ಳುತ್ತಿದೆ. ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಮೂರೂ ಹಾಡುಗಳು ಗಮನ ಸೆಳೆಯುವಲ್ಲಿ ವಿಫಲವಾಗಿವೆ.

    ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: 'ಒಡೆಯ' ರಿಲೀಸ್ ಡೇಟ್ ಫಿಕ್ಸ್ ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: 'ಒಡೆಯ' ರಿಲೀಸ್ ಡೇಟ್ ಫಿಕ್ಸ್

    ಹಾಡು ಬಿಡುಗಡೆಯಾದ ಆರಂಭದಲ್ಲಿ ಇದ್ದ ಕ್ರೇಜ್ ಮುಂದುವರೆಯಲಿಲ್ಲ. ಫ್ಯಾನ್ಸ್ ಗಳು ದರ್ಶನ್ ಹಾಡು ಎಂಬ ಕಾರಣಕ್ಕೆ ಲೈಕ್, ಕಾಮೆಂಟ್ಸ್ ನೀಡುತ್ತಿದ್ದಾರೆ ವಿನಃ ಹಾಡು ಹಿಡಿಸಿಲ್ಲ. ದರ್ಶನ್ ಹಿಂದಿನ ಸಿನಿಮಾಗಳು ಹಾಡುಗಳ ರೇಂಜ್ ಗೆ ಈ ಹಾಡುಗಳು ಇಲ್ಲ.

    ಮೂರು ಹಾಡುಗಳು ಮನಸ್ಸು ಮುಟ್ಟಲಿಲ್ಲ

    ಮೂರು ಹಾಡುಗಳು ಮನಸ್ಸು ಮುಟ್ಟಲಿಲ್ಲ

    'ಒಡೆಯ' ಸಿನಿಮಾದ ಮೊದಲ ಹಾಡು ನವೆಂಬರ್ 7 ರಂದು ಬಿಡುಗಡೆ ಆಗಿತ್ತು. 'ಹೇ ಒಡೆಯ..' ಎನ್ನುವ ಈ ಹಾಡು ಚಿತ್ರದ ಟೈಟಲ್ ಹಾಡಾಗಿದೆ. ಆ ನಂತರ 'ಶಾನೆ ಲವ್ ಆಗೋಯ್ತಾಲೇ ನಂಜಿ..' ಹಾಡು ರಿಲೀಸ್ ಆಯ್ತು. ನಾಲ್ಕು ದಿನಗಳ ಹಿಂದೆ 'ಕಾಣೆಯಾಗಿರುವೆ ನಾನು..' ಹಾಡು ಹೊರ ಬಂದಿದೆ. ಈ ಮೂರು ಹಾಡುಗಳಲ್ಲಿಯೂ ಯಾವ ಹಾಡುಗಳಲ್ಲಿಯೂ ಒಂದು ಕ್ವಾಲಿಟಿ ಇಲ್ಲ.

    ದರ್ಶನ್ ರೇಂಜ್ ಗೆ ಹಾಡುಗಳು ಇಲ್ಲ

    ದರ್ಶನ್ ರೇಂಜ್ ಗೆ ಹಾಡುಗಳು ಇಲ್ಲ

    ಈ ಹಾಡುಗಳು ಬಿಡುಗಡೆಯಾದಾಗ ಸೂಪರ್ ಫಾಸ್ಟ್ ನಲ್ಲಿ ಯೂ ಟ್ಯೂಬ್ ನಲ್ಲಿ ಮುನ್ನುಗಿದ್ದವು. ಆದರೆ, ಆ ನಂತರ ಹಾಡುಗಳನ್ನು ಕೇಳುವವರ ಸಂಖ್ಯೆ ಕಡಿಮೆ ಆಯ್ತು. ಸದ್ಯ, ಯೂಟ್ಯೂಬ್ ನಲ್ಲಿ ಮೊದಲ ಹಾಡು 1.8 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಎರಡನೇ ಹಾಡಿಗೆ 1.4 ಮಿಲಿಯನ್ ಹಿಟ್ಸ್ ಸಿಕ್ಕಿದೆ. ಮೂರನೇ ಹಾಡು 8 ಲಕ್ಷ ವ್ಯೂವ್ಸ್ ಆಗಿದೆ. ಇದು ಸಾಮಾನ್ಯವಾದ ಸಂಖ್ಯೆ ಅಲ್ಲದಿದ್ದರೂ, ದರ್ಶನ್ ರೇಂಜ್ ಗೆ ಇಲ್ಲ.

    ವಿಡಿಯೋ: ನಂಜಿ ಮೇಲೆ 'ಒಡೆಯ'ನಿಗೆ ಶಾನೆ ಲವ್ ಆಗಿದೆವಿಡಿಯೋ: ನಂಜಿ ಮೇಲೆ 'ಒಡೆಯ'ನಿಗೆ ಶಾನೆ ಲವ್ ಆಗಿದೆ

    ಪೈಪೋಟಿಗಾಗಿ ಅಭಿಮಾನಿಗಳ ಒದ್ದಾಟ

    ಪೈಪೋಟಿಗಾಗಿ ಅಭಿಮಾನಿಗಳ ಒದ್ದಾಟ

    ಕನ್ನಡದಲ್ಲಿ ಇದೀಗ ಸ್ಟಾರ್ ಗಳ ಮಧ್ಯೆ ಹೊಸ ಫೈಟ್ಸ್ ಹುಟ್ಟಿಕೊಂಡಿದೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮೆಚ್ಚಿನ ಸ್ಟಾರ್ ನಂಬರ್ 1 ಆಗಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ಯಾವುದೇ ಸಿನಿಮಾ ಹಾಡುಗಳು, ಟೀಸರ್, ಟ್ರೇಲರ್ ಗಳು ಬಂದು ಕಣ್ಣು ಮುಚ್ಚಿಕೊಂಡು ಲೈಕ್ ಶೇರ್ ಕಾಮೆಂಟ್ಸ್ ಮಾಡುತ್ತಾರೆ. 'ಒಡೆಯ' ಹಾಡುಗಳನ್ನು ಕೂಡ ಅಭಿಮಾನಿಗಳು ಹಿಂದೆ ಬೀಳಲು ಬಿಡುತ್ತಿಲ್ಲ.

    ಹಾಡುಗಳ ಸೋಲಿಗೆ ಕಾರಣ ಏನು

    ಹಾಡುಗಳ ಸೋಲಿಗೆ ಕಾರಣ ಏನು

    ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಈ ಇಬ್ಬರು ಸದ್ಯ ಟ್ರೆಂಡ್ ನಲ್ಲಿ ಇದ್ದಾರೆ. ಆದರೂ, ಈ ಸಿನಿಮಾದ ಹಾಡುಗಳು ಕ್ಲಿಕ್ ಆಗುತ್ತಿಲ್ಲ. ಇದೇ ಮೊದಲ ಬಾರಿಗೆ ಅರ್ಜುನ್ ಜನ್ಯ ನಿರ್ದೇಶಕ ಎಂ ಡಿ ಶ್ರೀಧರ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಡೈರೆಕ್ಟರ್ ಹಾಗೂ ಮ್ಯೂಸಿಕ್ ಡೈರೆಕ್ಟರ್ ಕಾಂಬಿನೇಶನ್ ವರ್ಕ್ ಔಟ್ ಆಗುತ್ತಿಲ್ಲವೆನೋ.

    2 ವರ್ಷದ ನಂತರ ದರ್ಶನ್ ಸಿನಿಮಾಗೆ ಹಾಡು ಬರೆದ ಜಯಂತ್ ಕಾಯ್ಕಿಣಿ2 ವರ್ಷದ ನಂತರ ದರ್ಶನ್ ಸಿನಿಮಾಗೆ ಹಾಡು ಬರೆದ ಜಯಂತ್ ಕಾಯ್ಕಿಣಿ

    ಇನ್ನೂ ಟ್ರೇಲರ್ ಬರಬೇಕು

    ಇನ್ನೂ ಟ್ರೇಲರ್ ಬರಬೇಕು

    'ಒಡೆಯ' ಸಿನಿಮಾದ ಹಾಡುಗಳು ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ ಸಿನಿಮಾದ ಮೇಲಿನ ನಿರೀಕ್ಷೆ ಕಡಿಮೆ ಆಗುತ್ತಿದೆ. ಸಿನಿಮಾದ ಟ್ರೇಲರ್ ಡಿಸೆಂಬರ್ 1 ಬರಲಿದೆ. ಈ ಟ್ರೇಲರ್ ನಂಬಿಕೆಗೆ ತಕ್ಕ ಹಾಗೆ ಇರುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. 'ಒಡೆಯ' ತಮಿಳಿನ 'ವೀರಂ' ಸಿನಿಮಾದ ರಿಮೇಕ್ ಆಗಿದ್ದು, ಜನ ಯಾವ ರೀತಿ ಸ್ವೀಕರಿಸುತ್ತಾರೆ ಎನ್ನುವ ಕುತೂಹಲವಿದೆ.

    English summary
    'Odeya' kannada movie songs failed to get good response from audience.
    Thursday, November 28, 2019, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X