ಯಶ್ ಬಾಡಿಗೆ ಮನೆ ರಗಳೆ: ಪ್ರಥಮ್ ಬಾಯಿಂದ ಬಂದ ಮಾತಿದು.!
Recommended Video

ಬನಶಂಕರಿಯಲ್ಲಿರುವ ತಮ್ಮ ಬಾಡಿಗೆ ಮನೆ ಕುರಿತ ವಿವಾದ ಭುಗಿಲೆದ್ದು ಮೂರು ವರ್ಷಗಳಾದರೂ, ಇಷ್ಟು ದಿನ ಯಾವುದೇ ಪತ್ರಿಕೆಗಾಗಲಿ, ನ್ಯೂಸ್ ಚಾನೆಲ್ ಗಾಗಲಿ ನಟ ಯಶ್ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.
ಬಾಕಿ ಉಳಿಸಿಕೊಂಡಿರುವ ಬಾಡಿಗೆ ಹಣ ಕೊಟ್ಟು ಮೂರು ತಿಂಗಳಲ್ಲಿ ಮನೆ ಖಾಲಿ ಮಾಡಿ ಎಂದು ಸಿಟಿ ಸಿವಿಲ್ ಕೋರ್ಟ್ ನಿನ್ನೆ ಯಶ್ ಕುಟುಂಬಕ್ಕೆ ಆದೇಶ ನೀಡಿದ್ಮೇಲೆ ಇಂದು ಫೇಸ್ ಬುಕ್ ಲೈವ್ ಮಾಡಿ ಮನಬಿಚ್ಚಿ ಮಾತನಾಡಿದರು ನಟ ಯಶ್.
''ಒಂದು ತಿಂಗಳು ಕೂಡ ಮಿಸ್ ಮಾಡದೆ ಬಾಡಿಗೆ ಕೊಟ್ಟಿದ್ದರೂ, ಮನೆ ಮಾಲೀಕರು ಸುಳ್ಳು ಆರೋಪ ಮಾಡುತ್ತಿದ್ದಾರೆ'' ಎಂದು ನಟ ಯಶ್ ಫೇಸ್ ಬುಕ್ ಲೈವ್ ನಲ್ಲಿ ಹೇಳಿದ್ದಾರೆ.

ಫೇಸ್ ಬುಕ್ ಲೈವ್ ನಲ್ಲಿ ಯಶ್ ಮಾತುಗಳನ್ನು ಕೇಳಿದ್ಮೇಲೆ, ''ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ 2 ವರ್ಷದಿಂದ ಯಶ್ ರವರ ಒಂದು ರೂಮ್ ಇದೆ. ಅದರ ತಿಂಗಳ ಬಾಡಿಗೆಯೇ 6 ಲಕ್ಷಕ್ಕೂ ಹೆಚ್ಚು. ಆ ಹೋಟೆಲ್ ನಲ್ಲಿ ಯಶ್ ಯಾಕೆ ರೂಮ್ ಮಾಡಿದ್ದಾರೆ ಗೊತ್ತಾ.? ಸಿನಿಮಾದವರು ಬಂದರೆ ಕೂಡಿಸಿ ಮಾತಾಡೋಕೆ, ಹೊಸಬರನ್ನ ಪ್ರೋತ್ಸಾಹಿಸೋಕೆ, ತನ್ನ ಆಪ್ತ ಸ್ನೇಹಿತರ ಜೊತೆ ಕ್ರಿಕೆಟ್ ಆಡೋಕೆ... 6 ಲಕ್ಷ ಬರಿ ಹೊಸಬರನ್ನ ಪ್ರೋತ್ಸಾಹಿಸೋಕೆ ಬಾಡಿಗೆ ಕಟ್ಟೋ ಯಶ್, ತನ್ನ ಮನೆಗೆ ಬಾಡಿಗೆ ಕಟ್ಟೋಕೆ ದುಡ್ಡಿಲ್ಲ...ಇದನ್ನ ಜನ ನಂಬಬೇಕು'' ಎಂದು ಒಳ್ಳೆ ಹುಡುಗ ಪ್ರಥಮ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
''ಒಂದು ಚಿತ್ರಕ್ಕೆ ಯಶ್ ಗೆ ಬರುವ ಸಂಭಾವನೆಯಲ್ಲಿ ಎರಡು ಮನೆ ಕೊಂಡುಕೊಳ್ಳಬಹುದು. ಅಂಥದ್ರಲ್ಲಿ ಮನೆ ಬಾಡಿಗೆ ಕೊಡೋಕೆ ದುಡ್ಡಿಲ್ಲ ಎಂಬ ಆಪಾದನೆ ಇದೆ. ಯಶ್ ಒಳ್ಳೆಯ ಮನುಷ್ಯ. ದಯವಿಟ್ಟು ಕಾಲೆಳೆಯಬೇಡಿ'' ಎಂದು ಪ್ರಥಮ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯಶ್ ಬಗ್ಗೆ ಪ್ರಥಮ್ ಮಾಡಿರುವ ಪೋಸ್ಟ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...


Click it and Unblock the Notifications











