For Quick Alerts
  ALLOW NOTIFICATIONS  
  For Daily Alerts

  ಸಾರ್ವಕಾಲಿಕ ದಾಖಲೆಯ 'ಓಂ' ಸಿನಿಮಾ ಯೂಟ್ಯೂಬ್ ಗೆ ಬಂತು!

  By Naveen
  |
  ಓಂ, ಬ್ಲಾಕ್ ಬಸ್ಟರ್ ಕನ್ನಡ ಸಿನಿಮಾ ಯುಟ್ಯೂಬ್ ಗೆ ಎಂಟ್ರಿ | Filmibeat Kannada

  'ಓಂ' ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸರ್ವಾಕಾಲಿಕ ದಾಖಲೆಯ ನಿರ್ಮಿಸಿರುವ ಸಿನಿಮಾ. ಈ ಸಿನಿಮಾ ಈಗ ಯೂಟ್ಯೂಬ್ ನಲ್ಲಿ ಬಂದಿದೆ. ಶ್ರೀ ಗಣೇಶ್ ವಿಡಿಯೋಸ್ ಯೂಟ್ಯೂಬ್ ಚಾನಲ್ ನಲ್ಲಿ ಈಗ 'ಓಂ' ಸಂಪೂರ್ಣ ಸಿನಿಮಾ ಲಭ್ಯವಿದೆ.

   'ಓಂ' ಚಿತ್ರದ ಆಡಿಯೋ ಬಿಡುಗಡೆಯ ಈ ಫೋಟೋ ಹಿಂದಿನ ಕಥೆ ಕೇಳಿ... 'ಓಂ' ಚಿತ್ರದ ಆಡಿಯೋ ಬಿಡುಗಡೆಯ ಈ ಫೋಟೋ ಹಿಂದಿನ ಕಥೆ ಕೇಳಿ...

  'ಓಂ' ಸಿನಿಮಾದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಅದೊಂದು ಮಾಸ್ಟರ್ ಫೀಸ್ ಸಿನಿಮಾ. ಹಿಂದೆ ಬಂದಿಲ್ಲ ಮುಂದೆ ಬರಲ್ಲ ಅಂತ್ತಾರಲ್ಲ ಆ ರೀತಿ... ಡೈರೆಕ್ಟರ್ ಕ್ಯಾಪ್ ತೊಟ್ಟ ಉಪೇಂದ್ರ ಈ ಚಿತ್ರದಲ್ಲಿ ಜಾದು ಮಾಡಿದ್ದರು. ಶಿವರಾಜ್ ಕುಮಾರ್ ಸತ್ಯನಾಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಈಗ ರಿಲೀಸ್ ಆದರು ಹೌಸ್ ಫುಲ್ ಬೋರ್ಡ್ ಬೀಳುವ ಪವರ್ ಈ ಸಿನಿಮಾಗೆ ಇದೆ. ಜೊತೆಗೆ ಭಾರತದಲ್ಲಿಯೇ ಮೊದಲ ಅಂಡರ್ ವಲ್ಡ್ ಸಿನಿಮಾ ಇದಾಗಿದೆ.

  ಇಷ್ಟು ದಿನ ಕರ್ನಾಟಕದ ಅನೇಕ ಚಿತ್ರಮಂದಿರಗಳಲ್ಲಿ 550ಕ್ಕೂ ಹೆಚ್ಚು ಬಾರಿ ಈ ಸಿನಿಮಾ ರಿ ರಿಲೀಸ್ ಆಗಿತ್ತು. ಉದಯ ಟಿವಿಯಲ್ಲಿಯೂ ಸಿನಿಮಾ ಪ್ರಸಾರ ಆಗಿತ್ತು. ಆದರೆ ಈಗ ಇದೇ ಮೊದಲ ಬಾರಿಗೆ ಸಿನಿಮಾ ಯೂ ಟ್ಯೂಬ್ ಗೆ ಎಂಟ್ರಿ ಕೊಟ್ಟಿದೆ. ಇನ್ನು 'ಓಂ' ಚಿತ್ರ ರಾಜ್ ಅವರ ಪೂರ್ಣಿಮಾ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು. ಪ್ರೇಮ ಚಿತ್ರದಲ್ಲಿ ನಾಯಕಿ ಆಗಿದ್ದರು. 'ಓಂ' ಸಿನಿಮಾದ ಹಾಡುಗಳು ಹಂಸಲೇಖ ಅವರನ್ನು ಇನಷ್ಟೂ ಎತ್ತರಕ್ಕೆ ತೆಗೆದುಕೊಂಡು ಹೋಯಿತು. ಈ ಚಿತ್ರದ ಎಲ್ಲ ಹಾಡುಗಳನ್ನು ಹಂಸಲೇಖ ಅವರೇ ಬರೆದು ಸಂಗೀತ ನೀಡಿದ್ದರು.

  English summary
  Kannada actor Shivaraj Kumar's 'OM' kannada movie in Youtube now. The movie directed by upendra and produced by Parvathamma Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X