'ಓಲ್ಡ್ ಮಾಂಕ್' ಹಿಡಿದು ಬಂದ ನಟ ಧ್ರುವ ಸರ್ಜಾ
'ಒಲ್ಡ್ ಮಾಂಕ್' ಸಿನಿಮಾ ಈಗಾಗಲೇ ಟೈಟಲ್ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದಿದೆ. ಇದೀಗ ಈ ಸಿನಿಮಾಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡುತ್ತಿದ್ದಾರೆ.
ಇದೇ ತಿಂಗಳು ಸಿನಿಮಾದ ಮುಹೂರ್ತ ಆಗುತ್ತಿದ್ದು, ನಟ ಧ್ರುವ ಸರ್ಜಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಧ್ರುವ ಸಿನಿಮಾಗೆ ಕ್ಲಾಪ್ ಮಾಡುವ ಮೂಲಕ ಶುಭಾಶಯ ತಿಳಿಸಲಿದ್ದಾರೆ. ಜೊತೆಗೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸಹ ಕಾರ್ಯಕ್ರಮದ ಅತಿಥಿ ಆಗಿದ್ದು, ಕ್ಯಾಮರಾ ಚಾಲನೆ ಮಾಡಲಿದ್ದಾರೆ.
'ಒಲ್ಡ್ ಮಾಂಕ್' ಮುಹೂರ್ತ ಕಾರ್ಯಕ್ರಮ ಫೆಬ್ರವರಿ 12 ರಂದು ಬೆಳಗ್ಗೆ 9:30 ರಿಂದ 10:30ರವರೆಗೆ ನಡೆಯಲಿದೆ. ಶ್ರೀ ಮಹಾಲಕ್ಷ್ಮಿ ಮಂದಿರ ಶೇಷಾದ್ರಿಪುರಂ ನಲ್ಲಿ ಮುಹೂರ್ತ ಜರುಗಲಿದೆ. 'ಒಲ್ಡ್ ಮಾಂಕ್' ಶ್ರೀನಿ ನಿರ್ದೇಶನದ ಹಾಗೂ ನಟನೆಯ ಸಿನಿಮಾವಾಗಿದೆ.

ಇತ್ತೀಚಿಗಷ್ಟೆ ಸಿನಿಮಾದ ನಾಯಕಿಯ ಆಯ್ಕೆ ಆಗಿದೆ. 'ರಂಗನಾಯಕಿ' ನಂತರ ಅದಿತಿ ಪ್ರಭುದೇವ ಹಾಗೂ ಶ್ರೀನಿ ಮತ್ತೆ ಜೋಡಿಯಾಗಿದ್ದಾರೆ. ಈಗಾಗಲೇ ಸಿನಿಮಾಗಾಗಿ ರಾಜ್ಯದ ಕೆಲವು ಭಾಗಗಳಲ್ಲಿ ಆಡಿಷನ್ ನಡೆಸಿದ್ದು, ಅವರ ಫಲಿತಾಂಶ ಕೂಡ ಘೋಷಣೆ ಮಾಡಲಿದ್ದಾರೆ.
ಸೌರಭ್ ವೈಭವ್ ಸಂಗೀತ, ಭರತ್ ಪರುಶರಾಮ್ ಛಾಯಾಗ್ರಹಣ, ಪ್ರಸನ್ನ ವಿ ಎಂ ಸಂಭಾಷಣೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಪ್ರದೀಪ್ ಶರ್ಮಾ ನಿರ್ಮಾಣ ಮಾಡುತ್ತಿದ್ದಾರೆ.
'ಶ್ರೀನಿವಾಸ ಕಲ್ಯಾಣ' ಹಾಗೂ 'ಬೀರ್ ಬಲ್' ಸಿನಿಮಾದ ನಂತರ ಶ್ರೀನಿ ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದೆ.


Click it and Unblock the Notifications











