'ಒಡೆಯ' ಟೀಸರ್ ಮೂಲಕ ದರ್ಶನ್ ನಿರ್ಮಿಸಿದ 8 ದಾಖಲೆ

ಡಿ ಬಾಸ್ ದರ್ಶನ್ ನಟನೆಯಲ್ಲಿ ಮೂಡಿಬರುತ್ತಿರುವ ಒಡೆಯ ಸಿನಿಮಾ ಟೀಸರ್ ಮೂಲಕ ಭಾರಿ ಸದ್ದು ಮಾಡ್ತಿದೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ 1 ರಂದು ಬಿಡುಗಡೆಯಾಗಿದ್ದ ಒಡೆಯ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಯೂಟ್ಯೂಬ್ ನಲ್ಲಂತೂ ಒಡೆಯ ಟೀಸರ್ ಹಲವು ದಾಖಲೆ ಮಾಡಿದೆ. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ವೀರಂ ಸಿನಿಮಾದ ರೀಮೇಕ್ ಆಗಿದ್ದರೂ, ಒಡೆಯ ಟೀಸರ್ ಗೆ ದೊಡ್ಡ ಸ್ವಾಗತ ಸಿಕ್ಕಿದೆ ಎನ್ನಬಹುದು.

ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಒಡೆಯ ಟೀಸರ್ ರಿಲೀಸ್ ಆಗಿತ್ತು. ಇದೀಗ, ಒಡೆಯ ಸಿನಿಮಾ ನಿರ್ಮಿಸಿರುವ ದಾಖಲೆಗಳ ಬಗ್ಗೆ ಸ್ವತಃ ಆನಂದ ಆಡಿಯೋ ಸಂಸ್ಥೆ ಬಹಿರಂಗಗೊಳಿಸಿದೆ. ಮುಂದೆ ಓದಿ....

3 ನಿಮಿಷದಲ್ಲಿ 100k ವೀಕ್ಷಣೆ

3 ನಿಮಿಷದಲ್ಲಿ 100k ವೀಕ್ಷಣೆ

'ಒಡೆಯ' ಸಿನಿಮಾ ಟೀಸರ್ ರಿಲೀಸ್ ಆದ ಕೇವಲ 3 ನಿಮಿಷದಲ್ಲಿ 100k ವೀಕ್ಷಣೆ ಕಂಡಿದೆ. ಇದು ಒಡೆಯ ಚಿತ್ರದ ವಿಶೇಷ ದಾಖಲೆ. ಸ್ವತಃ ಆನಂದ್ ಆಡಿಯೋ ಸಂಸ್ಥೆ ಅಧಿಕೃತವಾಗಿ ಈ ಮಾಹಿತಿ ನೀಡಿದೆ. ಇನ್ನು 10 ನಿಮಿಷದಲ್ಲಿ 200k ವೀಕ್ಷಣೆ ಪಡೆದುಕೊಂಡಿರುವುದು ಕೂಡ ಒಡೆಯನ ದಾಖಲೆ.

12 ನಿಮಿಷದಲ್ಲಿ 50K ಲೈಕ್ಸ್

12 ನಿಮಿಷದಲ್ಲಿ 50K ಲೈಕ್ಸ್

ಟೀಸರ್ ಲೈಕ್ಸ್ ವಿಚಾರಕ್ಕೆ ಬಂದ್ರೆ ಕೇಚಲ 12 ನಿಮಿಷದಲ್ಲಿ 50k ಲೈಕ್ಸ್ ಪಡೆದುಕೊಂಡಿದೆ. 21 ನಿಮಿಷದಲ್ಲಿ 60k ಲೈಕ್ಸ್ ಬಂದಿರುವುದು ಕೂಡ ಡಿ ಬಾಸ್ ಚಿತ್ರದ ಹವಾ ಎಷ್ಟಿದೆ ಎಂದು ಸಾಬೀತು ಮಾಡಿದೆ.

23 ನಿಮಿಷದಲ್ಲಿ 500k

23 ನಿಮಿಷದಲ್ಲಿ 500k

14 ನಿಮಿಷದಲ್ಲಿ 300k ವೀಕ್ಷಣೆ ಕಂಡ ಒಡೆಯ ಚಿತ್ರದ ಟೀಸರ್ 23 ನಿಮಿಷದಲ್ಲಿ 500k ವೀವ್ಸ್ ಪಡೆದುಕೊಂಡಿದೆ. ಟೀಸರ್ ಬಿಡುಗಡೆಗೂ ಮುಂಚೆ ಡಿ ಬಾಸ್ ಅಭಿಮಾನಿಗಳು ಎಷ್ಟು ಕುತೂಹಕದಿಂದ ಕಾಯ್ತಿದ್ದರು ಎನ್ನುವುದಕ್ಕೆ ಈ ಅಂಕಿ ಅಂಶಗಳು ಸಾಕ್ಷಿಯಾಗಿದೆ.

2 ಗಂಟೆಯಲ್ಲಿ 1 ಮಿಲಿಯನ್

2 ಗಂಟೆಯಲ್ಲಿ 1 ಮಿಲಿಯನ್

100 ನಿಮಿಷದಲ್ಲಿ 1 ಲಕ್ಷ ವೀಕ್ಷಣೆ ಕಂಡ ಒಡೆಯ ಚಿತ್ರದ ಟೀಸರ್, 2 ಗಂಟೆ 55 ನಿಮಿಷದಲ್ಲಿ 1 ಮಿಲಿಯನ್ ವೀಕ್ಷಣೆ ಕಂಡಿದೆ. ಇದೆಲ್ಲವೂ ಒಡೆಯ ಟೀಸರ್ ಹೆಸರಿನಲ್ಲಿರುವ ದಾಖಲೆಗಳು. ರಿಯಲ್ ಟೈಂನಲ್ಲಿ ಒಡೆಯ ಟೀಸರ್ ನಂಬರ್ 1 ಟ್ರೆಂಡಿಂಗ್ ನಲ್ಲಿದೆ ಎಂದು ಕೂಡ ಆನಂದ್ ಆಡಿಯೋ ಖಚಿತ ಪಡಿಸಿದೆ.

More from Filmibeat

English summary
Challenging star Darshan starrer Odeya movie teaser created milestones in youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X