'ಪ್ರೇಮಿಗಳ ದಿನ'ವಾದ ಇಂದು 'ಒಳ್ಳೆ ಹುಡುಗ' ಪ್ರಥಮ್ ಏನ್ ಮಾಡಿದ್ರು ಗೊತ್ತಾ.?

By Harshitha

Recommended Video

ಪ್ರೇಮಿಗಳ ದಿನದಂದು ಪ್ರಥಮ್ ಎಲ್ಲ ಹುಡುಗರಿಗೂ ಕೊಟ್ಟ ಸಂದೇಶ | Filmibeat Kannada

ತಮ್ಮನ್ನ ತಾವೇ 'ಒಳ್ಳೆ ಹುಡುಗ' ಅಂತ ಘೋಷಿಸಿಕೊಂಡಿರುವ ಪ್ರಥಮ್, 'ಬಿಗ್ ಬಾಸ್' ಮನೆಯೊಳಗೆ ಇದ್ದಾಗ ನಟಿ ಸಂಜನಾಗೆ ಲೈನ್ ಹೊಡೆದಿದ್ದರು. ''ಸೂಪರ್ ಹುಡುಗನಿಗೆ ಸುಮಾರಾಗಿರೋ ಹುಡುಗಿ ಮೇಲೆ ಲವ್ ಆಗಿದೆ'' ಅಂತೆಲ್ಲ 'ಬಿಗ್ ಬಾಸ್' ಶೋನಲ್ಲಿ ಪ್ರೇಮ್ ಕಹಾನಿ ಶುರು ಮಾಡಿಕೊಂಡಿದ್ದ ಪ್ರಥಮ್, ರಿಯಾಲಿಟಿ ಶೋದಿಂದ ರಿಯಾಲಿಟಿಗೆ ಬಂದ್ಮೇಲೆ 'ಪ್ರೀತಿ, ಪ್ರೇಮ'ದ ಬಗ್ಗೆ ಮಾತನಾಡಿದ್ದೇ ಕಮ್ಮಿ.

ಸಾಮಾಜಿಕ ಕಳಕಳಿ ಹೊಂದಿರುವ ಪ್ರಥಮ್, ಒಂದೊಂದೇ ಒಳ್ಳೆಯ ಕೆಲಸಗಳನ್ನು ಮಾಡುತ್ತಲೇ ಬರ್ತಿದ್ದಾರೆ. ಇಂದು ಪ್ರೇಮಿಗಳ ದಿನ ಬೇರೆ. ವ್ಯಾಲೆಂಟೈನ್ಸ್ ಡೇ ಆದ ಇವತ್ತು ಪ್ರಥಮ್ ಏನ್ ಮಾಡಿದ್ದಾರೆ ಗೊತ್ತಾ.?

ಇಂದು ಪ್ರಥಮ್ ಮಾಡಿರುವ ಒಂದೊಳ್ಳೆ ಕೆಲಸ ಏನು ಅಂತ ಗೊತ್ತಾದ್ರೆ, ಖಂಡಿತ ನೀವು ಬಾಯಿ ಮೇಲೆ ಬೆರಳಿಡ್ತೀರಾ.! ಪ್ರಥಮ್ ಅಂಥದ್ದೇನು ಮಾಡಿದ್ರು ಅಂತೀರಾ.? ಪೂರ್ತಿ ವರದಿ ಓದಿರಿ..

ಅಮ್ಮನಿಗೆ ಉಡುಗೊರೆ ಕೊಟ್ಟ ಒಳ್ಳೆಯ ಹುಡುಗ

ಅಮ್ಮನಿಗೆ ಉಡುಗೊರೆ ಕೊಟ್ಟ ಒಳ್ಳೆಯ ಹುಡುಗ

ಪ್ರೇಮಿಗಳ ದಿನವಾದ ಇಂದು ತಮ್ಮ ತಾಯಿಗೆ ಉಡುಗೊರೆ ಕೊಟ್ಟಿದ್ದಾರೆ ಒಳ್ಳೆ ಹುಡುಗ ಪ್ರಥಮ್. ತಮ್ಮ ಅಮ್ಮನಿಗೆ ಫೋನ್ ಒಂದನ್ನ ಗಿಫ್ಟ್ ಆಗಿ ನೀಡಿದ್ದಾರೆ ಪ್ರಥಮ್.

ಹುಡುಗರಿಗೆ ಪ್ರಥಮ್ ನೀಡಿರುವ ಸಂದೇಶ ಏನು.?

ಹುಡುಗರಿಗೆ ಪ್ರಥಮ್ ನೀಡಿರುವ ಸಂದೇಶ ಏನು.?

''ಸುಮ್ನೆ ಹುಡುಗಿಯರಿಗೆ ವ್ಯಾಲೆಂಟೈನ್ಸ್ ಡೇ ಅಂತ ದುಡ್ಡು ಖರ್ಚು ಮಾಡಿ ವೇಸ್ಟ್ ಮಾಡುವ ಬದಲು ನಿಮ್ಮಮ್ಮನಿಗೆ ಒಂದು ಸೀರೆ ಕೊಡಿ. ಈ ತರಹ ನೀವು ಪ್ರೇಮಿಗಳ ದಿನ ಸೆಲೆಬ್ರೇಟ್ ಮಾಡಿ'' ಅಂತ ಪ್ರೇಮಿಗಳ ದಿನ ಪ್ರಥಮ್ ಎಲ್ಲ ಹುಡುಗರಿಗೂ ಸಂದೇಶ ನೀಡಿದ್ದಾರೆ.

ಪ್ರೀತಿಸುವ ಪೋಷಕರಿಗೆ ಏನಾದರೂ ಮಾಡಿ...

ಪ್ರೀತಿಸುವ ಪೋಷಕರಿಗೆ ಏನಾದರೂ ಮಾಡಿ...

''ನಿಮ್ಮ ಪ್ರೀತಿ ತೋರಿಸಿಕೊಳ್ಳೋಕೆ ಒಂದೇ ದಿನಕ್ಕೆ ಮೀಸಲು ಮಾಡಬೇಡಿ. ನಿಮ್ಮನ್ನ ಪ್ರೀತಿಸುವ ಪೋಷಕರಿಗೆ ಏನಾದರೂ ಮಾಡಿ'' ಅಂತ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ ಪ್ರಥಮ್.

ಪ್ರಥಮ್ ತಾಯಿಗೆ ಫುಲ್ ಖುಷಿ

ಪ್ರಥಮ್ ತಾಯಿಗೆ ಫುಲ್ ಖುಷಿ

ಅಂದ್ಹಾಗೆ, ತಮ್ಮ ಮಗ ತಮಗೆ ಫೋನ್ ಕೊಡಿಸಿದ್ದಕ್ಕೆ ಪ್ರಥಮ್ ತಾಯಿ ಫುಲ್ ಖುಷಿಯಾಗಿದ್ದಾರೆ.

More from Filmibeat

English summary
Olle Huduga Pratham gifts a mobile phone to his mother on Valentine's Day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X