ಯಶ್-ರಾಧಿಕಾ ಬಗ್ಗೆ 'ಒಳ್ಳೆ ಹುಡುಗ' ಪ್ರಥಮ್ ಗೊಂದೊಳ್ಳೆ ಆಸೆ ಇದೆ.! ಏನ್ಗೊತ್ತಾ.?
Recommended Video

ಯದ್ವಾತದ್ವಾ ಮಾತನಾಡಿ, ಎಲ್ಲರ ಬಾಯಿ ಮುಚ್ಚಿಸಿ, ಮಾತಲ್ಲೇ ಎಲ್ಲರನ್ನೂ ಸೋಲಿಸಿ 'ಬಿಗ್ ಬಾಸ್' ಟ್ರೋಫಿ ಗೆದ್ದ ಮಾತಿನ ಮಲ್ಲ 'ಒಳ್ಳೆ ಹುಡುಗ' ಪ್ರಥಮ್. ತಮ್ಮ ಮಾತುಗಳಿಂದಲೇ ಜನಪ್ರಿಯತೆ ಪಡೆದ ಪ್ರಥಮ್, ಅದೇ ಮಾತುಗಳಿಂದ ಟ್ರೋಲ್ ಆಗಿದ್ದೂ ಇದೆ.
ಇಂತಿಪ್ಪ ಪ್ರಥಮ್ ಗೆ ರಾಕಿಂಗ್ ಸ್ಟಾರ್ ಯಶ್ ಕಂಡ್ರೆ ಸಖತ್ ಇಷ್ಟ, ಸಿಕ್ಕಾಪಟ್ಟೆ ಅಭಿಮಾನ. ಯಶ್ ಬಗ್ಗೆ ಆಗಾಗ ಫೇಸ್ ಬುಕ್ ನಲ್ಲಿ ಬರೆಯುತ್ತಲೇ ಇರುವ ಪ್ರಥಮ್, ಇದೀಗ ಯಶ್ ಹಾಗೂ ರಾಧಿಕಾ ಪಂಡಿತ್ ಬಗ್ಗೆ ತಮಗಿರುವ ಒಂದು ಅಸೆಯನ್ನ ವ್ಯಕ್ತಪಡಿಸಿದ್ದಾರೆ.
''ಕನ್ನಡ ಚಿತ್ರರಂಗವನ್ನ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಕೆಪಾಸಿಟಿ ಇರುವ ಯಶ್ ರವರ ಆಟಿಟ್ಯೂಡ್ ಅಂದ್ರೆ ನನಗೆ ಸಖತ್ ಇಷ್ಟ. ಕಳೆದ ವರ್ಷ ಯಶ್ ಅವರ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಆದ್ರೆ, ಈ ವರ್ಷ ಯಶ್ ಕೆ.ಜಿ.ಎಫ್ ರಿಲೀಸ್ ಮಾಡಿದ್ರೆ, ನಮ್ಮ ರಾಧಿಕಾ ಪಂಡಿತ್ ಡಿಸೆಂಬರ್ ಗೆ 'ವೈ.ಜಿ.ಎಫ್' ರಿಲೀಸ್ ಮಾಡ್ತಿದ್ದಾರೆ. ನನಗೆ ದುರಾಸೆ ಏನಿಲ್ಲ ಗುರು.. ಸಣ್ಣ ಆಸೆ ಅಷ್ಟೇ. KGF ಪಾರ್ಟ್ 1&2 ಬರಲಿ. YGF ಅವಳಿ-ಜವಳಿ ಹುಟ್ಟಲಿ... ಅಷ್ಟೇ ಇನ್ನೇನೂ ಆಸೆ ಇಲ್ಲ'' ಎಂದು ಫೇಸ್ ಬುಕ್ ನಲ್ಲಿ ಒಳ್ಳೆ ಹುಡುಗ ಪ್ರಥಮ್ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ತಮ್ಮ ಮೊದಲ ಮಗುವನ್ನ ನಿರೀಕ್ಷೆ ಮಾಡುತ್ತಿರುವ ವಿಷಯವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಅಂದು ಯಶ್ ಹಾಗೂ ರಾಧಿಕಾ ಪಂಡಿತ್ ಗೆ ಶುಭ ಕೋರಿದ್ದ ಪ್ರಥಮ್, ಇಂದು ಈ ರೀತಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಹಾಗ್ನೋಡಿದ್ರೆ, ಯಶ್-ರಾಧಿಕಾ ಪಂಡಿತ್ ಗೆ ಅವಳಿ-ಜವಳಿ ಮಕ್ಕಳಾಗಲಿ ಅಂತ ಪ್ರಥಮ್ ಹಾರೈಸುತ್ತಿರುವುದು ಇದು ಎರಡನೇ/ಮೂರನೇ ಬಾರಿ.

ಸದ್ಯ ನಟ ಯಶ್ 'ಕೆ.ಜಿ.ಎಫ್' ಚಿತ್ರದ ಸ್ಪೆಷಲ್ ಸಾಂಗ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 'ಜೋಕೆ ನಾನು ಬಳ್ಳಿಯ ಮಿಂಚು...' ಹಾಡಿನ ರೀಮಿಕ್ಸ್ ವರ್ಷನ್ ನಲ್ಲಿ ಯಶ್ ಜೊತೆಗೆ ತಮನ್ನಾ ಹೆಜ್ಜೆ ಹಾಕುತ್ತಿದ್ದಾರೆ. ಈ ಹಾಡಿನ ಪೋಸ್ಟರ್ ನ ಹಾಕುವ ಜೊತೆಗೆ YGF ಬಗ್ಗೆ ತಮಗಿರುವ ಆಸೆಯನ್ನ ಪ್ರಥಮ್ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ, ಏನಿದು YGF ಅಂತ ತಲೆಗೆ ಹುಳ ಬಿಟ್ಟುಕೊಳ್ಳುವ ಮುನ್ನ ''Yash Going to be Father'' ಅನ್ನೋದು ನಿಮಗೆ ಗೊತ್ತಿರಲಿ.


Click it and Unblock the Notifications











