twitter
    For Quick Alerts
    ALLOW NOTIFICATIONS  
    For Daily Alerts

    ಆನ್‌ಲೈನ್‌ನಲ್ಲಿ ಹನಿಮೂನ್ ಮಾಡಿದ್ರೆ ಮಕ್ಕಳಾಗುತ್ತಾ?: ಪ್ರಥಮ್ ಪ್ರಶ್ನೆ

    |

    ಲಾಕ್ ಡೌನ್ ಅವಧಿಯಲ್ಲಿ ಎಲ್ಲವೂ ಆನ್‌ಲೈನ್‌ನಲ್ಲಿಯೇ ನಡೆಯುತ್ತಿದೆ. ಆಫೀಸ್‌ನ ಮೀಟಿಂಗ್, ಕಷ್ಟ-ಸುಖದ ಹರಟೆ, ಸಿನಿಮಾ ವೀಕ್ಷಣೆ, ಜನರ ಜತೆಗೆ ಹರಟೆ ಎಲ್ಲವೂ ಆನ್‌ಲೈನ್‌ನಲ್ಲಿಯೇ. ಅನೇಕರು ಆನ್‌ಲೈನ್‌ನಲ್ಲಿಯೇ ವಿಡಿಯೋ ಮೂಲಕ ಮದುವೆಯನ್ನೂ ಮಾಡಿದ್ದಾರೆ. ಶಾಲೆಗಳು ಮುಚ್ಚಿರುವುದರಿಂದ ಮಕ್ಕಳ ಪಾಠ ಮುಂದುವರಿಸಲು ಶಾಲೆಗಳು ಆನ್‌ಲೈನ್ ಟೀಚಿಂಗ್ ಶುರುಮಾಡಿವೆ.

    Recommended Video

    ನಟಭಯಂಕರ ಪ್ರಥಮ್ 300 ಕುಟುಂಬಗಳಿಗೆ ಉಚಿತ ತರಕಾರಿ ವಿತರಣೆ | Pratham | Natabayankara Workout

    ಮಕ್ಕಳು ಮೊಬೈಲ್ ಮುಂದಿಟ್ಟುಕೊಂಡು ಶಿಕ್ಷಕರು ಮಾಡುವ ಪಾಠ ಕೇಳಿಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿಯೇ ಅಸೈನ್‌ಮೆಂಟ್, ಹೋಂವರ್ಕ್ ಮಾಡಿ ತೋರಿಸಬೇಕು. ಇನ್ನು ಪರೀಕ್ಷೆಗಳೂ ಆನ್‌ಲೈನ್‌ನಲ್ಲಿಯೇ ನಡೆಯುತ್ತಿವೆ. ಹೀಗೆ ಎಲ್ಲದಕ್ಕೂ ಆನ್‌ಲೈನ್ ಮೊರೆ ಹೋಗಲಾಗುತ್ತಿದೆ. ಆದರೆ ನಿಜವಾದ ಸಂಕಷ್ಟ ಅನುಭವಿಸುತ್ತಿರುವುದು ದೂರದ ಊರಲ್ಲಿ ಇರುವ ಮಕ್ಕಳು. ಅವರಿಗೆ ಶಾಲೆಯೂ ಇಲ್ಲ, ಆನ್ ಲೈನ್ ಪಾಠ ಕೇಳಲು ನೆಟ್‌ವರ್ಕ್ ಕೂಡ ಇರುವುದಿಲ್ಲ. ಈ ಪರಿಸ್ಥಿತಿಯ ವ್ಯಂಗ್ಯವನ್ನು ಬಿಗ್ ಬಾಸ್ ಸ್ಪರ್ಧಿ, ನಟ ಒಳ್ಳೆ ಹುಡುಗ ಪ್ರಥಮ್ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಮುಂದೆ ಓದಿ...

    ಪ್ರಥಮ್ ಮನವಿಗೆ ಸ್ಪಂದಿಸಿದ ಸಾ.ರಾ.ಮಹೇಶ್: ದಿನಸಿ ಕಿಟ್ ವಿತರಣೆಪ್ರಥಮ್ ಮನವಿಗೆ ಸ್ಪಂದಿಸಿದ ಸಾ.ರಾ.ಮಹೇಶ್: ದಿನಸಿ ಕಿಟ್ ವಿತರಣೆ

    ತರಗತಿಯಲ್ಲಿಯೇ ಅರ್ಥವಾಗೊಲ್ಲ

    ತರಗತಿಯಲ್ಲಿಯೇ ಅರ್ಥವಾಗೊಲ್ಲ

    ಶಾಲೆಗಳಲ್ಲಿ ಮಾಮೂಲಿಯಾಗಿ ತರಗತಿಗಳು ನಡೆಯುವಾಗ ವಿದ್ಯಾರ್ಥಿಗಳ ಮುಂದೆಯೇ ನಿಂತು ಶಿಕ್ಷಕರು ಪಾಠ ಮಾಡಿದಾಗ ಅದು ಮಕ್ಕಳ ತಲೆಗೆ ಹತ್ತೋದು ಕಷ್ಟ. ಇನ್ನು ಆನ್‌ಲೈನ್‌ನಲ್ಲಿ ಪಾಠ ಕೇಳಿ ಪರೀಕ್ಷೆ ಬರೆದರೆ ದೇವರಿಗೇ ಪ್ರೀತಿ ಎಂದು ಪ್ರಥಮ್ ಹೇಳಿದ್ದಾರೆ.

    ನೆಟ್‌ವರ್ಕ್ ಸಮಸ್ಯೆ ಇರುತ್ತದೆ

    ನೆಟ್‌ವರ್ಕ್ ಸಮಸ್ಯೆ ಇರುತ್ತದೆ

    ಹಳ್ಳಿಗಾಡು ಪ್ರದೇಶಗಳಲ್ಲಿ ಕರೆಂಟ್, ಮೊಬೈಲ್, ನೆಟ್‌ವರ್ಕ್ ಮುಂತಾದ ಸೌಲಭ್ಯಗಳು ಸಿಗುವುದು ಕಷ್ಟ. ಅಂತಹವರಿಗಾಗಿ ಪ್ರಥಮ್ ಮಿಡಿದಿದ್ದಾರೆ. ಹಳ್ಳಿಯಲ್ಲಿ ನೆಟ್ ವರ್ಕ್ ಸಮಸ್ಯೆ ಇರುತ್ತದೆ. ಮಕ್ಕಳು ಅಲ್ಲಿ ತರಗತಿಗಳಿಗೆ ಆನ್‌ಲೈನ್‌ನಲ್ಲಿ ಹಾಜರಾಗುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

    ಆನ್‌ಲೈನ್‌ ಹನಿಮೂನು

    ಆನ್‌ಲೈನ್‌ ಹನಿಮೂನು

    ಆನ್‌ಲೈನ್‌ನಲ್ಲಿ ಹನಿಮೂನ್ ಮಾಡಿದರೆ ಮಕ್ಕಳಾಗುತ್ತದೆಯೇ? ಎಂದು ಪ್ರಥಮ್ ಕೇಳಿದ್ದಾರೆ. ಆನ್‌ಲೈನ್‌ನಲ್ಲಿ ಮಾಡುವ ಪಾಠಗಳು ಮಕ್ಕಳಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಈ ತರಗತಿಗಳಿಂದ ಪ್ರಯೋಜನವಿಲ್ಲ. ಇದು ಆನ್‌ಲೈನ್‌ನಲ್ಲಿಯೇ ಹನಿಮೂನ್ ಮಾಡಿ ಮಕ್ಕಳು ಬೇಕು ಎಂದರೆ ಹೇಗೆ ಆಗುತ್ತದೆ ಎಂಬಂತೆ ಇದೆ ಎಂದು ಪ್ರಥಮ್ ಹೋಲಿಸಿದ್ದಾರೆ.

    'ನಟ ಭಯಂಕರ'ನಿಗೆ ಸಾಥ್ ನೀಡಿದ ಧ್ರುವ ಸರ್ಜಾಗೆ ವಿಶೇಷ ಗಿಫ್ಟ್ ಕೊಟ್ಟ ಪ್ರಥಮ್?'ನಟ ಭಯಂಕರ'ನಿಗೆ ಸಾಥ್ ನೀಡಿದ ಧ್ರುವ ಸರ್ಜಾಗೆ ವಿಶೇಷ ಗಿಫ್ಟ್ ಕೊಟ್ಟ ಪ್ರಥಮ್?

    ದೇವರೇ ಕಾಪಾಡಬೇಕು

    ದೇವರೇ ಕಾಪಾಡಬೇಕು

    15 ದಿನ ಮಾಮೂಲಿ ತರಗತಿಗಳು ನಡೆದು, ಇನ್ನೆಲ್ಲಾ ಅದೇನೋ ಆನ್‌ಲೈನ್‌ನಲ್ಲಿ ಪಾಠ ಮುಗಿಸ್ತೀನಿ ಅಂದರೆ ಮಕ್ಕಳು ಹೇಗೆ ಪಾಸ್ ಆಗ್ತಾರೆ? ಹಳ್ಳಿಯಲ್ಲಿ ನೆಟ್‌ವರ್ಕ್ ಸಮಸ್ಯೆ ಇರುತ್ತೆ, ಆಡಿಯೋ ವಿಡಿಯೋ ಸಿಂಕ್ ಆಗಲ್ಲ...! ದೇವರೇ ಕಾಪಾಡಬೇಕು ವಿದ್ಯಾರ್ಥಿಗಳ ಹಣೆಬರಹ ಎಂದು ಹೇಳಿದ್ದಾರೆ.

    English summary
    Actor Olle Hudga Pratham expressed deep concern about the students who are attending online classes.
    Thursday, May 21, 2020, 20:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X