'ದರ್ಶನ್‌ರನ್ನು ನೋಡಲೇಬೇಕು' ಎಂದು ಕಾದಿದ್ದ ಅಜ್ಜಿಯನ್ನು ಭೇಟಿ ಮಾಡಿದ ಡಿ-ಬಾಸ್

ಕಳೆದ ಅಕ್ಟೋಬರ್ ತಿಂಗಳಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಲೇಬೇಕು, ನನ್ನನ್ನು ಕರೆದುಕೊಂಡು ಹೋಗಿ ಎಂದು ದುಂಬಾಲು ಬೀಳುವ ಅಜ್ಜಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿತ್ತು.

Recommended Video

ದರ್ಶನ್ ಫಾರ್ಮ್ ಹೌಸ್ ಗೆ ಭೇಟಿ ನೀಡಿದ ಅಜ್ಜಿ. | Darshan

ಮೈಸೂರು ಮೂಲದ ಈ ಹಿರಿಯ ತಾಯಿ ದರ್ಶನ್ ಅವರನ್ನು ಹೇಗಾದರು ನೋಡಲೇಬೇಕು ಎಂದು ಆ ಊರಿನ ಯುವಕರ ಬಳಿ ಬೇಡಿಕೆಯಿಟ್ಟಿದ್ದರು. ದರ್ಶನ್ ಅವರು ಮೈಸೂರಿನಲ್ಲಿಲ್ಲ, ಬೆಂಗಳೂರಿನಲ್ಲಿದ್ದಾರೆ ಅಂದ್ರು, ''ಸರಿ ಬಾಡಿಗೆ ಕಾರ್ ಮಾಡ್ತೀನಿ, ಬೆಂಗಳೂರಿಗೆ ಹೋಗೋಣ, ನನ್ನದೊಂದು ಓಲೆ ಇದೆ, ಅಡಮಾನಯಿಟ್ಟು ದುಡ್ಡು ತರ್ತೀನಿ'' ಎಂದು ಹೇಳಿದ್ದರು.

ಕೊನೆಗೂ ಈ ಅಜ್ಜಿಯನ್ನು ಡಿ ಬಾಸ್ ಭೇಟಿ ಮಾಡಿದ್ದಾರೆ. ಮೈಸೂರಿನಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಭೇಟಿ ನೀಡಿದ ಅಜ್ಜಿ ದರ್ಶನ್ ಜೊತೆ ಮಾತನಾಡಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Old woman fan finally met challenging star darshan

ಈ ವೇಳೆ ದರ್ಶನ್ ಜೊತೆ ಮಾತನಾಡಿದ ಅಜ್ಜಿ ''ನಾನು ಯಾವಾಗಲೂ ಬರ್ತಾ ಇರ್ತೀನಿ, ನಿಮ್ಮವರನ್ನು ಒಳಗೆ ಬಿಡೋಕೆ ಹೇಳಿ'' ಎಂದು ಮನವಿ ಮಾಡಿಕೊಂಡರು. ದರ್ಶನ್ ಸಹ ಅದಕ್ಕೆ ಒಪ್ಪಿಗೆ ನೀಡಿದ್ದು, ಸರಿ ಎಂದರು.

ನಾನು ನಿನ್ನ ಚಿತ್ರಗಳನ್ನು ಮಾತ್ರ ನೋಡೋದು. ಬೇರೆ ಯಾವುದೇ ಸಿನಿಮಾ ನೋಡಲ್ಲ ಎಂದ ಅಜ್ಜಿಗೆ ''ಎಲ್ಲರ ಸಿನಿಮಾನೂ ನೋಡಬೇಕು ಅವ್ವ, ನೀವು 150 ಕೊಟ್ಟರೆ ಇನ್ನೊಂದಷ್ಟು ಬದುಕುತ್ತಾರೆ, ಎಲ್ಲರ ಸಿನಿಮಾ ನೋಡು'' ಎಂದರು.

'ನೀವು ಬರಬೇಕು ಎಂದಾಗ ರವಿ ಕರೆದುಕೊಂಡು ಬರ್ತೇನೆ ಹೋಗವ್ವ'' ಎಂದು ಹೇಳಿ ಕಳುಹಿಸಿದರು. ಇನ್ನು ಹೋಗುವ ಸಮಯದಲ್ಲಿ ಜೊತೆಯಲ್ಲಿದ್ದ ಯುವಕರು, ''ಚಿನ್ನ ಏನಾದರೂ ಅಡಮಾನ ಇಡ್ತಾರೆ ನೋಡ್ಕೊಳ್ಳ್ರಿ'' ಎಂದು ಕಿವಿಮಾತು ಹೇಳಿದರು.

More from Filmibeat

English summary
Viral Video: Old woman fan from mysore finally met challenging star darshan at farm house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X