ಅನಿಮೇಷನ್ ಸಿನಿಮಾ ಮಾಡುತ್ತಿದ್ದ ಉದ್ಯಮಿ ಕುಟುಂಬ ಆತ್ಮಹತ್ಯೆ

ಅನಿಮೇಷನ್ ಸಿನಿಮಾ ಮಾಡಬೇಕು ಎಂದು ಕನಸು ಕಂಡಿದ್ದ ಮೈಸೂರಿನ ಓಂ ಪ್ರಕಾಶ್ ಜೀವ ಕಳೆದುಕೊಂಡಿದ್ದಾರೆ. ರಾಜ್ ಕುಮಾರ್, ಶಂಕರ್ ನಾಗ್, ವಜ್ರಮುನಿ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ನಟರ ಸಿನಿಮಾಗಳನ್ನು ಅನಿಮೇಷನ್ ಮಾಡಬೇಕು ಎನ್ನುವುದು ಓಂ ಪ್ರಕಾಶ್ ಆಸೆ ಆಗಿತ್ತು.

ಮೈಸೂರಿನ ಜಿ.ವಿ. ಇನ್‌ಫೋಟೆಕ್ ಕಂಪನಿ ನಡೆಸುತ್ತಿದ್ದ ಓಂ ಪ್ರಕಾಶ್ ತಮಿಳಿನ ಅನಿಮೇಷನ್ ಸಿನಿಮಾ 'ಕೊಚ್ಚಾಡಿಯನ್' ಮಾದರಿಯಲ್ಲಿ ಕನ್ನಡದಲ್ಲಿ ಒಂದು ಸಿನಿಮಾ ಮಾಡಲು ತಯಾರಿ ನಡೆಸಿದ್ದರು. ಹೀಗಾಗಿ, 60 ಲಕ್ಷ ಬಂಡವಾಳ ಹಾಕಿದ್ದರು. ಆದರೆ, ಕಲಾವಿದ ಹಾಗೂ ತಂತ್ರಜ್ಞರು ಕೈ ಕೊಟ್ಟ ಕಾರಣ ಸಿನಿಮಾ ಅರ್ಧ ನಿಂತು ಹೋಯ್ತು.

Om Prakash Committed Suicide Along With His Family

ಐವರು ಮೃತರನ್ನು ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾಗಿರುವ ಓಂ ಪ್ರಕಾಶ್, ಪತ್ನಿ ನಿಖಿತಾ, ಮಗ ಆರ್ಯ ಕೃಷ್ಣ, ತಾಯಿ ಹೇಮಲತಾ, ತಂದೆ ನಾಗರಾಜು ಭಟ್ಟಚಾರ್ಯ ಎಂದು ಗುರುತಿಸಲಾಗಿದೆ. ಹಣಕಾಸಿನ ತೊಂದರೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಈ ಕುಟುಂಬದ ಸಾವಿನ ಸುತ್ತ ಅನುಮಾನಗಳು ಕಂಡುಬರುತ್ತಿದೆ.

ಸಾಲಗಾರರ ಕಾಟ ತಾಳಲಾರದೆ ಓಂ ಪ್ರಕಾಶ್ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಆತ್ಮಹತ್ಯೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಓಂ ಪ್ರಕಾಶ್ ಸಾವಿನ ಸಂಗತಿಯನ್ನು ಲಾಯರ್ ಅಮರೇಶ್ ತಿಳಿಸಿದ್ದಾರೆ.

More from Filmibeat

English summary
Om Prakash committed suicide along with his family in Mysore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X