IPL ಹಬ್ಬ ಆರಂಭ: ಈ ಸಂದರ್ಭದಲ್ಲಿ ನಟ ದರ್ಶನ್ ಕಿವಿಮಾತು ನೆನಪಿರಲಿ

ಐಪಿಎಲ್‌ 2025 ಮೆಗಾ ಟೂರ್ನಿ ಆರಂಭವಾಗುತ್ತಿದೆ. ಐಪಿಎಲ್‌ ಸೀಸನ್-18ಕ್ಕೆ ಇಂದು (ಮಾರ್ಚ್ 22) ಚಾಲನೆ ಸಿಗುತ್ತಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಆರ್‌ಸಿಬಿ vs ಕೆಕೆಆರ್ ತಂಡಗಳು ಮುಖಾಮುಖಿ ಆಗುತ್ತಿವೆ. ಕ್ರಿಕೆಟ್ ಪ್ರೇಮಿಗಳಂತೂ ಐಪಿಎಲ್‌ ಹಬ್ಬಕ್ಕೆ ಕಾತರದಿಂದ ಕಾಯುತ್ತಿದ್ದಾರೆ.

10 ತಂಡಗಳು, ಒಟ್ಟು 74 ಪಂದ್ಯಗಳು, 13 ನಗರಗಳಲ್ಲಿರುವ ಕ್ರೀಡಾಂಗಣಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ವಾರದ ದಿನಗಳಲ್ಲಿ ತಲಾ ಒಂದು ಪಂದ್ಯ ಭಾನುವಾರ ಎರಡೆರಡು ಪಂದ್ಯ ನಡೆಯಲಿದೆ. ಮನೆಗಳಲ್ಲಿ ಟಿವಿ ರಿಮೋಟ್ ಪುರುಷರ ಕೈ ಸೇರಲಿದೆ. ಮಹಿಳೆಯರ ಧಾರಾವಾಹಿ, ರಿಯಾಲಿಟಿ ಶೋಗಳಿಗೂ ಇದರಿಂದ ಬ್ರೇಕ್ ಬೀಳಲಿದೆ. ಒಟ್ಟಾರೆ ಇನ್ನು ಎರಡು ತಿಂಗಳ ಐಪಿಎಲ್ ಕ್ರಿಕೆಟ್ ಹಬ್ಬ ದೇಶದಲ್ಲಿ ಕಳೆ ಕಟ್ಟಲಿದೆ.

Old video of actor Darshan appealing against IPL cricket betting is now going viral

ಐಪಿಎಲ್ ಟೂರ್ನಿಯ ಸುತ್ತಾ ನೂರಾರು ಕೋಟಿ ವ್ಯವಹಾರ ನಡೆಯುತ್ತದೆ. ಅದೇ ಕಾರಣಕ್ಕೆ ಇದನ್ನು ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಕರೆಯುತ್ತಾರೆ. ಆಟಗಾರರಿಗೆ ಕೋಟಿ ಕೋಟಿ ಸಂಭಾವನೆ, ಆಯೋಜಕರಿಗೆ, ಓಟಿಟಿ, ಟಿಟಿಯಲ್ಲಿ ಪ್ರಸಾರ ಮಾಡುವ ಸಂಸ್ಥೆಗಳಿಗೆ ನೂರಾರು ಕೋಟಿ ಆದಾಯ ಬರಲಿದೆ. ಅಂತಿಮವಾಗಿ ಗೆದ್ದ ತಂಡಕ್ಕೆ 20 ಕೋಟಿ ರೂ. ಬಹುಮಾನ ಸಿಗುತ್ತದೆ. ಆದರೆ ಅದಕ್ಕಾಗಿ ಫ್ರಾಂಚೈಸಿಗಳು ಅಂದಾಜು 200 ಕೋಟಿ ರೂಪಾಯಿಯನ್ನು ಆಟಗಾರರ ಖರೀದಿಗೆ, ತಂಡದ ನಿರ್ವಹಣೆಗೆ ವ್ಯಯಿಸುತ್ತಾರೆ.

ಫ್ರಾಂಚೈಸಿಗಳು ಹೂಡುವ 200 ಕೋಟಿ ರೂ. ಬಂಡವಾಳದ ಮುಂದೆ 20 ಕೋಟಿ ರೂ. ಬಹುಮಾನ ಏನೇನು ಅಲ್ಲ. ಆದರೆ ಬೇರೆ ಬೇರೆ ರೂಪದಲ್ಲಿ ಭಾರೀ ಆದಾಯ ಬರುತ್ತದೆ. ಕೆಲವೊಮ್ಮೆ ಟ್ರೋಫಿ ಗೆದ್ದ ತಂಡಕ್ಕಿಂತ ಬೇರೆ ತಂಡಗಳು ಹೆಚ್ಚಿನ ಲಾಭ ಮಾಡುವ ಉದಾಹರಣೆಯಿದೆ. ಐಪಿಎಲ್ ಮ್ಯಾಜಿಕ್ಕೇ ಅಂಥಾದ್ದು. ಮ್ಯಾಚ್ ಸ್ಪಾನ್ಸರ್‌ಶಿಪ್, ಟೈಟಲ್ ಸ್ಪಾನ್ಸರ್‌ಶಿಪ್, ಟಿವಿ ಹಾಗೂ ಓಟಿಟಿ ಪ್ರಸಾರದ ಹಕ್ಕು, ತಂಡದ ಜಾಹೀರಾತು, ಟಿಕೆಟ್ ಮಾರಾಟದಲ್ಲಿ ಪಾಲು, ಆಪ್‌ಗಳಲ್ಲಿ ಉತ್ಪನ್ನಗಳ ಮಾರಾಟ ಹೀಗೆ ಸಾಕಷ್ಟು ವಿಧದಲ್ಲಿ ಫ್ರಾಂಚೈಸಿಗಳು ಹಣ ಮಾಡುತ್ತಾರೆ.

ಕ್ರಿಕೆಟ್ ಆಡುವವರು, ಆಡಿಸುವವರು ಹಣ ಮಾಡುವುದು ಮಾತ್ರವಲ್ಲ, ಆಟ ನೋಡುವ ಕ್ರಿಕೆಟ್ ಪ್ರೇಮಿಗಳು ಬೆಟ್ಟಿಂಗ್ ಕಟ್ಟಿ ಹಣ ಮಾಡುವ ಸಾಹಸಕ್ಕೆ ಕೈ ಹಾಕುತ್ತಾರೆ. ಆದರೆ ಬೆಟ್ಟಿಂಗ್‌ನಲ್ಲಿ ಗೆಲ್ಲುವುದಕ್ಕಿಂತ ಸೋಲುವ ಅಪಾಯವೇ ಹೆಚ್ಚಾಗಿರುತ್ತದೆ. ಸಾಕಷ್ಟು ಜನ ಈ ಹಿಂದೆ ಕೂಡ ಐಪಿಎಲ್ ಪಂದ್ಯಗಳ ವೇಳೆ ಹಣ ಮಾಡುವ ದುರಾಸೆಗೆ ಬಿದ್ದು ಕಳೆದುಕೊಂಡಿದ್ದಾರೆ. ಇದರಿಂದ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಐಪಿಎಲ್‌ ವೇಳೆ ಬೆಟ್ಟಿಂಗ್ ಬೇಡ ಎಂದು ಈ ಹಿಂದೆ ನಟ ದರ್ಶನ್ ಮನವಿ ಮಾಡಿದ್ದರು.

2018ರಲ್ಲಿ ಅಂದರೆ 7 ವರ್ಷಗಳ ಹಿಂದೆ ಐಪಿಎಲ್‌ ಸೀಸನ್ 11 ನಡೆದಿತ್ತು. ಅದೇ ಸಮಯದಲ್ಲಿ ಯುವಕರ ತಂಡವೊಂದು 'ಐಪಿಎಲ್‌ ಗ್ಯಾಂಬ್ಲರ್ಸ್' ಎಂಬ ಶಾರ್ಟ್ ಫಿಲ್ಮ್ ಮಾಡಿದ್ದರು. ಅದನ್ನು ನಟ ದರ್ಶನ್ ಬಿಡುಗಡೆ ಮಾಡಿ ಶುಭಾಶಯ ಕೋರಿದ್ದರು. ಅದೇ ಸಮಯದಲ್ಲಿ ಕಿವಿಮಾತು ಹೇಳಿದ್ದರು. "ಐಪಿಎಲ್‌ ಶುರುವಾಗುತ್ತಿದ್ದಂತೆ ಎಲ್ಲರೂ ಬೆಟ್ಟಿಂಗ್‌ಗೆ ಮುಂದಾಗುತ್ತಾರೆ. ಮ್ಯಾಚ್ ನೋಡುವುದಕ್ಕಿಂತ ಹೆಚ್ಚು ಬೆಟ್ಟಿಂಗ್ ಕಟ್ಟುತ್ತಾರೆ. ಸಾಲ ಮಾಡಿ ಈ ಸಾಹಸ ಮಾಡ್ತಾರೆ, ದಯವಿಟ್ಟು ಐಪಿಎಲ್‌ನ ಒಂದು ಮ್ಯಾಚ್ ತರ ನೋಡಿ. ಎಂಜಾಯ್ ಮಾಡಿ" ಎಂದಿದ್ದರು.

"ಆಟಗಾರರು ಬಹಳ ಕಷ್ಟಪಟ್ಟು ಆಟ ಆಡುತ್ತಾರೆ. ಅವರವರ ತಂಡ ಗೆಲ್ಲಬೇಕು ಎನ್ನುವುದು ಅವರ ಲೆಕ್ಕಾಚಾರ, ಆದರೆ ನೀವು ನಿಮ್ಮ ಲೈಫ್ ಅನ್ನು ಹಾಳು ಮಾಡ್ಕೊಬೇಡಿ" ಎಂದು ದರ್ಶನ್ ಮನವಿ ಮಾಡಿದ್ದರು. ಸದ್ಯ ಐಪಿಎಲ್ ಸೀಸನ್ 18ರ ಹೊಸ್ತಿಲಲ್ಲಿ ದರ್ಶನ್ ಅಭಿಮಾನಿಗಳು ಈ ವೀಡಿಯೋ ವೈರಲ್ ಮಾಡುತ್ತಿದ್ದಾರೆ.

FAQs
ಸಿಸಿಎಲ್ ಪಂದ್ಯದಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ್ದ ದರ್ಶನ್

ನಟ ದರ್ಶನ್ ಕೆಲ ವರ್ಷಗಳ ಹಿಂದೆ ಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದರು. ಆಗ ದರ್ಶನ್-ಸುದೀಪ್ ಕುಚಿಕುಗಳಾಗಿದ್ದರು. ಬೆಂಗಾಲ್ ಟೈಗರ್ಸ್ ವಿರುದ್ಧದ ಪಂದ್ಯದಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ್ದ ದಾಸ ಯಾವುದೇ ವಿಕೆಟ್ ಇಲ್ಲದೇ 8 ರನ್ ನೀಡಿದ್ದರು.

Filmibeat Entertainment

More from Filmibeat

Read more about: darshan ipl 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X