For Quick Alerts
  ALLOW NOTIFICATIONS  
  For Daily Alerts

  'ಓಲ್ಡ್ ಮಾಂಕ್': ಹೊಸ ವರ್ಷಕ್ಕೆ ಶ್ರೀನಿ ಏರಿಸ್ತಾರೆ ಕಿಕ್

  |

  ನಟ, ನಿರ್ದೇಶಕ ಶ್ರೀನಿ ಮತ್ತೊಂದು ಹೊಸ ಸಿನಿಮಾ ಮೂಲಕ ಬಂದಿದ್ದಾರೆ. 'ಶ್ರೀನಿವಾಸ ಕಲ್ಯಾಣ' ಹಾಗೂ 'ಬೀರ್ ಬಲ್' ಸಿನಿಮಾಗಳ ನಂತರ 'ಓಲ್ಡ್ ಮಾಂಕ್' ಕುಡಿಸಲು ಶ್ರೀನಿ ರೆಡಿಯಾಗಿದ್ದಾರೆ.

  ತಮ್ಮ ಮುಂದಿನ ಸಿನಿಮಾಗೆ 'ಓಲ್ಡ್ ಮಾಂಕ್' ಎಂದು ಹೆಸರಿಟ್ಟಿದ್ದು, ಈ ಟೈಟಲ್ ಅನ್ನು ಕೆಲ ದಿನಗಳ ಹಿಂದೆ ಫಿಲ್ಮಿಬೀಟ್ ಕನ್ನಡ ರಿವೀಲ್ ಮಾಡಿತ್ತು. ಇದೀಗ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಶ್ರೀನಿ ತಮ್ಮ ಮುಂದಿನ ಸಿನಿಮಾದ ಮೊದಲ ನೋಟವನ್ನು ಹಂಚಿಕೊಂಡಿದ್ದಾರೆ.

  ಸಿನಿಮಾ ಆಡಿಷನ್ ಇದೆ.. ಆದ್ರೆ ನಿಮ್ಗೆ 50+ ವರ್ಷ ಆಗಿರಬೇಕುಸಿನಿಮಾ ಆಡಿಷನ್ ಇದೆ.. ಆದ್ರೆ ನಿಮ್ಗೆ 50+ ವರ್ಷ ಆಗಿರಬೇಕು

  ಪೋಸ್ಟರ್ ತುಂಬ ಕ್ರಿಯೇಟಿವ್ ಆಗಿದೆ. ಕನ್ನಿ ಸ್ಟೂಡಿಯೋಸ್ ಪೋಸ್ಟರ್ ಡಿಸೈನ್ ಮಾಡಿದೆ. ಸಿಂಪಲ್ ಪೋಸ್ಟರ್ ಗಮನ ಸೆಳೆಯುತ್ತಿದೆ. ಪೋಸ್ಟರ್ ಮೂಲಕವೇ ತಮ್ಮ ಹೊಸತನವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.

  ಪ್ರದೀಪ್ ಶರ್ಮ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಸಂತೋಷ್ ನಂದಕುಮಾರ್, ಪ್ರಸನ್ನ ವಿ ಎಂ ಹಾಗೂ ಶ್ರೀನಿ ಕಥೆ ಬರೆದಿದ್ದಾರೆ. ಶ್ರೀಶಾ ಕುಡುವಳ್ಳಿ ಕ್ಯಾಮರಾ ವರ್ಕ್, ಸೌರಭ್ ವೈಭವ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿ ಎಂ ಸಂಭಾಷಣೆ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

  ಶ್ರೀನಿ ನಿರ್ದೇಶನದ ಜೊತೆಗೆ ನಟನೆಯನ್ನು ಸಹ ಮಾಡುತ್ತಿದ್ದಾರೆ. ಈಗಾಗಲೇ ಅವರು ಎರಡು ವಿಭಾಗ ನಿಭಾಯಿಸಿ ತಮ್ಮನ್ನು ಸಾಬೀತು ಮಾಡಿಕೊಂಡಿದ್ದಾರೆ. ವಿಶೇಷ ಎಂದರೆ, ಚಿತ್ರದಲ್ಲಿ 8 ಜನ ಮುದುಕರ ಹಾಗೂ 8 ಮುದುಕಿಯರ ಒಂದು ಗ್ಯಾಂಗ್ ಇರಲಿದೆ. ಈ ಪಾತ್ರಗಳಿಗೆ ಆಡಿಷನ್ ಮಾಡಲಾಗುತ್ತಿದೆ.

  ಸದ್ಯದಲ್ಲಿಯೇ ಸಿನಿಮಾದ ಪಾತ್ರಗಳಿಗೆ ಆಡಿಷನ್ ನಡೆಯುತ್ತಿದೆ. ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ ಹಾಗೂ ಶಿವಮೊಗ್ಗದಲ್ಲಿ ಸಿನಿಮಾದ ಆಡಿಷನ್ ಮಾಡಲಾಗುತ್ತದೆ. ಆಸಕ್ತರು ಇದರಲ್ಲಿ ಭಾಗಿಯಾಗಬಹುದಾಗಿದೆ.

  ಸಿನಿಮಾದ ಚಿತ್ರೀಕರಣ 2020 ಜನವರಿಗೆ ಶುರು ಆಗುತ್ತಿದೆ. ಹೊಸ ವರ್ಷಕ್ಕೆ ಹೊಸ ಸಿನಿಮಾ ಶ್ರೀನಿ ಅನೌನ್ಸ್ ಮಾಡಿದ್ದು, 'ಓಲ್ಡ್ ಮಾಂಕ್'ನಿಂದ ಕಿಕ್ ನೀಡುತ್ತಿದ್ದಾರೆ.

  English summary
  Old Monk kannada movie poster out. The movie is directing by MG Srinivas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X