For Quick Alerts
  ALLOW NOTIFICATIONS  
  For Daily Alerts

  ಕೃಷಿ ಇಲಾಖೆಗೆ ದರ್ಶನ್ ರಾಯಭಾರಿ: ಹೊರಬಿತ್ತು ಅಧಿಕೃತ ಆದೇಶ

  |

  ಕೃಷಿ ಇಲಾಖೆಗೆ ನಟ ದರ್ಶನ್ ರಾಯಭಾರಿ ಆಗಿ ಆಯ್ಕೆ ಆಗಿದ್ದಾರೆ. ಈ ಸುದ್ದಿ ಹೊರಬಿದ್ದು ಕೆಲವು ವಾರಗಳೇ ಆಗಿವೆ. ಆದರೆ ಕೃಷಿ ಇಲಾಖೆಯಿಂದ ಅಧಿಕೃತ ಆದೇಶ ಈಗ ಹೊರಬಿದ್ದಿದೆ.

  ದರ್ಶನ್ ಹುಟ್ಟುಹಬ್ಬಕ್ಕೆ BC ಪಾಟೀಲ್ ಕೊಟ್ಟ ಉಡುಗೊರೆ ಇದು | Filmibeat Kannada

  ಈ ಹಿಂದೆಯೇ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ದರ್ಶನ್ ಅವರನ್ನು ಭೇಟಿಯಾಗಿ ಕೃಷಿ ಇಲಾಖೆಗೆ ರಾಯಭಾರಿ ಆಗುವಂತೆ ಮನವಿ ಮಾಡಿದ್ದರು. ಇದಕ್ಕೆ ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು ದರ್ಶನ್.

  ನಟ ದರ್ಶನ್ ಅವರು ಯಾವುದೇ ಸಂಭಾವನೆ ಪಡೆಯದೆ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ರಾಯಭಾರಿಯಾಗಿ ಕೃಷಿ ಇಲಾಖೆಯ ಕಾರ್ಯಕ್ರಮಗಳ ಪ್ರಚಾರ, ಪ್ರಸಾರ ಹಾಗೂ ರೈತರಿಗೆ ಸ್ಪೂರ್ತಿ ತುಂಬುವ ಕಾರ್ಯವನ್ನು ಮಾಡಲಿದ್ದಾರೆ.

  ಫಾರಂ ಹೊಂದಿರುವ ನಟ ದರ್ಶನ್ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ಜೊತೆಗೆ ಪಶುಸಂಗೋಪನೆ, ಪ್ರಾಣಿಗಳ ಆರೈಕೆಯನ್ನೂ ಮಾಡುತ್ತಾರೆ. ಕೃಷಿ ಚಟುವಟಿಕೆಯಲ್ಲಿಯೂ ಭಾಗಿಯಾಗುತ್ತಾರೆ ದರ್ಶನ್. ರೈತರ ಬಗ್ಗೆ ಅಪಾರವಾದ ಕಾಳಜಿ ದರ್ಶನ್‌ ಅವರಿಗೆ ಇದೆ ಹಾಗಾಗಿ ಕೃಷಿ ಇಲಾಖೆಯು ದರ್ಶನ್ ಅವರನ್ನು ತಮ್ಮ ಇಲಾಖೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದೆ.

  ಇದೀಗ ಕೃಷಿ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದ್ದು, 'ಕೃಷಿ ಇಲಾಖೆಯು ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುತ ಪಡಿಸಲು ಹಾಗೂ ಕೃಷಿಕರಲ್ಲಿ ಸ್ಪೂರ್ತಿ ತುಂಬಲು ದರ್ಶನ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ' ಎಂದು ಆದೇಶದಲ್ಲಿ ಹೇಳಲಾಗಿದೆ.

  English summary
  Official order appointing Darshan as brand ambassador for Karnataka Agriculture department.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X